ಶಿಡ್ಲಘಟ್ಟ : ಬ್ಯಾಂಕಿನ ವ್ಯವಸ್ಥಾಪಕರ ಕೊಠಡಿಯ ಗೋಡೆಯಲ್ಲಿ ರಂದ್ರ ಕೊರೆದು ಬ್ಯಾಂಕ್ ದರೋಡೆ ಮಾಡಲು ವಿಫಲ ಯತ್ನ ನಡೆಸಿರುವ ಘಟನೆ ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದಿದೆ.
ನಗರದ ಹೃದಯ ಭಾಗವಾದ ರೇಷ್ಮೆ ಗೂಡುಮಾರುಕಟ್ಟೆ ಮುಂಬಾಗದಲ್ಲಿ ಇರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ದರೋಡೆಕೋರರು ಬ್ಯಾಂಕ್ ಲೂಟಿ ಮಾಡಲು ಪ್ರಯತ್ನ ನಡೆಸಿದ್ದು ಅದರಲ್ಲಿ ವಿಫಲರಾಗಿದ್ದಾರೆ ಆದರೇ ಬ್ಯಾಂಕಿನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಭಾವಚಿತ್ರಗಳು ಸೆರೆಹಿಡಿದಿರುತ್ತದೆಯೆಂಬ ಭೀತಿಯಿಂದ ಡಿವಿಆರ್ ಎತ್ತಿಕೊಂಡು ಪರಾರಿಯಾಗಿದ್ದಾರೆ.
ಶುಕ್ರವಾರ ರಾತ್ರಿ ವೇಳೆಯಲ್ಲಿ ಯಾರು ಓಡಾಡದ ಸಂದರ್ಭವನ್ನು ನೋಡಿಕೊಂಡು ದರೋಡೆಕೋರರು ಬ್ಯಾಂಕಿನ ವ್ಯವಸ್ಥಾಪಕರ ಕೊಠಡಿಯಲ್ಲಿ ರಂದ್ರ ಕೊರೆದು ಒಳನುಗ್ಗಿರುವ ದರೋಡೆಕೋರರು ಬ್ಯಾಂಕಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬ್ಯಾಂಕಿನ ಸೈರನ್ ಸಹ ನಿಷ್ಕ್ರೀಯಗೊಳಿಸಿ ಬ್ಯಾಂಕಿನ ಲಾಕರ್ ಮತ್ತು ಸ್ಟ್ರಾಂಗ್ ರೂಂ ಮೀಟಲು ಯತ್ನಿಸಿ ತೆರಳಿದ್ದಾರೆ.
ಇದನ್ನೂ ಓದಿ :ಕೋವಿಡ್ ಸಮರದ ಸೇನಾನಿಗಳು ರಾಜ್ಯದ ಅಮೂಲ್ಯ ಆಸ್ತಿ : ಮುಖ್ಯಮಂತ್ರಿ ಬಿಎಸ್ ವೈ
ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳೆಚ್ಚು ತಜ್ಞರು ಪರಿಶೀಲಿಸಿದ್ದಾರೆ ಸಿಪಿಐ ಸುರೇಶ್ ಹಾಗೂ ಪಿಎಸ್‍ಐ ಸತೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ ಬ್ಯಾಂಕಿನ ವ್ಯವಸ್ಥಾಪಕ ಸತೀಶ್ ನೀಡಿದ ದೂರನ್ನು ದಾಖಲಿಸಿಕೊಂಡು ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.