Advertisement

19ರಂದು ಶಿವಾಜಿ ಜಯಂತಿ: ಗುರುರಾಜ್‌ ಜಗತಾಪ್‌

06:26 PM Feb 12, 2020 | Naveen |

ಶಿಕಾರಿಪುರ: ಶಿವಾಜಿ ಮಹರಾಜರ ಜಯಂತಿ ಆಚರಣೆ ಈ ವರ್ಷ ಕಿಟ್ಟದಹಳ್ಳಿ ಗ್ರಾಮದಲ್ಲಿ ನಡೆಸಲಾಗುವುದು ಎಂದು ಮರಾಠಾ ಸಮಾಜದ ಅಧ್ಯಕ್ಷ ಗುರುರಾಜ್‌ ಜಗತಾಪ್‌ ಹೇಳಿದರು.

Advertisement

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೊಘಲರ ಆಳ್ವಿಕೆಯಲ್ಲಿ ನಾಶವಾಗುತ್ತಿದ್ದ ಹಿಂದೂಗಳನ್ನು ಒಗ್ಗೂಡಿಸಿ ಹಿಂದವಿ ಸಾಮ್ರಾಜ್ಯದ ಸ್ಥಾಪನೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರ 393 ನೇ ಜಯಂತಿಯನ್ನು ಫೆ.19 ರಂದು ತಾಲೂಕಿನ ಕಿಟ್ಟದಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಆಚರಿಸಲು ತಾಲೂಕು ಮರಾಠಾ ಸಮಾಜದ ವತಿಯಿಂದ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಗಿದ್ದು ತಾಲೂಕು ಆಡಳಿತದ ಸಹಕಾರದೊಂದಿಗೆ ಆಚರಿಸಲಾಗುವುದು ಎಂದರು.

ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಮರಾಠಾ ಸಮಾಜದ ವತಿಯಿಂದ ಶಿವಾಜಿ ಮಹಾರಾಜರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಈ ಬಾರಿ ಶಿವಾಜಿ ಜಯಂತಿಯನ್ನು ಕಿಟ್ಟದಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ಗ್ರಾಪಂ ಕಿಟ್ಟದಹಳ್ಳಿ, ವಿವಿಧ ಇಲಾಖೆಗಳ ಹಾಗೂ ತಾಲೂಕು ಮರಾಠಾ ಸಮಾಜದ ವತಿಯಿಂದ ನಡೆಸಲಾಗುವುದು ಎಂದರು.

19ರಂದು ಬೆಳಗ್ಗೆ 10 ಗಂಟೆಗೆ ತಾಲೂಕಿನ ದಂಡಾಧಿಕಾರಿ ಕವಿರಾಜ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಶಿವಾಜಿ ಮಹಾರಾಜರ ಪ್ರತಿಮೆಯನ್ನು ಕಿಟ್ಟದಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವೇದಿಕೆ ಕಾರ್ಯಕ್ರಮವನ್ನು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಶ್ರೀ ಭವಾನಿಪೀಠ ಗವಿಪುರಂನ ಮರಾಠಾ ಸಮಾಜದ ಜಗದ್ಗುರು ವೇದಾಂತಾಚಾರ್ಯ ಪ|ಪೂ|ಮಂಜುನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ, ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪರವರ ಶುಭ ಹಾರೈಕೆಯೊಂದಿಗೆ, ಜಿಲ್ಲೆಯ ಸಂಸದ ಬಿ. ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಮರಾಠಾ ಸಮಾಜದ ಅಧ್ಯಕ್ಷ ಗುರುರಾಜ್‌ ಜಗತಾಪ್‌, ವಿಶೇಷ ಆಹ್ವಾನಿತರಾಗಿ, ಮಾಜಿ ನಗರಸಭಾಧ್ಯಕ್ಷ ಸತ್ಯನಾರಾಯಣ ಭಾವೆ, ಜಿಪಂ ಸದಸ್ಯೆ ರೇಣುಕಾ ಹನುಮಂತಪ್ಪ, ತಾಪಂ ಉಪಾಧ್ಯಕ್ಷೆ ಪ್ರೇಮಾ ಲೋಕೇಶ್‌, ಸದಸ್ಯೆ ರೂಪಾ ದಯಾನಂದ್‌, ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಎಚ್‌. ಟಿ. ಬಳಿಗಾರ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಚುನಾಯಿತ ಜನಪ್ರತಿನಿ ಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ.

Advertisement

ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಉಪನ್ಯಾಸವನ್ನು ಹಿಂದೂ ಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಉಪನ್ಯಾಸ ನೀಡಲಿದ್ದಾರೆ. ವಿಠಲಗೊಂಡನಕೊಪ್ಪದ ವೀರಯೋಧ ಉಮೇಶಪ್ಪ ಕೆ. ಇವರ ಸವಿನೆನಪಿಗಾಗಿ ಅವರ ಪತ್ನಿ ವೀಣಾ ಹಾಗೂ ಗೊಗ್ಗ ಗ್ರಾಮದ ಸೈನಿಕನ ಪತ್ನಿ ಸುಧಾ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ತಾಲೂಕು ಮರಾಠಾ ಸಮಾಜದ ಉಪಾಧ್ಯಕ್ಷ ಮಂಜಪ್ಪ ಬೊಂಗಾಳೆ, ಕಾರ್ಯದರ್ಶಿ ಎನ್‌. ಆರ್‌. ತಿಪ್ಪೇಶ್‌ ರಾವ್‌, ಖಜಾಂಚಿ ಹನುಮಂತಪ್ಪ, ಸಂಘಟನಾ ಕಾರ್ಯದರ್ಶಿ ನಾರಾಯಣ ರಾವ್‌ ಶಿಂಧೆ, ಎಂ. ಟಿ. ದಿನೇಶ್‌ ರಾವ್‌, ನಾಗೇಶ್‌ ರಾವ್‌, ದಯಾನಂದ್‌, ಗಣೇಶ್‌ ರಾವ್‌ ಕರಾಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next