Advertisement

ಮತ್ತೆ ಇಬ್ಬರಿಗೆ ಕೋವಿಡ್

01:12 PM Jun 21, 2020 | Naveen |

ಶಿವಮೊಗ್ಗ/ ತೀರ್ಥಹಳ್ಳಿ: ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸಮಾಧಾನದ ಸಂಗತಿ ಎಂದರೆ ಇದುವರೆಗೆ ಅತಿ ಹೆಚ್ಚು 17 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

Advertisement

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ 109ಕ್ಕೆ ಏರಿಕೆಯಾಗಿದೆ. ಇದರಲ್ಲಿ 85 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 23 ಮಂದಿ ಮಾತ್ರ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಜರಾತ್‌ನ ಖಲಂದರ್‌ ನಗರದಿಂದ ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಪಂ ವ್ಯಾಪ್ತಿಯ ತೊರೆಬೈಲ್‌ಗೆ ಮೂರು ದಿನಗಳ ಹಿಂದಷ್ಟೇ ಹಿಂದಿರುಗಿರುವ 51 ವರ್ಷದ ಪಿ.8494 ಮತ್ತು ಕೆಎಸ್‌ಆರ್‌ಪಿ 51 ವರ್ಷದ ಪೊಲೀಸ್‌ ಪಿ.8393 ಕೊರೊನಾ ದೃಢಪಟ್ಟಿದೆ. ಕೆಎಸ್‌ಆರ್‌ಪಿಯ ಪೊಲೀಸ್‌ಗೆ ಯಾರಿಂದ ಕೋವಿಡ್ ಬಂದಿದೆ ಎಂಬುದು ದೃಢಪಟ್ಟಿಲ್ಲ. ಬೆಂಗಳೂರು ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿ ಹಿಂತಿರುಗಿದ್ದ ಹಲವು ಪೊಲೀಸರಿಗೆ ಕೊರೊನಾ ಕಾಣಿಸಿಕೊಂಡಿದ್ದು ಇವರೊಂದಿಗೆ ಹಲವರು ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟಿದ್ದಾರೆ.

ಇವರೆಲ್ಲ ನಗರ ಹೊರವಲಯದ ಹಾಸ್ಟೆಲ್‌ವೊಂದರಲ್ಲಿ ಕ್ವಾರಂಟೈನ್‌ ಆಗಿದ್ದಾರೆ. ತೀರ್ಥಹಳ್ಳಿ ತಾಲೂಕು ತೊರೆಬೈಲ್‌ಗೆ ಗುಜರಾತಿನಿಂದ ಬಂದು ಕೊರೊನಾ ಸೋಂಕಿಗೊಳಗಾದ ವ್ಯಕ್ತಿ ಶಿವಮೊಗ್ಗ ಮೂಲದವರಾಗಿದ್ದು ತಮ್ಮ ನೆಂಟರ ಮನೆಯಲ್ಲಿ ಕ್ವಾರಂಟೈನ್‌ ಆಗಿದ್ದರು. ಸ್ಥಳಕ್ಕೆ ತಾಲೂಕು ದಂಡಾಧಿಕಾರಿಗಳು, ಅರೋಗ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಸದ್ಯಕ್ಕೆ ಸೋಂಕಿತನ ಮನೆ ಸೇರಿ 3 ಮನೆ ಸೀಲ್‌ಡೌನ್‌ ಮಾಡಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. 13 ಮಂದಿ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next