Advertisement

ಅವೈಜ್ಞಾನಿಕ ಕೆರೆ ಅಭಿವೃದ್ಧಿ ಕಾಮಗಾರಿ ತಡೆಗೆ ಆಗ್ರಹ

06:11 PM Oct 20, 2019 | Naveen |

ಶಿವಮೊಗ್ಗ: ಸೋಮಿನಕೊಪ್ಪದ ಕೆರೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅದನ್ನು ತಡೆ ಹಿಡಿಯಬೇಕು ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿ ಆಗ್ರಹಿಸಿತು.

Advertisement

ಶನಿವಾರ ಜಿಲ್ಲಾ ಧಿಕಾರಿಗಳ ನೇತೃತ್ವದಲ್ಲಿ ಗೋಪಿಶೆಟ್ಟಿಕೊಪ್ಪ ಕೆರೆ ಹಾಗೂ ಸೋಮಿನಕೊಪ್ಪದ ಕೆರೆ ವೀಕ್ಷಣೆ ಸಂದರ್ಭದಲ್ಲಿ ಅಣ್ಣಾ ಹಜಾರೆ ತಂಡದ ಕಾರ್ಯಕರ್ತರು ಈ ಎರಡೂ ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿವೆ ಮತ್ತು ಅವೈಜ್ಞಾನಿಕವಾಗಿದೆ. ಇದನ್ನು ತಡೆಹಿಡಿಯಬೇಕೆಂದು ಮನವಿ ಮಾಡಿದರು.

ಗೋಪಿಶೆಟ್ಟಿಕೊಪ್ಪ ಕೆರೆ ಹೆಸರಿಗೆ ಮಾತ್ರ ಅಭಿವೃದ್ಧಿಯಾಗಿದೆ. ಸುಮಾರು 55ಲಕ್ಷ ರೂ.ಗಳ ವೆಚ್ಚದಲ್ಲಿ ಕೆಲಸ ಮುಗಿದಿದ್ದರೂ ಕೂಡ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಗಿಡ, ಪೊದೆ, ಹುಲ್ಲು ಬೆಳೆದುಕೊಂಡಿದ್ದು ಮತ್ತಷ್ಟು ಹಾಳಾಗಿದೆ ಎಂದು ಳಿಸಿದರು.

ಸೋಮಿನಕೊಪ್ಪದ ಕೆರೆ ಅಭಿವೃದ್ಧಿಗೆ ಸುಮಾರು 6 ಕೋಟಿ ರೂ. ನಿಗದಿಪಡಿಸಲಾಗಿದೆ. ಇಲ್ಲಿ ಬೋಟಿಂಗ್‌, ವಾಕಿಂಗ್‌ ಪಾಥ್‌, ಮಕ್ಕಳ ಗಾರ್ಡನ್‌ ಇವೆಲ್ಲವೂ ನಿರ್ಮಾಣವಾಗಲಿದೆ. ಆದರೆ ಈ ಕೆರೆಯ ಅಭಿವೃದ್ಧಿಗೆ ಇಷ್ಟೊಂದು ವೆಚ್ಚ ಮಾಡುವ ಅಗತ್ಯವೇ ಇಲ್ಲ. ಇದು ನಗರದಿಂದ 10 ಕಿ.ಮೀ. ದೂರದಲ್ಲಿದೆ. ಇಲ್ಲಿ ಯಾರೂ ವಾಕ್‌ ಮಾಡಲು ಬರುವುದಿಲ್ಲ. ಮಕ್ಕಳು ಕೂಡ ಬರುವುದಿಲ್ಲ. ಇದೊಂದು ಸೂಕ್ತ ಸ್ಥಳವೇ ಅಲ್ಲ. ಇದು ಸಂಪೂರ್ಣ ಅವೈಜ್ಞಾನಿಕ. ಸ್ವಲ್ಪ ವೆಚ್ಚದಲ್ಲಿ ಈ ಕೆರೆಯನ್ನು ಉಳಿಸಬಹುದೇ ಹೊರತು ಕೋಟ್ಯಂತರ ರೂ. ಖರ್ಚು ಮಾಡುವ ಅಗತ್ಯವಿಲ್ಲ. ಅದರ ಬದಲು ಈ ಕೆರೆ ಒತ್ತುವರಿಯಾಗಿದ್ದು ತಕ್ಷಣವೇ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಸೋಮಿನಕೊಪ್ಪ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೂ ಅಭಿವೃದ್ಧಿ ಕಾರ್ಯ ತಡೆಹಿಡಿಯಲು ಅಧಿಕಾರಿಗಳಿಗೆ ಸೂಚಿಸಿದೆ ಎಂದು ಭರವಸೆ ನೀಡಿದರು.

Advertisement

ಅಣ್ಣಾ ಹಜಾರೆ ಹೋರಾಟ ಸಮಿತಿಯ ಪ್ರಮುಖರಾದ ಅಶೋಕ್‌ ಯಾದವ್‌, ವೆಂಕಟನಾರಾಯಣ, ಸುಬ್ರಮಣ್ಯ, ಸುಬ್ಬಣ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next