Advertisement

ಧವನ್‌ಗೆ ವಿಚ್ಛೇದನ ನೀಡಿದ ಆಯೇಷಾ

10:27 PM Sep 07, 2021 | Team Udayavani |

ಹೊಸದಿಲ್ಲಿ:  ಭಾರತ ಕ್ರಿಕೆಟ್‌ ತಂಡದ ಖ್ಯಾತ ಎಡಗೈ ಆಟಗಾರ ಶಿಖರ್‌ ಧವನ್‌ ಅವರ ವೈವಾಹಿಕ ಜೀವನ ಮುರಿದುಬಿದ್ದಿದೆ. ಅವರ ಪತ್ನಿಯಾಗಿದ್ದ ಆಸ್ಟ್ರೇಲಿಯದ ಬಾಕ್ಸರ್‌ ಆಯೇಷಾ ಇನ್‌ಸ್ಟಾಗ್ರಾಮ್‌ನಲ್ಲಿ ಇದನ್ನು ಪ್ರಕಟಿಸಿದ್ದಾರೆ.

Advertisement

ಇದು ಆಯೇಷಾಗೆ ಎರಡನೇ ವಿಚ್ಛೇದನ. ಧವನ್‌ರನ್ನು ವರಿಸುವುದಕ್ಕೆ ಮುನ್ನವೇ ಅವರು ಒಮ್ಮೆ ವಿಚ್ಛೇದನ ಪಡೆದಿದ್ದರು.

2012ರಲ್ಲಿ ಧವನ್‌, ಆಯೇಷಾರನ್ನು ವರಿಸಿದ್ದರು. ಹಾಗೆಯೇ ಆಯೇಷಾರ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದರು. ಅದರ ಜತೆಗೆ ಧವನ್‌-ಆಯೇಷಾಗೆ ಜೊರಾವರ್‌ ಹೆಸರಿನ 7 ವರ್ಷದ ಗಂಡು ಮಗನಿದ್ದಾನೆ. ಸದ್ಯ ಈ ಮಕ್ಕಳ ಜವಾಬ್ದಾರಿ ಏನು ಎನ್ನುವುದು ಇತ್ಯರ್ಥವಾಗಬೇಕಿದೆ. ಇನ್ನು ವಿಚ್ಛೇದನಕ್ಕೆ ಕಾರಣ ಏನೆಂಬುವುದು ತಿಳಿದುಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next