Advertisement

Shivamogga Case: ಎನ್‌ಐಎ ತನಿಖೆಗೆ ಶರಣ್‌ ಪಂಪ್‌ವೆಲ್‌ ಆಗ್ರಹ

12:23 AM Oct 07, 2023 | Team Udayavani |

ಮಂಗಳೂರು: ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ವಿಶೇಷ ಸಂದರ್ಭದಲ್ಲಿ ಮಹಾಪಂಚಾಯತ್‌ ಕರೆದು ಚರ್ಚೆ ನಡೆಸುತ್ತಾರೆ. ಅದೇ ಮಾದರಿಯಲ್ಲಿ ಶಿವಮೊಗ್ಗದಲ್ಲೂ ಶೀಘ್ರ ಮಹಾಪಂಚಾಯತ್‌ ಕರೆಯಲಾಗುವುದು. ಇದರಲ್ಲಿ ಸಾಧು ಸಂತರು, ವಿವಿಧ ಹಿಂದು ಸಂಘಟನೆಗಳ ಪ್ರಮುಖರಿಗೆ ಆಹ್ವಾನ ನೀಡಿ, ಗಂಭೀರ ಚರ್ಚೆ ನಡೆಸಿ, ಜೆಹಾದಿ ಮನಃಸ್ಥಿತಿಯ ದಂಗೆಕೋರರಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ತಿಳಿಸಿದ್ದಾರೆ.

Advertisement

ಶಿವಮೊಗ್ಗದಲ್ಲಿ ಸಂಘಟನೆ ಕಾರ್ಯಕರ್ತ ಹರ್ಷನ ಹತ್ಯೆಯಿಂದ ಹಿಡಿದು ಮಿಲಾದ್‌ ಮೆರವಣಿಗೆ ವರೆಗೆ ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ಬರಲಾಗಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಘಟನೆಯನ್ನು ಎನ್‌ಐಎ ತನಿಖೆಗೆ ಒಳಪಡಿಸಿ, ಸತ್ಯಾಸತ್ಯತೆಯನ್ನು ಹೊರಗೆಡವಬೇಕು ಎಂದು ಆಗ್ರಹಿಸಿದರು.

ಮಹಿಷ ದಸರಾ
ಆಚರಣೆಗೆ ಬಿಡುವುದಿಲ್ಲ
ಮೈಸೂರು ದಸರಾಗೆ ಪರ್ಯಾಯವಾಗಿ ಮೈಸೂರಿನಲ್ಲಿ ಕೆಲವು ಸಂಘಟನೆಗಳ ಮಹಿಷ ದಸರಾ ಆಚರಿಸಲು ನಿರ್ಧರಿಸಿವೆ. ಇದನ್ನು ಅನುಸರಿಸಿ ಉಡುಪಿಯಲ್ಲೂ ಮಹಿಷ ದಸರಾ ಆಚರಣೆಯ ಮಾತುಗಳು ಕೇಳಿ ಬರುತ್ತಿವೆ. ಕರಾವಳಿಯಲ್ಲಿ ಯಾವುದೇ ಕಾರಣಕ್ಕೂ ಇದಕ್ಕೆ ಆವಕಾಶ ನೀಡುವುದಿಲ್ಲ. ಒಂದು ವೇಳೆ ಆಚರಿಸಲು ಮುಂದಾದರೆ ನಿಲ್ಲಿಸುತ್ತೇವೆ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next