Advertisement
20 ಕಡೆ ಸ್ವಂತ ಕಟ್ಟಡವಿದ್ದು, ಉಳಿದ ಕಡೆ ಗ್ರಾಪಂ ನೀಡಿದ ಉಚಿತ ಕಟ್ಟಡದಲ್ಲಿ ನಡೆಯುತ್ತಿದೆ. ಇಷ್ಟು ದಿನ ಇಲಾಖೆಯಿಂದಲೇ ವೇತನ ನೀಡಲಾಗುತ್ತಿತ್ತು, ಸರಕಾರ ಗ್ರಂಥಾಲಯಗಳನ್ನು ಮತ್ತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುಪರ್ದಿಗೆ ವಹಿಸಲು ಸಿದ್ಧತೆ ನಡೆಸುತ್ತಿದ್ದು ಇನ್ಮುಂದೆ ಗ್ರಾಪಂಗಳಿಂದಲೇ ಗ್ರಂಥಪಾಲಕರಿಗೆ ಸಂಬಳ ಪಾವತಿಯಾಗಲಿದೆ.
Related Articles
Advertisement
ರಾಜ್ಯದಲ್ಲಿ ಶೇ.50ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಯೇ ಇರುವುದರಿಂದ ಅನೇಕ ಕಡೆ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳು ಗಮನಕ್ಕೆ ಬಂದಿದ್ದವು. ನಂತರ ಸಂಬಳ ನೀಡುವ ಜವಾವಾªರಿಯನ್ನು ಮಾತೃ ಇಲಾಖೆಗೆ ವರ್ಗಾಯಿಸಲಾಗಿತ್ತು. ಮತ್ತೆ ಗ್ರಾಪಂ ಮೂಲಕ ಕೊಡುತ್ತಿರುವ ಬಗ್ಗೆ ಕೆಲ ಮಹಿಳಾ ಸಿಬ್ಬಂದಿಗಳಲ್ಲಿ ಅಸಮಾಧಾನ ಕೂಡ ಇದೆ. ಈಚೆಗೆ ನರೇಗಾ ಜವಾಬ್ದಾರಿಗೂ ಗ್ರಂಥಪಾಲಕರನ್ನು ಬಳಸಿಕೊಂಡಿರುವ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದ್ದಾರೆ.
ಗ್ರಾಪಂ ಮೂಲಕ ಸಂಬಳ ಕೊಡುತ್ತಿರುವು ಸ್ವಾಗತಾರ್ಹ. ಆದರೆ ನಮ್ಮನ್ನು ಕೂಡ ಕನಿಷ್ಠ ವೇತನದಡಿ ತಂದು ದಿನಕ್ಕೆ 8 ಗಂಟೆ ಕೆಲಸ ಕೊಡಿ ಎಂದು ಅಲವತ್ತುಕೊಂಡಿದ್ದಾರೆ. ಹಾಜರಾತಿ, ವೇತನ ಬಿಲ್ ಅನ್ನು ಪ್ರತಿ ತಿಂಗಳು ಜಿಲ್ಲಾ ಕೇಂದ್ರದಲ್ಲಿ ಕೊಟ್ಟು ಬರಬೇಕು. ಇದಕ್ಕೂ ಸಹ ಯಾವುದೇ ಟಿಎ, ಡಿಎ ಸಿಗುವುದಿಲ್ಲ. ಬರುವ 7 ಸಾವಿರ ಸಂಬಳದಲ್ಲಿ ಜೀವನ ನಿರ್ವಹಣೆಯೇ ಕಷ್ಟವಿದೆ ಎನ್ನುತ್ತಾರೆ ಗ್ರಂಥಪಾಲಕರು.
ಮದುವೆಗೆ ಹೆಣ್ಣು ಕೊಡುತ್ತಿಲ್ಲ: ಇಂದೋ ನಾಳೆಯೋ ಕನಿಷ್ಠ ವೇತನ ಸಿಗಬಹುದೆಂಬ ಕಾರಣದಿಂದ ಕೆಲಸಕ್ಕೆ ಸೇರಿದ್ದೇವೆ. ನಮ್ಮ ಸಂಬಳ ನೋಡಿ ಯಾರೂ ಹೆಣ್ಣು ಕೊಡುತ್ತಿಲ್ಲ. ಸರಕಾರ ನಮ್ಮನ್ನು ಬೇರೆ ಇಲಾಖೆಗಾದರೂ ವರ್ಗಾಯಿಸಿ ಪೂರ್ಣ ಪ್ರಮಾಣದ ನೌಕರರೆಂದು ಪರಿಗಣಿಸಲಿ. ಕನಿಷ್ಠ ವೇತನ ಜಾರಿಗೊಳಿಸಲಿ ಈಚೆಗೆ ಹಲವು ಮಂದಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ನೇಣಿಗೆ ಶರಣಾಗಿದ್ದಾರೆ.
ರಾಜ್ಯದಲ್ಲಿ 500ಕ್ಕೂ ಹೆಚ್ಚು ಮಂದಿ ಅಕಾಲಿಕ ಮರಣ ಹೊಂದಿದ್ದಾರೆ. ಯಾರಿಗೂ ಸರಕಾರದಿಂದ ಬಿಡಿಗಾಸು ಕೊಟ್ಟಿಲ್ಲ. ನಿವೃತ್ತಿ ನಂತರ ಬಿಡಿಗಾಸು ಸಿಗುವುದಿಲ್ಲ. ಮನವಿ, ಪ್ರತಿಭಟನೆ ಮಾಡಿದರೆ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ನಮ್ಮ ಕಷ್ಟ ಯಾರ ಬಳಿ ಹೇಳುವುದು ಎನ್ನುತ್ತಾರೆ ಅವರು.