Advertisement

ಸಿಎಂ ಸ್ವಕ್ಷೇತ್ರದಲ್ಲಿಂದು ಅಧಿಕಾರಿಗಳ ವಾಸ್ತವ್ಯ

04:45 PM Feb 20, 2021 | Team Udayavani |

ಶಿವಮೊಗ್ಗ: ಎರಡು ವರ್ಷಗಳ ನಂತರ ಜಿಲ್ಲಾ ಧಿಕಾರಿ ಗ್ರಾಮವಾಸ್ತವ್ಯ ಕಾರ್ಯಕ್ರಮ  ಪುನಾರಂಭಗೊಂಡಿದ್ದು ಶನಿವಾರ ಸಿಎಂ ಸ್ವಕ್ಷೇತ್ರ ಶಿಕಾರಿಪುರದ ತಡಸನಹಳ್ಳಿಯಲ್ಲಿ ಶಿವಮೊಗ್ಗ  ಜಿಲ್ಲಾಧಿಕಾರಿ ವಾಸ್ತವ್ಯ ಹೂಡಲಿದ್ದಾರೆ.

Advertisement

ಎಲ್ಲ ಗ್ರಾಮಗಳಲ್ಲಿರುವಂತೆ ಈ ಗ್ರಾಮದಲ್ಲೂ ಮೂಲಸೌಕರ್ಯದ ಸಮಸ್ಯೆ ಸಾಕಷ್ಟಿದೆ. ಕುಡಿವ ನೀರು,  ರಸ್ತೆ ದುರಸ್ತಿ, ಅಂಗವಿಕಲ, ವಿಧವಾ ವೇತನದಂಥ ಸಮಸ್ಯೆಗಳು ಬಾಕಿ ಉಳಿದಿವೆ. ಜಿಲ್ಲಾ ಧಿಕಾರಿ ವಾಸ್ತವ್ಯ ಹಿನ್ನೆಲೆಯಲ್ಲಿ ಕೆಲ ಅರ್ಜಿಗಳನ್ನು ತರಾತುರಿಯಲ್ಲಿ ವಿಲೇವಾರಿ ಮಾಡಲಾಗಿದೆ. ಮುಖ್ಯವಾಗಿ ಗ್ರಾಮದಲ್ಲಿ ಕಾಂಕ್ರೀಟ್‌ ರಸ್ತೆಗಳ ಅವಶ್ಯಕತೆ ಇದೆ ಎನ್ನುತ್ತಾರೆ ಗ್ರಾಮಸ್ಥರು. ಕೆರೆಗಳ ಹೂಳೆತ್ತುವುದು, ತಡಸನಹಳ್ಳಿ-ಮುತ್ತಗಿ ಸಂಪರ್ಕ ರಸ್ತೆ ಅಭಿವೃದ್ಧಿ , ಶಿರಾಳಕೊಪ್ಪ ಪಟ್ಟಣಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ದುರಸ್ತಿಗೆ ಮೊದಲು ಆದ್ಯತೆ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ. ಇದಲ್ಲದೆ ಗ್ರಾಮಕ್ಕೆ ಹೊಂದಿಕೊಂಡಂತಿರುವ 800 ಎಕರೆ ಉಂಬಳಿ ಜಮೀನಿನಲ್ಲಿ 250 ಎಕರೆ ಗ್ರಾಮಸ್ಥರು ಉಳುಮೆ ಮಾಡುತ್ತಿದ್ದು ಅವರಿಗೆ ಖಾತೆ ಮಾಡಿಕೊಡಬೇಕೆಂಬುದು ಪ್ರಮುಖ ಒತ್ತಾಯವಾಗಿದೆ.

ಊರಿನ ಮಧ್ಯೆ ಇರುವ ದೊಡ್ಡ ಹೊಂಡವನ್ನು ಕಲ್ಯಾಣಿ ರೂಪದಲ್ಲಿ ಅಭಿವೃದ್ಧಿಪಡಿಸಬೇಕು. ಪಕ್ಕದಲ್ಲಿ ಒಂದು ಸಮುದಾಯ ಭವನ ನಿರ್ಮಾಣವಾಗಬೇಕು. ( ಚಂದ್ರಪ್ಪ ಗ್ರಾಮದ ಮುಖಂಡ.)

ಹೊಲಗದ್ದೆಗಳಿಗೆ ಹೋಗುವ ರಸ್ತೆ ಅಭಿವೃದ್ಧಿಯಾಗಬೇಕು. ಅದೇ ರೀತಿ ಗ್ರಾಮದಲ್ಲಿನ ಚರಂಡಿ ದುರಸ್ತಿ ಮಾಡಬೇಕು. ಮುಖ್ಯವಾಗಿ ಈ ಭಾಗಕ್ಕೆ ಏತನೀರಾವರಿ ವ್ಯವಸ್ಥೆಯಾಗಬೇಕು. ( ದೇವಿಕ ಶ್ರೀಧರ್‌, ಗ್ರಾಮಸ್ಥೆ )

Advertisement

Udayavani is now on Telegram. Click here to join our channel and stay updated with the latest news.

Next