Advertisement

ಮುಂದಿನ ಪೀಳಿಗೆಗೆ ಶುದ್ಧ ನೀರು ಉಳಿಸಿ

04:02 PM Apr 16, 2020 | Naveen |

ಶಿಕಾರಿಪುರ: ಮುಂದಿನ ಪೀಳಿಗೆಗೆ ಶುದ್ಧ ನೀರು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಅದಕ್ಕಾಗಿ ಸರಕಾರ ಕಾರ್ಯಕ್ರಮ ರೂಪಿಸಿದ್ದು, ಅದರ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಪಟ್ಟಣದಲ್ಲಿ ಆಯೋಜಿಸಿದ್ದ ನದಿ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನೀರಿನ ಮೂಲ ಉಳಿಸಬೇಕು. ಅಂತರ್ಜಲ ಹೆಚ್ಚಿಸಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರಕಾರ ನದಿ ಪುನಃಶ್ಚೇತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದಕ್ಕಾಗಿ ಮೊದಲು ಸಣ್ಣ ಸಣ್ಣ ನೀರಿನ ಮೂಲ ಉಳಿಸುವ ಮೂಲಕ ನದಿಗೆ ಜೀವ ಚೈತನ್ಯ ತುಂಬುವ ಕೆಲಸ ನಡೆಯುತ್ತಿದೆ. ಕೇಂದ್ರ ಸರಕಾರ ಅಗತ್ಯ ಹಣಕಾಸು ನೆರವು ನೀಡಿದೆ. ಅದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವುದು ಜನಪ್ರತಿನಿಧಿಗಳ, ಅಧಿಕಾರಿಗಳ ಕರ್ತವ್ಯ ಎಂದರು.

ನರೇಗಾ ಅಡಿ ಈಗಾಗಲೇ ತಾಲೂಕಿನಲ್ಲಿ 5747 ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧವಾಗಿದೆ. ಅವುಗಳಲ್ಲಿ 938 ಕೆರೆ ಕಾಮಗಾರಿಯೂ ಸೇರಿವೆ. ಕೆಲಸ ಉತ್ತಮವಾಗಬೇಕು ಎನ್ನುವ ಉದ್ದೇಶಕ್ಕೆ ಸರಕಾರ ಯಾವುದೇ ಹಣ ನೀಡದಿದ್ದರೂ ನೀರು ಉಳಿಸುವ ಕೆಲಸಕ್ಕಾಗಿ ಆರ್ಟ್‌ ಆಫ್‌ ಲಿವಿಂಗ್‌ ತಂಡ ನಮ್ಮೊಂದಿಗೆ ತೊಡಗಿಸಿಕೊಳ್ಳಲಿದೆ ಎಮದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನದಿ ಉಳಿಸುವ ಕೆಲಸ ಇಂದಿನ ತುರ್ತು ಅಗತ್ಯ. ಬೇಸಿಗೆಯಲ್ಲಿ ಜನ ನೀರಿಗಾಗಿ ಪರಿತಪಿಸುವುದು ತಪ್ಪುತ್ತಿಲ್ಲ. ಎಲ್ಲೆಡೆ ಹೊಸ ಬೋರ್‌ವೆಲ್‌ ಕೊರೆಸುವ ಬದಲು ನೀರನ್ನು ಇಂಗಿಸುವ ಕೆಲಸಕ್ಕೆ ಮುಂದಾಗಬೇಕಿದೆ. ಅದಕ್ಕಾಗಿ ಈ ಯೋಜನೆ ಉತ್ತಮವಾಗಿದೆ ಎಂದರು.

ತಾ.ಪಂ.ಅಧ್ಯಕ್ಷ ಆರ್‌.ಕೆ. ಶಂಭು, ಜಿ.ಪಂ. ಸದಸ್ಯ ನರಸಿಂಗನಾಯ್ಕ, ಮಮತಾ ಸಾಲಿ, ತಾ.ಪಂ. ಸದಸ್ಯರಾದ ಸುರೇಶ್‌ ನಾಯ್ಕ, ಜಯಣ್ಣ ಈಸೂರು, ತಾಲೂಕಿನ ಎಲ್ಲ ತಾ.ಪಂ., ಜಿ.ಪಂ. ಸದಸ್ಯರು, ಜಿ.ಪಂ. ಸಿಇಒ ವೈಶಾಲಿ, ತಹಶೀಲ್ದಾರ್‌ಕವಿರಾಜ್‌, ಇಒ ಪರಮೇಶ್ವರ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next