Advertisement

ಓ ಮೈ ಗಾಡ್… ; ‘ಕಾಂತಾರ’ಚಿತ್ರ ವೀಕ್ಷಿಸಿ ನಟಿ ಶಿಲ್ಪಾ ಶೆಟ್ಟಿ ಹೇಳಿದ್ದೇನು?

06:20 PM Oct 17, 2022 | Team Udayavani |

ಮುಂಬಯಿ : ಜಗತ್ತಿನ ಗಮನ ಸೆಳೆದಿರುವ ವಿಭಿನ್ನ ಕಥಾ ಹಂದರ ಹೊಂದಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಿತ್ರವನ್ನು ಕೇವಲ ಚಿತ್ರ ಪ್ರೇಮಿಗಳು ಮಾತ್ರವಲ್ಲದೆ ದಿಗ್ಗಜ ನಟ-ನಟಿಯರೂ ವೀಕ್ಷಿಸಿ ಭಾರಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕರಾವಳಿ ಮೂಲದ  ನಟಿ ಶಿಲ್ಪಾ ಶೆಟ್ಟಿ ಚಿತ್ರವನ್ನು ವೀಕ್ಷಿಸಿ ಭಾರಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Advertisement

ಚಿತ್ರ ವೀಕ್ಷಿಸಿ ಇನ್ಸ್ಟಾಗ್ರಾಂ ನಲ್ಲಿ ಅನುಭವ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ, ”ಕಾಂತಾರ ಚಿತ್ರ ತಂಡಕ್ಕೆ ಅಭಿನಂದನೆ. ಚಿತ್ರಮಂದಿರದಲ್ಲಿ ಚಲನಚಿತ್ರವನ್ನು ವೀಕ್ಷಿಸಿದ್ದೇನೆ…ಓ ಮೈ ಗಾಡ್! ಎಂತಹ ನಿರೂಪಣೆ, ಭಾವನೆ, ವೈಬ್ ಮತ್ತು ಪ್ರಪಂಚ. ಕ್ಲೈಮ್ಯಾಕ್ಸ್ .. ಸಿನಿಮಾದ ಪವರ್, ವೀಕ್ಷಕನನ್ನು ಹೊಸ ಜಗತ್ತಿಗೆ ಸಾಗಿಸುತ್ತದೆ.. ನಾನು ಸೇರಿದ ಜಗತ್ತು, ನಿಜವಾಗಿಯೂ ನನ್ನನ್ನು ನನ್ನ ಮೂಲಕ್ಕೆ ಕರೆದೊಯ್ದಿತು.ಯಾವುದೇ ಪಕ್ಷಪಾತವಿಲ್ಲದೆ, ಕಥೆ ಹೇಳುವಿಕೆ ಹೃದಯ, ನಂಬಿಕೆ ಮತ್ತು ನಿರ್ದೇಶನದ ಸಂಪೂರ್ಣ ಪ್ರಕಾಶಕ್ಕಾಗಿ ಇದನ್ನು ನೋಡಲೇಬೇಕು.
ರಿಷಬ್ ಶೆಟ್ಟಿ ನಿಮ್ಮ ಕನ್ವಿಕ್ಷನ್ ಮತ್ತು ಬಹುಮುಖತೆಗೆ ಹ್ಯಾಟ್ಸ್ ಆಫ್, ಈ ಯೋಜನೆಯಲ್ಲಿ ನೀವು ಅನೇಕ ಕ್ಯಾಪ್ ಗಳನ್ನು ಧರಿಸಿದ್ದೀರಿ ಮತ್ತು ಅದಕ್ಕೆ ಗರಿಗಳನ್ನು ಕೂಡ ಸೇರಿಸಿದ್ದೀರಿ.ಯಶಸ್ಸನ್ನು ಆನಂದಿಸಿ… ” ಎಂದು ಶುಭ ಕೋರಿದ್ದಾರೆ.

ಮೊದಲು ಕನ್ನಡಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಪಡೆದ ಬಳಿಕ ಹಿಂದಿ ಮತ್ತು ತೆಲುಗಿನಲ್ಲಿ ಡಬ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ದೈವಾರಾಧನೆಯ ಮಹತ್ವ ಸಾರುವ, ಕರಾವಳಿಯ ಸೊಗಡಿನ ಚಿತ್ರ ಗಲ್ಲಾ ಪೆಟ್ಟಿಗೆ ಸೂರೆಗೈಯುತ್ತಿದೆ. ತಮಿಳು ಮತ್ತು ಮಲಯಾಳಂ ನಲ್ಲಿ ಶೀಘ್ರದಲ್ಲೇ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next