Advertisement

ಪೂರ್ಣಾವಧಿ ಸಿಎಂ ಕಾಣದ ಶಿವಮೊಗ್ಗ ಜಿಲ್ಲೆ

06:55 AM May 20, 2018 | |

ಶಿವಮೊಗ್ಗ: ಇದುವರೆಗೆ ಶಿವಮೊಗ್ಗ ಜಿಲ್ಲೆಯಿಂದ 4 ಮಂದಿ ಮುಖ್ಯಮಂತ್ರಿಯಾಗಿದ್ದು, ಯಡಿಯೂರಪ್ಪನವರು 3 ಬಾರಿ
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಇದುವರೆಗೆ ಯಾರೂ ಪೂರ್ಣಾವಧಿಯ ಮುಖ್ಯಮಂತ್ರಿಯಾಗಲಿಲ್ಲ. ಅದರಲ್ಲಿ ಯಡಿಯೂರಪ್ಪನವರೇ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿದ್ದವರು.

Advertisement

2008ರಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಅವರು 3 ವರ್ಷ 129 ದಿನ ಆಡಳಿತ ನಡೆಸಿದರು. 2007ರಲ್ಲಿ 7 ದಿನ ಮಾತ್ರ ಮುಖ್ಯಮಂತ್ರಿಯಾಗಿದ್ದರು. 1956ರಲ್ಲಿ ಕಡಿದಾಳು ಮಂಜಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಆದರೆ ಅವರು ಅಧಿಕಾರ ನಡೆಸಿದ್ದು ಕೇವಲ 73 ದಿನ.1992ರಲ್ಲಿ ಎಸ್‌. ಬಂಗಾರಪ್ಪ ಮುಖ್ಯಮಂತ್ರಿಯಾಗಿ
ಅಧಿಕಾರ ಸ್ವೀಕರಿಸಿದ್ದರು. ಆದರೆ ಅವರು ಅಧಿಕಾರ ನಡೆಸಿದ್ದು 2 ವರ್ಷ 33 ದಿನಗಳು ಮಾತ್ರ. 1996ರಲ್ಲಿ ಜೆ.ಎಚ್‌. ಪಟೇಲ್‌ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಅವರು ಅಧಿಕಾರ ನಿರ್ವಹಿಸಿದ್ದು, 3 ವರ್ಷ ಮಾತ್ರ

Advertisement

Udayavani is now on Telegram. Click here to join our channel and stay updated with the latest news.

Next