Advertisement

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶಿಗ್ಗಾವಿ-ಸವಣೂರು ಅಭಿವೃದಿ

03:26 PM Oct 21, 2019 | Suhan S |

ಶಿಗ್ಗಾವಿ: ಶಿಗ್ಗಾವಿ-ಸವಣೂರು ಮತಕ್ಷೇತ್ರ ಹಿಂದಿಗಿಂತ ಅಧಿಕ ಪ್ರಮಾಣದಲ್ಲಿ ಖಾಸಗಿದಾರರ ಬಂಡವಾಳ ಹೂಡಿಕೆಯಿಂದ ಪ್ರವಾಸೋದ್ಯಮ ಕ್ಷೇತ್ರವಾಗಿ ಪರಿವರ್ತನೆಯಾಗುತ್ತಿದ್ದು,

Advertisement

ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ತಿಮ್ಮಾಪೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 4 ರ ಪಕ್ಕದಲ್ಲಿ ನಿರ್ಮಿಸಲಾದ ಪಿಆರ್‌ ಎಸ್‌ ವಾಟರ್‌ಪಾರ್ಕ್‌ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಜನರು ರಜೆ ದಿನಗಳಲ್ಲಿ ಮನರಂಜನೆಗಾಗಿ ಬೇರೆ ಜಾಗಗಳನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆಯಿಲ್ಲ.\ ಕ್ಷೇತ್ರದಲ್ಲಿಯೇ ಸಾಕಷ್ಟು ಪ್ರವಾಸಿ ತಾಣಗಳು ಈಗಾಗಲೇ ಬೆಳೆದು ನಿಂತಿವೆ. ಈಗಾಗಲೇ ಕ್ಷೇತ್ರದ ಧಾರ್ಮಿಕ ನೆಲೆ ಕನಕದಾಸರ ಅರಮನೆ, ಶಿಶುವಿನಾಳ ಶರೀಫ್‌ ಶಿವಯೋಗಿಗಳ ಗದ್ದುಗೆಯ ಪ್ರಾರ್ಥನಾ ಮಂದಿರ, ಶಿವಯೋಗಿಗಳ ಜೀವನ ಕಥೆ ಆಧಾರಿತ ತೈಲ ಚಿತ್ರಗಳ ಆಕರ್ಷಣೆ. ಅಲ್ಲದೇ ಸವಣೂರು ಪಟ್ಟಣದ ನವಾಬರ ಅರಮನೆ. ವಿಷ್ಣು ತೀರ್ಥ ಶಿಲ್ಪ ಕಲಾವೈಭವದ ಧಾರ್ಮಿಕಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ನಿಟ್ಟಿನಲ್ಲಿ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ ಎಂದು ಹೇಳಿದರು.

ಖಾಸಗಿ ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನೆ ಎನ್ನುವಂತೆ ತಡಸ್‌ ಹಾನಗಲ್ಲ ರಸ್ತೆಯ ಕುನ್ನೂರು ಗ್ರಾಮದ ಸಾಂಪ್ರದಾಯಿಕ ಕೃಷಿ ಮತ್ತು ತೋಟಗಾರಿಕೆ ಅಗಡಿ ತೋಟ, ಗೊಟಗೋಡಿ ಗ್ರಾಮದ ಉತ್ಸವ ರಾಕ್‌ ಗಾರ್ಡನ್‌ ನೋಡಲುರಾಜ್ಯದ ವಿವಿಧ ಸ್ಥಳಗಳಿಂದ ನಿತ್ಯ ನೂರಾರು ಜನ ಬರುವಂತಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದರಿಂದಾಗಿ ರಾಜ್ಯದ ಜನರಿಗೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಶಿಗ್ಗಾವಿ-ಸವಣೂರು ಮತಕ್ಷೇತ್ರ ಪ್ರವಾಸಿಗರ ಹಬ್‌ ಆಗಿ ಬದಲಾಗುತ್ತಿರುವುದು ಸಂತಸ ಸಂಗತಿ ಎಂದರು. ವಿರಕ್ತಮಠದ ಸಂಗನಬಸವ ಶ್ರೀಗಳುಸಾನ್ನಿಧ್ಯವಹಿಸಿ ಮಾತನಾಡಿ, ಮನುಷ್ಯನಿಗೆ ಈಜು ಆಪತ್ಕಾಲದಲ್ಲಿ ಸಹಾಯಕ್ಕೆ ಬರುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಈಜು ಕಲಿಯುವುದು ಎಲ್ಲ ವಯೋಮಾನದವರಿಗೂ ಅವಶ್ಯವಿದ್ದು, ಇದರ ಜತೆಗೆ ಪ್ರವಾಸೋದ್ಯಮ ಮನರಂಜನೆಯ ಕೇಂದ್ರಗಳಾಗಿ ಕ್ಷೇತ್ರ ಆಕರ್ಷಣೆಯವಾಗಿ ಹೆಚ್ಚು ಹೆಚ್ಚು ಬೆಳೆಯಲಿ. ನಿರುದ್ಯೋಗ ನಿವಾರಣೆಯಾಗಲಿ ಎಂದು ಹಾರೈಸಿದರು.

ಜಿಪಂ ಮಾಜಿ ಅಧ್ಯಕ್ಷೆ ಮಮತಾಜಬಿ ತಡಸ್‌, ತಾಪಂ ಸದಸ್ಯರಾದ ವಿಜಯಲಕ್ಷ್ಮೀ ಮುಂದಿನಮನಿ, ವಿಶ್ವನಾಥ ಹರವಿ, ಮಲ್ಲೇಶಪ್ಪ ದೊಡ್ಡಮನಿ, ಬಿಜೆಪಿ ತಾಲೂಕು ಅಧ್ಯಕ್ಷ ದೇವಣ್ಣಾ ಚಾಕಲಬ್ಬಿ, ಶಿವಾನಂದ ಮ್ಯಾಗೇರಿ, ಡಾ| ಪ್ರಶಾಂತ ಹಿರೇಮಠ, ರಾಘವೇಂದ್ರ ದೇಶಪಾಂಡೆ ಹಾಗೂ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next