Advertisement

ಓದುಗರಿದ್ದರೂ ಪುಸ್ತಕಗಳದ್ದೇ ಕೊರತೆ

04:16 PM Oct 27, 2019 | |

ಶಿಕಾರಿಪುರ: ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪನರು ಮೊದಲ ಬಾರಿ ಮುಖ್ಯಮಂತ್ರಿಯಾದ ಬಳಿಕ ಶಿಕಾರಿಪುರ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಅದರಲ್ಲಿ ಗ್ರಂಥಾಲಯವೂ ಒಂದಾಗಿದೆ. ಶಿಶುವಿಹಾರ ರಸ್ತೆಯಲ್ಲಿ ಬಸ್‌ ನಿಲ್ದಾಣಕ್ಕೆ ಹತ್ತಿರವಿರುವ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಲಾಗಿದ್ದು ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಗ್ರಂಥಪಾಲಕ ಸಹಾಯಕರ ಕೊರತೆ ಪ್ರಮುಖ ಸಮಸ್ಯೆಯಾಗಿದೆ.

Advertisement

ಪಟ್ಟಣದ ಗ್ರಂಥಾಲಯದಲ್ಲಿ ಒಟ್ಟು 46000 ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದು ಕನ್ನಡ, ಇಂಗ್ಲಿಷ್‌, ಹಿಂದಿ, ಉರ್ದು, ತೆಲುಗು, ತಮಿಳು ಹೀಗೆ ಅನೇಕ ಭಾಷಾ ಪುಸ್ತಕಗಳಿವೆ. 2657 ಒಟ್ಟು ಸದಸ್ಯರು ನೋಂದಣಿಯಾಗಿದ್ದಾರೆ. ಅದರಲ್ಲಿ 1515 ಪುರುಷರು ಹಾಗೂ 1142 ಮಹಿಳಾ ಸದಸ್ಯರು ಇದ್ದಾರೆ.

ಪ್ರತಿನಿತ್ಯ 300ಕ್ಕೂ ಹೆಚ್ಚು ಓದುಗರು ಭೇಟಿ ನೀಡಿ ತಮ್ಮ ಜ್ಞಾನದ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಗ್ರಂಥಾಲಯ ಎರಡು ಮಹಡಿಯ ಬೃಹತ್‌ ಸುಸಜ್ಜಿತವಾದ ಕಟ್ಟಡ ಹೊಂದಿದೆ. ಉತ್ತಮ ಸೌಲಭ್ಯಗಳಿವೆ. ಕೆಳ ಮಹಡಿಯಲ್ಲಿ ಪತ್ರಿಕಾ ವಿಭಾಗ ಇದ್ದು ಇಲ್ಲಿ ದಿನಕ್ಕೆ 30 ಕನ್ನಡ ಪತ್ರಿಕೆಗಳು, ಎರಡು ಇಂಗ್ಲಿಷ್‌ ಪತ್ರಿಕೆಗಳು, 21 ನಿಯತಕಾಲಿಕೆಗಳು ಬರುತ್ತವೆ. ಒಂದನೇ ಮಹಡಿಯಲ್ಲಿ ಪುಸ್ತಕಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಓದಲು ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಂಥಾಲಯಕ್ಕೆ ಸಂಪೂರ್ಣ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ಆದರೆ ಜಿಲ್ಲಾ ಕೇಂದ್ರ ಗ್ರಂಥಾಲಯವಾಗಿದ್ದು ಅಧಿಕೃತವಾಗಿ ಗ್ರಂಥಾಲಯದಲ್ಲಿ ಗ್ರಂಥಪಾಲಕರು ಒಬ್ಬರೇ ಇದ್ದಾರೆ. ಎರಡು ವಿಭಾಗಗಳನ್ನು ಒಬ್ಬರೇ ನಿರ್ವಹಿಸಬೇಕಾಗಿರುವುದರಿಂದ ಸಾಕಷ್ಟು ಸಮಸ್ಯೆಯಾಗಿದೆ.

ಗ್ರಾಮೀಣ ಭಾಗದಲ್ಲಿ 44 ಉಪ ಗ್ರಂಥಾಲಯ: ತಾಲೂಕಿನ ಎಲ್ಲಾ ಗ್ರಾಪಂಗಳಲ್ಲೂ ಗ್ರಂಥಾಲಯಗಳು ಇದ್ದು ಒಂದು ಅಲೆಮಾರಿ ಗ್ರಂಥಾಲಯ ಕೆಂಗಟ್ಟೆ ಗ್ರಾಮದಲ್ಲಿದೆ. ಒಂದು ಉಪ ಗ್ರಂಥಾಲಯಕ್ಕೆ ತಿಂಗಳಿಗೆ 400 ರೂ. ಗಳನ್ನು ಮಾತ್ರ ನೀಡಲಾಗುತ್ತಿದ್ದು ದಿನಕ್ಕೆ 2 ಪತ್ರಿಕೆಗಳು ಮತ್ತು ತಿಂಗಳಿಗೆ 1 ನಿಯತಕಾಲಿಕೆಯನ್ನು ತರಿಸಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ನಿಯತಕಾಲಿಕೆಗಳ ಬೇಡಿಕೆ ಇದೆ. ಇನ್ನು ಪುಸ್ತಕಗಳ ಕೊರತೆ ಇದೆ. ಸರ್ಕಾರಿ ಹುದ್ದೆಗಳಿಗೆ ಅನುಕೂಲವಾಗುವ ಪುಸ್ತಕಗಳ ಅವಶ್ಯಕತೆ ಇದೆ.

Advertisement

ಡಿಜಿಟಲ್‌ ಗ್ರಂಥಾಲಯ ಆರಂಭ: 2ನೇ ಮಹಡಿಯಲ್ಲಿ ಡಿಜಿಟಲ್‌ ಗ್ರಂಥಾಲಯ ನಿರ್ಮಾಣವಾಗಲಿದೆ. ಎರಡನೇ ಡಿಜಿಟಲ್‌ ಗ್ರಂಥಾಲಯ ಈಗಾಗಲೇ ಇಲಾಖೆಯ ವತಿಯಿಂದ ಮಂಜೂರಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂದು ಗ್ರಂಥಪಾಲಕ ಸಚಿನ್‌ ತಿಳಿಸಿದ್ದಾರೆ. ತಾಲೂಕಿನಲ್ಲಿ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ವಿದ್ಯಾರ್ಥಿಗಳು ಹೆಚ್ಚಾಗಿ ಗ್ರಂಥಾಲಯಕ್ಕೆ ಆಗಮಿಸುತ್ತಿದ್ದು ಬಡ ವಿದ್ಯಾರ್ಥಿಗಳಿ ಡಿಜಿಟಲ್‌ ಮಾಧ್ಯಮದ ಬಳಕೆಗೆ ಅನುಕೂಲವಾಗಲಿದೆ. ಇಂಟರ್ನೆಟ್‌ ಬಳಕೆಯಿಂದ ಸಾಕಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next