Advertisement

ಉಲ್ಪಾಪಲ್ಟಾ: ಶಿಖರ್‌ ಧವನ್‌ ಫಿಟ್‌, ರವೀಂದ್ರ ಜಡೇಜಗೆ ಜ್ವರ! 

09:19 AM Jan 04, 2018 | |

ಕೇಪ್‌ಟೌನ್‌: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ ಆಡಲು ಸಿದ್ಧವಾಗುತ್ತಿರುವ ಭಾರತಕ್ಕೆ ಉಲ್ಟಾ ಪಲ್ಟಾ ಸುದ್ದಿ ಲಭಿಸಿದೆ. ಇದರಲ್ಲಿ ಒಂದು ಸಿಹಿ ಮತ್ತೂಂದು ಕಹಿ ಸುದ್ದಿ. ಇಲ್ಲಿಯವರೆಗೆ ಗಾಯದ ಕಾರಣ ಮೊದಲ ಟೆಸ್ಟ್‌ ಆಡಲ್ಲ ಎನ್ನಲ್ಪಟ್ಟಿದ್ದ ಶಿಖರ್‌ ಧವನ್‌ ಈಗ ಫಿಟ್‌, ಆದರೆ ಎಲ್ಲ ರೀತಿಯಲ್ಲಿ ಚೆನ್ನಾಗಿದ್ದು ಆಡುವ ಸಾಧ್ಯತೆಯಿದ್ದ ರವೀಂದ್ರ ಜಡೇಜಗೆ ದಿಢೀರ್‌ ಜ್ವರ ಬಂದಿರುವುದರಿಂದ ಆಡುವ ಸಾಧ್ಯತೆ ಕ್ಷೀಣಿಸಿದೆ.

Advertisement

ಆಸ್ಪತ್ರೆಗೆ ದಾಖಲಾದ ಜಡೇಜ: ತೀವ್ರ ಜ್ವರದ ಹಿನ್ನಲೆಯಲ್ಲಿ ಜಡೇಜ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇವರು ಚೇತರಿಸಿ ಕೊಳ್ಳಲು 48 ಗಂಟೆಗಳು ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಅವರ ಆಯ್ಕೆ ಮೊದಲ ಟೆಸ್ಟ್‌ ಪಂದ್ಯ ಶುರುವಿಗೆ ಕೆಲ ಗಂಟೆಗಳ ಮೊದಲು ನಿರ್ಧಾರವಾಗಲಿದೆ. 

ನೆಟ್‌ನಲ್ಲಿ ಧವನ್‌ ಅಭ್ಯಾಸ: ಭಾರತದಿಂದ ಆಫ್ರಿಕಾ ಪ್ರವಾಸಕ್ಕೆ ಹೊರಡುವ ವೇಳೆಗೆ ಗಾಯದಿಂದ ಬಳಲುತ್ತಿದ್ದ ಧವನ್‌ ಆಡುವುದು ಅನುಮಾನ ಎನ್ನಲಾಗಿತ್ತು. ಆದರೆ ಧವನ್‌ ಇದ್ದಕ್ಕಿದ್ದಂತೆ ಚೇತರಿಕೆ ಕಂಡಿದ್ದಾರೆ. ಬುಧವಾರ ಬೆಳಗ್ಗೆ ಅವರು ನೆಟ್‌ನಲ್ಲಿ ಸಲೀಸಾಗಿ ಅಭ್ಯಾಸ ನಡೆಸಿದ್ದಾರೆ. ಇದರಿಂದ ಇವರು ಆಡಬಹುದು ಎಂದು ಅಂದಾಜಿಸಲಾಗಿದೆ.

ರಾಹುಲ್‌ಗೆ ತಪ್ಪಲಿದೆ ಅವಕಾಶ?
ಶಿಖರ್‌ ಧವನ್‌ ಗಾಯಗೊಂಡ ಬೆನ್ನಲ್ಲೇ ಮೊದಲ ಟೆಸ್ಟ್‌ನಲ್ಲಿ ಮುರಳಿ ವಿಜಯ್‌ ಜತೆ ಕರ್ನಾಟಕ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿತ್ತು. ಆದರೆ ಇದೀಗ ಧವನ್‌ ಫಿಟ್‌ ಆಗಿರುವುದರಿಂದ ಮುರಳಿ ವಿಜಯ್‌ ಜತೆಗೂಡಿ ಮೊದಲ ಟೆಸ್ಟ್‌ನಲ್ಲಿ ಧವನ್‌ ಇನಿಂಗ್ಸ್‌ ಆರಂಭಿಸಬಹುದು. ಹೀಗಾದರೆ ರಾಹುಲ್‌ಗೆ ಆಡುವ ಹನ್ನೊಂದರೊಳಗೆ ಅವಕಾಶ
ಸಿಗಲಾರದು. ಬಿಸಿಸಿಐ ಮೂಲಗಳು ಹೇಳುವ ಪ್ರಕಾರ ಆಡುವ ಹನ್ನೊಂದರ ಪಟ್ಟಿ ಇನ್ನೂ ಖಚಿತವಾಗಿಲ್ಲ. ಧವನ್‌ ಆಡಬೇಕೋ ಅಥವಾ ಬೇಡವೋ ಎನ್ನುವುದನ್ನು ನಾಯಕ ಹಾಗೂ ಕೋಚ್‌ ನಿರ್ಧರಿಸಲಿದ್ದಾರೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಟೆಸ್ಟ್‌ ಸರಣಿ ಸೋತರೂ ಭಾರತವೇ ನಂ.1
ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಹೇಗೆ ಸಾಗಿದರೂ ಭಾರತವು ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ತನ್ನ ನಂ.1 ಸ್ಥಾನದಲ್ಲಿಯೇ ಮುಂದುವರಿಯಲಿದೆ. ಒಂದು ವೇಳೆ ಮೂರು ಪಂದ್ಯಗಳ ಸರಣಿಯನ್ನು ದಕ್ಷಿಣ ಆಫ್ರಿಕಾ ವೈಟ್‌ ವಾಷ್‌ಗೈದರೆ ಅದು ಭಾರತದ ಜತೆ ಸಮಬಲ ಸಾಧಿಸಲಿದೆ. ಫಾ ಡು ಪ್ಲೆಸಿಸ್‌ ತಂಡ ಸದ್ಯ ಭಾರತಕ್ಕಿಂತ 13 ಅಂಕ ಹಿನ್ನಡೆಯಲ್ಲಿದೆ. ಭಾರತ
ಸದ್ಯ 124 ಅಂಕ ಹೊಂದಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ಸರಣಿ ವೈಟ್‌ವಾಷ್‌ ಮಾಡಿದರೆ ಎರಡೂ ತಂಡಗಳು ತಲಾ 118 ಅಂಕ
ಗಳಿಸಲಿವೆ. ಒಂದು ವೇಳೆ ಭಾರತ ಮೂರೂ ಪಂದ್ಯಗಳನ್ನು ಗೆದ್ದರೆ 128 ಅಂಕ ಗಳಿಸಲಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾ 107 ಅಂಕಗಳಿಗೆ ಜಾರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next