Advertisement

ಕೋವಿಡ್ ಕರ್ತವ್ಯ ವೇಳೆ ಕುಸಿದು ಬಿದ್ದ ವಾರಿಯರ್‌

06:41 PM Jul 02, 2020 | Naveen |

ಶಿಕಾರಿಪುರ: ಕರ್ತವ್ಯನಿರತ ಆಶಾ ಕಾರ್ಯಕರ್ತೆಯೊಬ್ಬರು ಏಕಾಏಕಿ ಅಸ್ವಸ್ಥರಾಗಿ ಕುಸಿದು ಬಿದ್ದ ಘಟನೆ ಪಟ್ಟಣದಲ್ಲಿ ನಡೆದಿದೆ.

Advertisement

ಒಂದು ವಾರದ ಹಿಂದೆ ಪಟ್ಟಣದ ಕಂಟೈನ್ಮೆಂಟ್‌ ವಲಯ ಕುಂಬಾರಗುಂಡಿ ಬೀದಿಯಲ್ಲಿನ ನಿವಾಸಿಯೊಬ್ಬರಿಗೆ ಕೋವಿಡ್ ಪಾಸಿಟಿವ್‌ ಬಂದಿತ್ತು. ಆದರೆ, ಒಂದು ವಾರದಿಂದ ಇಲ್ಲಿನ ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಿಲ್ಲ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಸಿಬ್ಬಂದಿ ಜನರ ಆರೋಗ್ಯ ತಪಾಸಣೆಗಾಗಿ ಆಗಮಿಸಿದ್ದರು. ಈ ವೇಳೆ ಆಶಾ ಕಾರ್ಯಕರ್ತೆ ನೇತ್ರಾವತಿ ನಿಶ್ಯಕ್ತಿಯಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ  ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಶಾ ಕಾರ್ಯಕರ್ತೆ ಕರ್ತವ್ಯದ ವೇಳೆ ಧರಿಸಿದ ಪಿಪಿಟಿ ಕಿಟ್‌ ಹಾಗೂ ಫೇಸ್‌ ಮಾಸ್ಕ್ ನಿಂದ ಉಸಿರಾಡಲು ತೊಂದರೆಯಾಗಿದೆ. ಅವರಿಗೆ ಯಾವುದೇ ರೀತಿಯ ರೋಗದ ಲಕ್ಷಣಗಳಿಲ್ಲ. ಹಾಗಾಗಿ, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಬಿಸಿಲಿನ ತಾಪಕ್ಕೆ ನಿಶ್ಯಕ್ತಿ ಉಂಟಾಗಿ ಹೀಗಾಗಿದೆ ಎಂದು ತಪಾಸಣೆ ನಡೆಸಿದ ವೈದ್ಯ ಡಾ| ವಿನಯ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next