Advertisement

ಸರಳ ಯೋಗ ದಿನಾಚರಣೆಗೆ ಮನವಿ

05:47 PM Jun 20, 2020 | Naveen |

ಶಿವಮೊಗ್ಗ: ಜೂ.21ರಂದು 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದರಿಂದ ಯೋಗ ಬಂಧುಗಳು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದವರೊಡನೆ ಯೋಗ ಮಾಡುವಂತೆ ಹಿರಿಯ ಯೋಗ ಗುರು ಯು.ಆರ್‌ .ಶ್ರೀನಿವಾಸ್‌ ಮೂರ್ತಿ ಮನವಿ ಮಾಡಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಪ್ರಪಂಚದಾದ್ಯಂತ ವಿಶ್ವ ಯೋಗ ದಿನವನ್ನಾಗಿ ಜೂ.21ರಂದು ಆಚರಿಸಲಾಗುತ್ತಿದೆ. ಈ ವರ್ಷ ಕೋವಿಡ್‌ -19ರ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಸೇರಲು ಅಸಾಧ್ಯವಾದ್ದರಿಂದ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ ಎಂದರು. ಅಂದು ಬೆಳಗ್ಗೆ 6.30ರಿಂದ 7.30ರವರೆಗೆ ದೃಶ್ಯ ಮಾಧ್ಯಮವಾದ ಭಾರತ್‌ ಟಿವಿಯಲ್ಲಿ ನೇರ ಪ್ರಸಾರವಾಗುತ್ತಿದ್ದು, ಅದನ್ನು ನೋಡಿ ಕೊಂಡು ಯೋಗಾಭ್ಯಾಸಿಗಳು ಮತ್ತು ಯೋಗಾಸಕ್ತರು ಯೋಗ ಮಾಡಬಹುದು. ಡಿಶ್‌ ಕೇಬಲ್‌ ಇಲ್ಲದೇ ಇರುವವರು ಫೇಸ್‌ಬುಕ್‌ನಲ್ಲೂ ಕೂಡ ನೋಡಿ ಮಾಡಬಹುದು ಎಂದರು. ಕೆ.ಜಿ. ವೆಂಕಟೇಶ್‌, .ಎಸ್‌. ರವೀಂದ್ರ, ಅರವಿಂದ ಮತ್ತತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next