Advertisement

Shimoga incident; ಕಾನೂನುಬದ್ಧ ಬಂಟಿಂಗ್ಸ್, ಬ್ಯಾನರ್ ಅಳವಡಿಸಲು ಅವಕಾಶವಿದೆ: ಮಧುಬಂಗಾರಪ್ಪ

01:19 PM Oct 03, 2023 | Team Udayavani |

ಶಿವಮೊಗ್ಗ: ರಾಗಿಗುಡ್ಡ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದೆ. ಘಟನೆಯಾದ ದಿನ ಮಡಿಕೇರಿನಲ್ಲಿದ್ದೆ. ಅಲ್ಲಿಯೇ ನಾನು ಮಾಹಿತಿ ಪಡೆದೆ. ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ಅದ್ಧೂರಿಯಾಗಿ ನಡೆದಿದೆ. ಆದರೆ, ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಗಲಭೆ ನಡೆದಿದೆ. ಈಗಾಗಲೇ 60 ಜನರನ್ನು ಬಂಧಿಸಲಾಗಿದೆ. 24 ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಘಟನೆ ನಡೆಯಬಾರದಿತ್ತು. ಘಟನೆ ನಡೆದಿರುವುದಕ್ಕೆ ವಿಷಾದವಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ಹಿನ್ನೆಲೆ ಗಮನಿಸಿ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ವಿಧಿಸಲಾಗಿದೆ. ಆದರೆ, ರಾಗಿಗುಡ್ಡ ಹೊರತು ಪಡಿಸಿ ಬಾಕಿ ಕಡೆ ಸಡಿಲಗೊಳಿಸಲಾಗಿದೆ. ರಾಗಿಗುಡ್ಡದಲ್ಲಿ ಮತ್ತೆ ದ್ವೇಷದ ಹಿನ್ನೆಲೆಯಲ್ಲಿ ಯಾವ ಘಟನೆ ನಡೆಯಬಾರದು ಎಂದು ಸಿಕ್ಷನ್ ಬಿಗಿ ಮಾಡಲಾಗಿದೆ. ಹೊರಗಿನಿಂದ ಬಂದವರು ಕಲ್ಲು ತೂರಾಟ ನಡೆಸಿದ್ದಾರೆಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ನಗರದಲ್ಲಿ ಶಾಂತಿ ಕಾಪಾಡಿ ಎಂದು ಶಿವಮೊಗ್ಗ ಜನತೆಗೆ ನಾನು ಮನವಿ ಮಾಡುತ್ತೇನೆ ಎಂದರು.

ಇದನ್ನೂ ಓದಿ:Belagavi; ಕುರುಬರ ಸಮಾವೇಶಕ್ಕೆ ಸಿದ್ದರಾಮಯ್ಯ ಬರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ

ಕಾನೂನು ಬದ್ಧವಾಗಿರುವ ಬಂಟಿಂಗ್ಸ್, ಬ್ಯಾನರ್ ಗಳು ಅಳವಡಿಸಲು ಅವಕಾಶವಿದೆ. ಸಂಪ್ರದಾಯವಾಗಿ ಪ್ರದರ್ಶನ ಮಾಡುವ ಬಗ್ಗೆ ಯಾವುದೇ ವಿರೋಧವಿಲ್ಲ. ರಾಗಿಗುಡ್ಡದಲ್ಲಿ ನಾನು ಕೆಲವಾರು ಮನೆಗಳಿಗೆ ಭೇಟಿ ನೀಡಿ ಒಡೆದು ಹಾಕಿದ್ದನ್ನು ನೋಡಿದೆ. ಇದನ್ನು ನೋಡಿದಾಗ ಬೇಸರವಾಗುತ್ತೆ.  ನಮ್ಮ, ನಿಮ್ಮ ಮನೆಗಳನ್ನು ಒಡೆದಾಗ ಬೇಸರವಾಗುವುದಿಲ್ಲವೇ? ಪಾಪ ಕಷ್ಟಪಟ್ಟು ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಯಾರಿಂದಲೂ ಯಾರಿಗೂ ತೊಂದರೆಯಾಗಬಾರದು ಎಂದರು.

ಕೆಲವು ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ. ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮವಾಗುತ್ತದೆ. ಕಾನೂನಿನಲ್ಲಿ ಅವಕಾಶವಿದ್ದರೆ ನಷ್ಟವಾದವರಿಗೆ ಪರಿಹಾರ ಕೊಡುತ್ತೇವೆ. ಇಲ್ಲವಾದರೆ ನಾವು ಸೇರಿ ಕೊಡುತ್ತೇವೆ. ಶಿವಮೊಗ್ಗ ಶಾಂತಿಯಿಂದ ಇರಬೇಕು. ಇದಕ್ಕೆ ಎಲ್ಲರೂ ಸಹಕರಿಸಿ ಎಂದು ಮಧು ಬಂಗಾರಪ್ಪ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next