ಚಿಕ್ಕನಾಯಕನಹಳ್ಳಿ: ಸಾವಿರಾರು ಅಡಿ ಕೊಳವೆ ಬಾವಿ ತೆಗೆಸಿದರೂ ನೀರು ಸಿಗದ ತಾಲೂಕಿನಲ್ಲಿ ಮೊದಲ ಬಾರಿಗೆ ಹೇಮಾವತಿ ನೀರು ಹರಿದು ಎರಡು ಕೆರೆಗಳು ತುಂಬಿರುವುದರಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ.
ತಾಲೂಕಿನ ಶೆಟ್ಟಿಕೆರೆಕೆರೆ ಕೋಡಿಬಿದ್ದಿದ್ದು,150ಕ್ಕೂ ಹೆಚ್ಚು ಎಂಸಿಎಫ್ಟಿಗೂ ಅಧಿಕ ನೀರು ಕೆರೆಯಲ್ಲಿ ಶೇಖರಣೆಯಾಗಿದ್ದು ಇದರಿಂದ ಅಂತರ್ಜಲ ಹೆಚ್ಚಾಗಿ ಗ್ರಾಮದಲ್ಲಿ ಬತ್ತಿದ್ದ ಬೋರ್‌ವೆàಲ್‌ಗಳಲ್ಲಿ ನೀರು ಬರುತ್ತಿದ್ದು, ರೈತರು ಸ್ವಾವಲಂಬನೆ ಬದುಕು ನಡೆಸುವಂತಾಗಿದೆ.
ಶೆಟ್ಟಿಕೆರೆ ಕೆರೆ ಕೋಡಿ ಬಿದ್ದಿದ್ದರಿಂದ ಜೋಡಿತಿಮ್ಮಲಾಪುರ, ಹೆಸರಹಳ್ಳಿ ಕಡೆ ಹೇಮೆ ಸ್ವಾಭಾವಿಕವಾಗಿ ಹರಿಯಲಿದೆ. ಅಧಿಕಾರಿಗಳ ಪ್ರಕಾರ72 ಎಂಸಿಎಫ್ಟಿ ಸಾಮಥ್ಯವಿದ್ದ ಶೆಟ್ಟಿಕೆರೆ ಕೆರೆ ಇಂದು 150ಕ್ಕೂ ಅಧಿಕ ಎಂಸಿಎಫ್ಟಿ ಸಾಮರ್ಥ್ಯದಷ್ಟು ನೀರನ್ನು ಹಿಡಿದಿದ್ದೆ. ಶೆಟ್ಟಿಕೆರೆ ಸಮೀಪದ ನವಿಲೆ, ಅಣೆಕಟ್ಟೆ, ಅರಳಿಕೆರೆ ಗ್ರಾಮದಲ್ಲಿ ಬತ್ತಿ ಹೋಗಿದ್ದಕೊಳವೆ ಭಾವಿಗಳಲ್ಲಿ ನೀರು ಬರುತ್ತಿದೆ. ಬರಪೀಡಿತತಾಲೂಕು ಎಂಬ ಕುಖ್ಯಾತಿಗೆ ಗುರಿಯಾಗಿದ್ದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆ. ದಶಕಗಳಿಂದ ನೀರು ಕಾಣದ ಜನರು ಮೈದುಂಬಿ ಹರಿಯುತ್ತಿರುವ ಶೆಟ್ಟಿಕೆರೆ ವೀಕ್ಷಣೆ ಮಾಡಲು ಜನರು ಗುಂಪು ಗುಂಪಾಗಿ ಬರುತ್ತಿದ್ದಾರೆ. ಹಲವು ಜಾತಿಯ ಪಕ್ಷಿಗಳು ವಲಸೆ ಬಂದಿದ್ದು ಶೆಟ್ಟಿಕೆರೆ ಕೆರೆ ಪ್ರವಾಸಿ ಸ್ಥಳವಾಗಿ ಮಾರ್ಪಾಟಾಗಿದೆ.
ಶ್ರಮಿಸಿದವರಿಗೆ ಶರಣಾಗಬೇಕು: ನೂರಾರು ಹೋರಾಟಗಳು, ರಸ್ತೆ ತಡೆಗಳು, ಬಂದ್‌ಗಳು ನಿಯೋಗಗಳು, ಟೀಕೆ, ಪ್ರತಿಟೀಕೆಗಳು, ಆರೋಪ, ಪ್ರತ್ಯಾರೋಪಗಳ ಫಲವೇ ಇಂದು ಹೇಮೆ ತಾಲೂಕಿನಲ್ಲಿ ಹರಿದಿರುವುದು. ಜನರ ಮುಖದಲ್ಲಿ ನಗು ತಂದಿರುವುದು. ಹಲವು ಸಂಘ ಸಂಸ್ಥೆಗಳ ಹೋರಾಟಗಳು, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಸಿಎಂ ಬಿ.ಎಸ್ .ಯಡಿಯೂರಪ್ಪನವರ ಬಳಿ 26 ಕೆರೆಗಳಿಗೆ ಹಣ ಬಿಡುಗಡೆ ಮಾಡಿಸಿದ್ದು, ಮಾಜಿ ಶಾಸಕ ಸಿ.ಬಿ. ಸುರೇಶ್ ಬಾಬು ಹೇಮಾವತಿ ಕಾಮಗಾರಿ ನಡೆಯಬೇಕು ಎಂದು ಪಾದಯಾತ್ರೆ ನಡೆಸಿದ್ದು, ತಾಲೂಕಿನ ಸ್ವಾಮಿಜೀಗಳು ಸ್ವಯಂ ಪೇರಣೆಯಿಂದ ಸಂಘಟನೆ ಮಾಡಿ ನೀರಿಗಾಗಿ ಹೋರಾಟಮಾಡಿದ್ದು, ಸಚಿವ ಜೆ.ಸಿ.ಮಾಧುಸ್ವಾಮಿ ಹತ್ತು ವರ್ಷಗಳಿಂದ ಪ್ರಗತಿ ಕಾಣದ ಕಾಮಗಾರಿಗೆ ಹಾಗೂ ಗುತ್ತಿಗೆದಾರರ ವ್ಯಾಜ್ಯ ಬಗೆಹರಿಸಿ ಅಧಿಕಾರಿಗಳಿಗೆ ತಾಕಿತ್ತು ಮಾಡಿ ತಾಲೂಕಿಗೆ ನೀರು ಹರಿಸಿದ್ದಾರೆ.
ಶೆಟ್ಟಿಕೆರೆ ಬರದ ಹೋಬಳಿಯಾಗಿತ್ತು ಇಂದು ಕೆರೆ ತುಂಬಿದೆ. ಮಾಜಿ ಶಾಸಕಕೆ.ಎಸ್.ಕಿರಣ್‌ಕುಮಾರ್ ಅವರಕನಸಿನ ಯೋಜನೆಯನ್ನು, ಬಿಜೆಪಿ ಸರ್ಕಾರದ ಸಹಕಾರದಲ್ಲಿ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿಕಾಮಗಾರಿ ವೇಗ ಹೆಚ್ಚಿಸಿ ನಮ್ಮ ತಾಲೂಕಿನಕೆರೆ ತುಂಬಿಸಿದ್ದಾರೆ.
–ಗೌತಮ್ ಶೆಟ್ಟಿಕೆರೆ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ