Advertisement

ಹೋಂ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದವರ ಮಾಹಿತಿ ಕೊಡಿ

06:46 PM Jun 11, 2020 | Naveen |

ಶಿವಮೊಗ್ಗ: ನಗರದಲ್ಲಿ ಕೋವಿಡ್‌-19 ಹರಡದಂತೆ ಮುಂಜಾಗ್ರತೆ ಕೈಗೊಳ್ಳಲು ಇತರೆ ರಾಜ್ಯಗಳಿಂದ ಬಂದಂತಹ ವ್ಯಕ್ತಿಗಳು 14 ದಿನಗಳ ಹೊಂ ಕ್ವಾರಂಟೈನ್‌
ನಲ್ಲಿ ಇರಬೇಕಾಗಿದ್ದರೂ ಕೆಲವರು ಸೂಚನೆ ಉಲ್ಲಂಘಿಸಿ ಹೊರಗಡೆ ಸುತ್ತಾಡುತ್ತಿದ್ದು, ಇದನ್ನು ಪಾಲಿಕೆ ಗಮನಕ್ಕೆ ತರುವಂತೆ ಆಯುಕ್ತರು ಕೋರಿದ್ದಾರೆ.

Advertisement

ಬೇರೆ ರಾಜ್ಯಗಳಿಂದ ಬಂದವರು ಕ್ವಾರಂಟೈನ್‌ ನಿಯಮ ಉಲ್ಲಂಘಿಸಿರುವ ಬಗ್ಗೆ ದೂರುಗಳು ಬರುತ್ತಿವೆ. ಅಂತಹವರನ್ನು ಹೊಂ ಕ್ವಾರಂಟೈನ್‌ನಲ್ಲಿರುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಅಂತಹ ವ್ಯಕ್ತಿಗಳು ಹೊರಗಡೆ ಸುತ್ತಾಡುವುದು ಕಂಡು ಬಂದಲ್ಲಿ ಪಾಲಿಕೆಯ ನೋಡಲ್‌ ಅಧಿಕಾರಿಗಳಾದ
ಡಾ| ಮದಕರಿ ನಾಯಕ್‌ ಎಚ್‌. ವಿ. 7676135028, ಬಾಲಾಜಿರಾವ್‌ ಎಚ್‌.ಎಂ.-9901716488 ಹಾಗೂ ಸಹಾಯವಾಣಿ 18004257677 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋವಿಡ್‌-19 ಇನ್ಸಿಡೆಂಟ್‌ ಕಮಾಂಡೆಂಟ್‌ ಹಾಗೂ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next