Advertisement

ಗಂಟಲು ದ್ರವ ಸಂಗ್ರಹ ಘಟಕಕ್ಕೆ ಚಾಲನೆ

01:49 PM Apr 18, 2020 | Naveen |

ಶಿವಮೊಗ್ಗ: ಕೊರೊನಾ ವೈರಸ್‌ ತಪಾಸಣೆಗಾಗಿ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ಮೆಡಿಕಲ್‌ ಕಾಲೇಜಿಗೆ ನೀಡಲಾಗಿರುವ ಗಂಟಲು ದ್ರವ (ಸ್ವಾಬ್‌) ಸಂಗ್ರಹಿಸುವ 2 ಬೂತ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶರಪ್ಪ ಅವರು ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬೂತ್‌ ಮೂಲಕ ಸ್ವಾಬ್‌ ಸಂಗ್ರಹಿಸುವುದರಿಂದ ವೈದ್ಯರ ಸುರಕ್ಷತೆ ಪ್ರಮಾಣ ಹೆಚ್ಚಾಗುತ್ತದೆ. ಸ್ವಾಬ್‌ ಸಂಗ್ರಹಿಸುವ ಪ್ರಮಾಣವನ್ನು ಹೆಚ್ಚಿಸಲು ಇದರಿಂದ ಸಾಧ್ಯವಿದೆ ಎಂದು ಹೇಳಿದರು.

Advertisement

ಜಿಲ್ಲಾ ಸರ್ಜನ್‌ ಡಾ| ರಘುನಂದನ್‌ ಮಾತನಾಡಿ, ಬೂತ್‌ ಮೂಲಕ ತ್ವರಿತಗತಿಯಲ್ಲಿ ಸ್ವಾಬ್‌ ಸಂಗ್ರಹ ಸಾಧ್ಯವಿದೆ. ದಿನನಿತ್ಯ 60ರ ವರೆಗೆ ಸ್ವಾಬ್‌ ಸಂಗ್ರಹ ಸಾಧ್ಯವಾಗಲಿದ್ದು, ಪ್ರಯೋಗಾಲಯದಲ್ಲಿ ಆರು ಗಂಟೆ ಒಳಗಾಗಿ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದರು. ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌, ಎಸ್ಪಿ ಕೆ.ಎಂ.ಶಾಂತರಾಜು, ಜಿಪಂ ಸಿಇಒ ಎಂ.ಎಲ್‌.ವೈಶಾಲಿ, ಶಿಮ್ಸ್‌ ನಿರ್ದೇಶಕ ಡಾ| ಗುರುಪಾದಪ್ಪ, ಡಿಎಚ್‌ಒ ಡಾ| ರಾಜೇಶ ಸುರಗಿಹಳ್ಳಿ ಮತ್ತಿತರರಿದ್ದರು.

ಆಯನೂರು ಬೇಸರ: ಕಾರ್ಯಕ್ರಮ 10 ನಿಮಿಷ ಇರುವಾಗ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಅವರಿಗೆ ಪಾಲಿಕೆ ಮೇಯರ್‌ ಸುವರ್ಣ ಶಂಕರ್‌ ಹಾಗೂ ಆಯುಕ್ತ ಚಿದಾನಂದ ವಟಾರೆ ಆಹ್ವಾನ ನೀಡಿದ್ದರು. ಆದರೆ ಆಯನೂರು ಮಂಜುನಾಥ್‌ ಆಗಮಿಸುವುದಕ್ಕೆ ಮೊದಲೇ ಕಾರ್ಯಕ್ರಮ ಮುಕ್ತಾಯವಾಗಿತ್ತು. ಇದರಿಂದ ಬೇಸರಗೊಂಡ ಆಯನೂರು ಮಂಜುನಾಥ್‌ ಮೇಯರ್‌ ಸುವರ್ಣ ಶಂಕರ್‌ ಹಾಗೂ ಆಯುಕ್ತ ಚಿದಾನಂದ ವಟಾರೆ ವಿರುದ್ಧ ಸಿಡಿಮಿಡಿಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next