Advertisement

ಸೋಮವಾರದಿಂದ ಶಿಖರ್ ಧವನ್‌ ಪಡೆಗೆ 14 ದಿನಗಳ ಕ್ವಾರಂಟೈನ್‌ ಆರಂಭ

10:17 AM Jun 13, 2021 | Team Udayavani |

ಮುಂಬಯಿ: ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ಕ್ರಿಕೆಟಿಗರು ಸೋಮವಾರದಿಂದ ಮುಂಬಯಿಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಪಡಲಿದ್ದಾರೆ.

Advertisement

ಲಂಕಾ ಪ್ರವಾಸದ ಭಾಗವಾಗಿರುವ ಎಲ್ಲರೂ ಮುಂಬಯಿಗೆ ತಲುಪುವ ಮುನ್ನ ಕಡ್ಡಾಯ ಕೋವಿಡ್‌-19 ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಅನಂತರ ಮುಂಬಯಿಯಲ್ಲಿ ​ಎರಡು ವಾರಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಜೂ. 28ಕ್ಕೆ ತಂಡ ಕೊಲಂಬೊಕ್ಕೆ ತೆರಳಲಿದೆ.

ಇದಕ್ಕೂ ಮುನ್ನ ಎಲ್ಲ ಸದ್ಯಸರಿಗೂ ಮತ್ತೂಂದು ಸುತ್ತಿನ ಕೋವಿಡ್‌ ಟೆಸ್ಟ್‌ ನಡೆಸಲಾಗುತ್ತದೆ. ಇಲ್ಲಿ ನೆಗೆಟಿವ್‌ ಫ‌ಲಿತಾಂಶ ಬಂದರಷ್ಟೇ ಲಂಕಾ ಪ್ರವಾಸಕ್ಕೆ ತೆರಳಲು ಅನುಮತಿ ನೀಡಲಾಗುವುದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಢಿಕ್ಕಿ ಹೊಡೆದ ಫಾಫ್ ಡು ಪ್ಲೆಸಿಸ್; ಆಸ್ಪತ್ರೆಗೆ ದೌಡು

ಕೊಲಂಬೊ ತಲುಪಿದ ಬಳಿಕ ಭಾರತ ತಂಡ ಮೂರು ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ. ಬಳಿಕ ಪ್ರವಾಸಿ ಕ್ರಿಕೆಟಿಗರು ಶ್ರೀಲಂಕಾ ಕ್ರಿಕೆಟ್‌ ಮಾರ್ಗಸೂಚಿಯನ್ವಯ ತರಬೇತಿ ಆರಂಭಿಸಲಿದ್ದಾರೆ

Advertisement

ತಂಡ; ಶಿಖರ್ ಧವನ್ (ನಾ), ಭುವನೇಶ್ವರ್ ಕುಮಾರ್ (ಉ.ನಾ), ಪೃಥ್ವಿ ಶಾ, ದೇವದತ್ತ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಯುಜುವೇಂದ್ರ ಚಹಲ್, ರಾಹುಲ್ ಚಹರ್ , ಕೃಷ್ಣಪ್ಪ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ

Advertisement

Udayavani is now on Telegram. Click here to join our channel and stay updated with the latest news.

Next