Advertisement

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

08:38 PM Oct 05, 2024 | Team Udayavani |

ಶಿಮ್ಲಾ: ವಿವಾದದ ಸಂಜೌಲಿ ಮಸೀದಿಯ ಮೇಲಿನ ಮೂರು ಅನಧಿಕೃತ ಮಹಡಿಗಳನ್ನು ಕೆಡವಲು ಶಿಮ್ಲಾ ಮುನ್ಸಿಪಲ್ ಕಮಿಷನರ್ ಕೋರ್ಟ್ ಶನಿವಾರ (ಅ5)ಆದೇಶ ನೀಡಿದೆ. ಆದೇಶಗಳನ್ನು ಕಾರ್ಯಗತಗೊಳಿಸಲು ವಕ್ಫ್ ಮಂಡಳಿಗೆ ಎರಡು ತಿಂಗಳ ಕಾಲಾವಕಾಶ ನೀಡಿದೆ.

Advertisement

ಮುಸ್ಲಿಂ ಹಿತರಕ್ಷಣಾ ಸಮಿತಿ ಪ್ರಾತಿನಿಧ್ಯದಲ್ಲಿ ಅನಧಿಕೃತ ಮಹಡಿಗಳನ್ನು ಕೆಡವಲು ಮುಂದಾಗಿತ್ತು. ಈಗ ವಕ್ಫ್ ಬೋರ್ಡ್ ವೆಚ್ಚದಲ್ಲಿ ನೆಲಸಮ ಮಾಡಬೇಕು ಎಂದು ಶಿಮ್ಲಾ ಮುನ್ಸಿಪಲ್ ಆಯುಕ್ತರ ಕಚೇರಿ ತಿಳಿಸಿದೆ. ಮಸೀದಿಯ ಮೂರು ಮಹಡಿಗಳನ್ನು ಕೆಡವಲು ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುತ್ತೇವೆ ಎಂದು ಸಂಜೌಲಿ ಮಸೀದಿ ಸಮಿತಿ ಅಧ್ಯಕ್ಷ ಹೇಳಿಕೆ ನೀಡಿದ್ದಾರೆ.

ವಕ್ಫ್ ಮಂಡಳಿಯ ವಕೀಲ ಬಿ.ಎಸ್. ಠಾಕೂರ್, ಕಮಿಷನರ್ ಕಚೇರಿಯು ಎರಡು ಉಳಿದ ಮಹಡಿಗಳ (ನೆಲ ಮತ್ತು ಮೊದಲ ಮಹಡಿ) ಕುರಿತು ಮುಂದಿನ ವಿಚಾರಣೆಯನ್ನು ಡಿಸೆಂಬರ್ 21 ರಂದು ನಡೆಸಲಿದೆ ಎಂದು ಹೇಳಿದ್ದಾರೆ.

ಮಸೀದಿಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆಗಿಳಿದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next