Advertisement

Shiggaon Bypoll; ಬಂಡೆದ್ದಿದ್ದ ಕಾಂಗ್ರೆಸಿಗ ಅಜ್ಜಂಪೀರ್‌ ಖಾದ್ರಿ ಥಂಡಾ

12:46 AM Oct 27, 2024 | Team Udayavani |

ಬೆಂಗಳೂರು: ಶಿಗ್ಗಾವಿ ಕಾಂಗ್ರೆಸ್‌ ಪಾಲಿಗೆ ತಲೆನೋವಾಗಿದ್ದ ಸಯ್ಯದ್‌ ಅಜ್ಜಂಪೀರ್‌ ಖಾದ್ರಿ ಉಪಚುನಾವಣ ಕಣದಿಂದ ಹಿಂದೆ ಸರಿಯಲು ಒಪ್ಪಿದ್ದು, ಮತ್ತೋರ್ವ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಮಂಜುನಾಥ ಕುನ್ನೂರು ಅಖಾಡದಲ್ಲೇ ಉಳಿದಿದ್ದಾರೆ.

Advertisement

ಕಳೆದ ಬಾರಿ ಸೋತಿದ್ದ ಯಾಸಿರ್‌ ಖಾನ್‌ ಪಠಾಣ್‌ಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿದ್ದ ರಿಂದ ಆಕಾಂಕ್ಷಿಗಳಾದ ಸಯ್ಯದ್‌ ಅಜ್ಜಂಪೀರ್‌ ಖಾದ್ರಿ ಮತ್ತು ಮಂಜುನಾಥ ಕುನ್ನೂರು ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು.

ಈ ಪೈಕಿ ಖಾದ್ರಿ ಅವರ ಮನವೊಲಿಸುವ ಸಲುವಾಗಿ ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಜಮೀರ್‌ ಖಾನ್‌, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಪ್ರಯತ್ನಿಸಿದ್ದರು. ಸಂಧಾನ ಯಶಸ್ವಿಯಾಗಿದೆ ಎನ್ನಲಾಗಿತ್ತಾದರೂ ಖಾದ್ರಿ ಉಲ್ಟಾ ಹೊಡೆದಿದ್ದರು. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದಿಲ್ಲ, ಯಾಸಿರ್‌ ಪಠಾಣ್‌ ಬಿಜೆಪಿ ಏಜೆಂಟ್‌. ಆತನನ್ನು ಕಣದಿಂದ ಹಿಂದೆ ಸರಿಯುವಂತೆ ಹೇಳಿ, ನನ್ನನ್ನು ಬೆಂಬಲಿಸಿ ಎಂದಿದ್ದರು.

ಆದರೆ ಶನಿವಾರ ಮಧ್ಯಾಹ್ನ ಡಿಸಿಎಂ ಡಿ.ಕೆ. ಶಿವಕುಮಾರ್‌ ನಿವಾಸದಲ್ಲಿ ನಡೆದ ಸಭೆಯಲ್ಲಿ ಖಾದ್ರಿ ಮೆತ್ತಗಾಗಿದ್ದು, ಉಪಚುನಾವಣ ಕಣದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದರು. ಮಂಜು ನಾಥ್‌ ಕುನ್ನೂರು ಅವರ ಮನವೊಲಿಸುವ ಯಾವ ಪ್ರಯತ್ನವೂ ಇದುವರೆಗೆ ಪಕ್ಷದಲ್ಲಿ ನಡೆಯದೆ ಇರುವುದರಿಂದ ನಾಮಪತ್ರ ಹಿಂಪಡೆ ಯುತ್ತಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ಸ್ಥಾನಮಾನದ ಭರವಸೆ
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಶಿವಕುಮಾರ್‌, ಖಾದ್ರಿ ಅವರು ಪ್ರಾಮಾಣಿಕ ವ್ಯಕ್ತಿ. ಅವರ ಅರ್ಹತೆಗೆ ತಕ್ಕಂತೆ ಪಕ್ಷವು ಅಧಿಕಾರ ನೀಡುತ್ತದೆ. ಅ. 30ರಂದು ನಾಮಪತ್ರ ಹಿಂಪಡೆಯಲಿದ್ದಾರೆ ಎಂದರು.

Advertisement

ನನ್ನ ಜತೆ ಯಾರೂ ಮಾತಾಡಿಲ್ಲ: ಕುನ್ನೂರು
ಹಾವೇರಿ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಕಾಂಗ್ರೆಸ್‌ ನಾಯಕರು ಒಳಒಪ್ಪಂದ ಮಾಡಿಕೊಂಡು ಶಿಗ್ಗಾಂವಿ ಟಿಕೆಟ್‌ ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ, ಮಾಜಿ ಸಂಸದ ಮಂಜುನಾಥ ಕುನ್ನೂರು, ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದಿದ್ದಾರೆ. ಪಕ್ಷದ ಮುಖಂಡರಿಂದ ನನ್ನ ಮಗನಿಗೆ ಟಿಕೆಟ್‌ ತಪ್ಪಿದ್ದು, ಹಾಗಾಗಿ ನಾನು ನಾಮಪತ್ರ ಸಲ್ಲಿಸಿದ್ದೇನೆ. ನನ್ನನ್ನು ಯಾರೂ ಸಂಪರ್ಕಿಸಿಲ್ಲ, ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಜ್ಜಂಪೀರ್‌ ಖಾದ್ರಿ ಅವರು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ನಿರ್ಧರಿಸಲು ಸಮಯ ತೆಗೆದುಕೊಂಡರು. ರವಿವಾರ ಶಿಗ್ಗಾಂವಿ ಕ್ಷೇತ್ರದ ಮುಖಂಡರ ಬಳಿ ಚರ್ಚೆ ಮಾಡಲಾಗುವುದು. ಎಲ್ಲರೂ ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಕೆಲಸ ಮಾಡಲಿದ್ದಾರೆ.
– ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next