Advertisement

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

03:02 PM Sep 22, 2024 | keerthan |

ಶಿವಮೊಗ್ಗ: ತಾಲೂಕಿನ ಆಯನೂರು ಬಳಿ ಇರುವ ಇಟ್ಟಿಗೆ ಹಳ್ಳಿ ಗ್ರಾಮದ ಮಲ್ನಾಡ್ ಯೋಗೇಶ್ ಅವರಿಗೆ ಸೇರಿದ, 108 ಆಂಬುಲೆನ್ಸ್ ಎಂಬ ಹೋರಿಯು ರವಿವಾರ (ಸೆ.22) ಆಯನೂರು ಬಳಿಯ ಗೌಡನಕೆರೆಯಲ್ಲಿ ಬಿದ್ದು ಸಾವನಪ್ಪಿದ ಧಾರಣ ಘಟನೆ ನಡೆದಿದೆ.

Advertisement

ಇಟ್ಟಿಗೆಹಳ್ಳಿ 108 ಆಂಬುಲೆನ್ಸ್ ಎಂದರೆ ಸಾಕು, ಜನರ ಮನಸ್ಸಿಗೆ ಬರುವುದು ಈ ಹೋರಿ ಮಾತ್ರ. ಯಾಕೆಂದರೆ ದೀಪಾವಳಿಯ ಹಬ್ಬದ ನಂತರ ಸುತ್ತಮುತ್ತ ಎಲ್ಲೇ ಹೋರಿ ಬೆದರಿಸುವ ಸ್ಪರ್ಧೆ ಇದ್ದರೆ ಸಾಕು, ಈ ಹೋರಿ ಅಲ್ಲಿ ಪ್ರತ್ಯಕ್ಷವಾಗುವುದು ವಾಡಿಕೆ. ಹೀಗೆ ಅನೇಕ ಸ್ಪರ್ಧೆಗಳಲ್ಲಿ ತನ್ನದೇ ಛಾಪು ಮೂಡಿಸಿ ನೂರಾರು ಪ್ರಶಸ್ತಿಯನ್ನು ತನ್ನದಾಗಿಸಿದ 108 ಆಂಬುಲೆನ್ಸ್ ಇಂದು ದಾರುಣ ಅಂತ್ಯ ಕಂಡಿದೆ.

ಇದರಿಂದ ಸಾವಿರಾರು ಅಭಿಮಾನಿಗಳು ಹೋರಿಯನ್ನು ನೋಡಲು ಇಟ್ಟಿಗೆಹಳ್ಳಿ ಗ್ರಾಮಕ್ಕೆ ಧಾವಿಸುತ್ತಿದ್ದಾರೆ. ಹಾಗೂ ಇಡೀ ಗ್ರಾಮಕ್ಕೆ ಗ್ರಾಮವೇ ಮೌನದಲ್ಲಿ ಮುಳುಗಿದ್ದು ಅಭಿಮಾನಿಗಳ ಕೂಗು ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next