Advertisement

ಸಂಶೋಧನೆ- ನಿರ್ವಹಣಾ ಕ್ಷೇತ್ರಕ್ಕೆ ಆದ್ಯತೆ ಕೊಡಿ

05:37 PM Mar 01, 2020 | Naveen |

ಶಿವಮೊಗ್ಗ: ಕೃಷಿ ಪದವೀಧರರು ಸರ್ಕಾರಿ ಉದ್ಯೋಗಕ್ಕೆ ಕಾಯದೆ ಸಂಶೋಧನೆ ಹಾಗೂ ನಿರ್ವಹಣಾ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸಬೇಕೆಂದು ಕೇಂದ್ರ ನೀತಿ ಆಯೋಗ ಹಾಗೂ 15ನೇ ಹಣಕಾಸು ಆಯೋಗದ ಸದಸ್ಯ ಪ್ರೊ| ರಮೇಶ್‌ ಚಂದ್‌ ಕರೆ ನೀಡಿದರು.

Advertisement

ನಗರದ ಕೃಷಿ ಮತ್ತು ತೋಟಗಾರಿಕೆ ವಿವಿಯ ಆವರಣದಲ್ಲಿ ನಡೆದ 5ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಕೃಷಿ ಪದವೀಧರರಿಗೆ ಸಂಶೋಧನೆ ಹಾಗೂ ನಿರ್ವಹಣಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಇದನ್ನು ಬಳಸಿಕೊಳ್ಳಬೇಕೆಂದರು.

ಕೃಷಿ ಪದವೀಧರರಿಗಿಂತ ಬಿ.ಇ. ಪದವೀಧರರು ಹೆಚ್ಚಿದ್ದಾರೆ. ಆದರೂ ಸಹ ಅವರಿಗೆ ಉದ್ಯೋಗ ಸಮಸ್ಯೆ ಕಾಡುತ್ತಿಲ್ಲ. ಏಕೆಂದರೆ ಅವರು ಐಐಟಿ ಸೇರಿದಂತೆ ವಿವಿಧ ಸಂಶೋಧನಾ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಮೂರನೇ ಎರಡು ಭಾಗ ಮಳೆಯಾಶ್ರಿತ ಪ್ರದೇಶವಿದೆ. ಇದರಿಂದ ಒಂದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿದೆ. ಒಟ್ಟಾರೆ ದೇಶದ ಬೆಳೆ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಕಡಿಮೆ ಇದೆ. ಈ ಅಸಮತೋಲನವನ್ನು ಸರಿದೂಗಿಸಬೇಕಾಗಿದೆ ಎಂದರು.

ವಿಶೇಷವಾಗಿ ತೋಟಗಾರಿಕೆ ಬೆಳೆಯಿಂದಾಗಿ ರೈತರ ಆರ್ಥಿಕ ಮಟ್ಟ
ಸುಧಾರಿಸಲಿದೆ. ಆದ್ದರಿಂದ ರೈತರು ತೋಟಗಾರಿಕೆ ಬೆಳೆಗೆ ಆದ್ಯತೆ ನೀಡಬೇಕು. ಜೊತೆಗೆ ಬೆಳೆಯ ಸಂಸ್ಕರಣೆಗೆ ಯತ್ನಿಸಬೇಕು. ಅದಕ್ಕಾಗಿ ಸರ್ಕಾರ ಸುಧಾರಿತ ಕ್ರಮಗಳನ್ನು ಅನುಸರಿಸಬೇಕು ಎಂದ ಅವರು, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯವು ಕೃಷಿಕ್ಷೇತ್ರದ ವಿಕಾಸಕ್ಕಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದರು.

Advertisement

ಇತ್ತೀಚೆಗೆ ಕೇಂದ್ರ ಕೃಷಿ ಸಚಿವರು ಬಜೆಟ್‌ಗೆ ಸಂಬಂಧಿಸಿದಂತೆ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ರಾಜ್ಯಗಳಿಗೆ ಸಲಹೆ ಕೂಡಾ ನೀಡಿದ್ದಾರೆ ಎಂದರು. ಕೃಷಿ ಸಚಿವ ಬಿ.ಸಿ. ಪಾಟೀಲ್‌, ಕುಲಪತಿ ಡಾ| ಎಂ.ಕೆ. ನಾಯ್ಕ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next