Advertisement

ಕಣ್ಮನ ಸೆಳೆದ ಫಲಪುಷ್ಪಪ್ರದರ್ಶನ

06:03 PM Jan 25, 2020 | Naveen |

ಶಿವಮೊಗ್ಗ: ತೋಟಗಾರಿಕೆ ಇಲಾಖೆ, ಉದ್ಯಾನ ಕಲಾ ಸಂಘ ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ತೋಟಗಾರಿಕೆ ಇಲಾಖೆ ಆವರಣ ಮತ್ತು ಅಂಬೇಡ್ಕರ್‌ ಭವನದ ಸುತ್ತಮುತ್ತ ಈಗಾಗಲೇ ಮಳಿಗೆಗಳು ನಿರ್ಮಾಣವಾಗುತ್ತಿವೆ. ತೋಟಗಾರಿಕೆ ಇಲಾಖೆ ಆವರಣದಲ್ಲಂತೂ ಹೂವಿನ ಲೋಕವೇ ಅನಾವರಣಗೊಂಡಿದೆ. ಡಾ| ಮರಿಗೌಡರ ಸಿರಿಧಾನ್ಯ ಪ್ರತಿಕೃತಿ ಎಲ್ಲರ ಗಮನ ಸೆಳೆಯುತ್ತಿದೆ.

Advertisement

ರೈತರೇ ಈ ದೇಶದ ಬೆನ್ನೆಲುಬು ಎಂಬುದನ್ನು ಸಾಬೀತುಪಡಿಸಲು ರೈತಬಂಧು ನೇಗಿಲ ಯೋಗಿ ಉಳುವ ರೈತರ ಪುಷ್ಪದ ಪ್ರತಿಕೃತಿಗಳು ಮನಸೂರೆಗೊಳ್ಳುತ್ತಿವೆ. ವಿವಿಧ ರೀತಿಯ ಹೂವಿನ ಆಕೃತಿಯ ಫೋಟೋ ಫ್ರೇಮ್‌ಗಳು ಆವರಣದ ತುಂಬ ಕೈ ಬೀಸಿ ಕರೆಯುತ್ತಿವೆ. 7 ಹೆಡೆಯ ಸರ್ಪ, ಬಾತುಕೋಳಿ, ಐಸ್‌ ಕ್ರೀಂ, ಬೊಂಬೆ, ನಾಗರಹಾವು, ಮಹಿಳಾ ಸಬಲೀಕರಣ ರಂಗೋಲಿ ಚಿತ್ರಗಳು, ಹೆಣ್ಣು ಮಕ್ಕಳಿಗೆ ಪ್ರಾಮುಖ್ಯತೆ ನೀಡುವ ಸಂಕೇತದ ಹೂವಿನ ಆಕೃತಿಗಳು ಗಮನ ಸೆಳೆಯುತ್ತಿವೆ. ಹಾಪ್‌ಕಾಮ್ಸ್‌ನಿಂದ ಹಣ್ಣುಗಳ ಮಾರಾಟ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next