Advertisement

ವಸ್ತುನಿಷ್ಠ ವರದಿ ಮಾಡಲು ಪತ್ರಕರ್ತರಿಗೆ ಶೆಟ್ಟೆಣ್ಣವರ ಸಲಹೆ

03:48 PM Aug 26, 2018 | |

ವಿಜಯಪುರ: ಪತ್ರಕರ್ತರು ವಸ್ತುವನಿಷ್ಠ ವರದಿ ಮಾಡಬೇಕು. ಖಾಸಗಿ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡದೇ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು. ಸಮಸ್ಯೆಗಳ ಪರಿಹಾರಕ್ಕೆ ಪತ್ರಿಕಾ ವರದಿಗಳು ತುಂಬಾ ಸಹಕಾರಿಯಾಗುತ್ತವೆ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾ ಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಒಂದು ವರದಿ ಮಾಡುವಾಗ ಪೂರ್ವಾಪರ ಮಾಹಿತಿ ಸಂಗ್ರಹಿಸಿಕೊಳ್ಳಬೇಕು. ಸರಿಯಾದ ಮಾಹಿತಿ ಇಲ್ಲದೇ ವರದಿ ಮಾಡುವುದು ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದರು.

ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಪತ್ರಿಕಾಭವನ ಪತ್ರಕರ್ತರು ಸದ್ಬಳಕೆ ಮಾಡಿಕೊಳ್ಳಬೇಕು. ಪತ್ರಕರ್ತರ ಸಂಘದ ಮನವಿಯ ಮೇರೆಗೆ ಪತ್ರಿಕಾಭವನಕ್ಕೆ ಅವಶ್ಯವಿರುವ ಪೀಠೊಪಕರಣ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಸಂಘದ ನಿರ್ಗಮಿತ ಅಧ್ಯಕ್ಷ ರಫಿ ಭಂಡಾರಿ ಮಾತನಾಡಿ, ಪತ್ರಿಕಾವೃತ್ತಿ ಅತ್ಯಂತ ಶ್ರೇಷ್ಠವಾದುದು. ಪತ್ರಕರ್ತರು ತಮ್ಮ ವೃತ್ತಿ ಗೌರವ ಕಾಪಾಡಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ನೂತನ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಸಳಿ ಮಾತನಾಡಿ, ಸಂಘದ ಸಕ್ರೀಯ ಹಾಗೂ ರಚನಾತ್ಮಕ ಕಾರ್ಯಕ್ರಮ ರೂಪಿಸಲು ಜಿಲ್ಲೆಯ ಎಲ್ಲ ಪತ್ರಕರ್ತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. 

ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ರಫಿ ಭಂಡಾರಿ ಅವರು ನೂತನ ಅಧ್ಯಕ್ಷ ಶರಣಬಸಪ್ಪ ಮಸಳಿ ಅವರಿಗೆ ಸಂಘದ ಠರಾವು ಪುಸ್ತಕ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಚುನಾವಣೆಯಲ್ಲಿ ವಿಜೇತ ನೂತನ ಪದಾಧಿ ಕಾರಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಕುಲದೀಪ್‌ ನಯ್ಯರ್‌ ಅವರು ನಿಧನಕ್ಕೆ ಮೌನಾಚರಣೆ ಮಾಡಿ ಅವರಿಗೆ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ, ಹಿರಿಯ ಪತ್ರಕರ್ತ ಶ್ರೀರಾಮ ಪಿಂಗಳೆ, ಕಾನಿಪ ಸಂಘದ ಮಾಜಿ ಜಿಲ್ಲಾಧ್ಯಕ್ಷ ರಫಿ ಭಂಡಾರಿ, ಚುನಾವಣಾಧಿಕಾರಿ ಟಿ.ಕೆ. ಮಲಗೊಂಡ ಅವರನ್ನು ಸನ್ಮಾನಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡೂರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದೇವೇಂದ್ರ ಹೆಳವರ, ಮಾಜಿ ಸದಸ್ಯ ರಾಜು ಕೊಂಡಗೂಳಿ ವೇದಿಕೆಯಲ್ಲಿದ್ದರು.

ಹಿರಿಯ ಪತ್ರಕರ್ತ ಬಾಬುರಾವ್‌ ಕುಲಕರ್ಣಿ ಪ್ರಾರ್ಥಿಸಿದರು. ಸಂಘದ ಜಿಲ್ಲಾ ಗ್ರಾಮೀಣ ಕಾರ್ಯದರ್ಶಿ ಡಿ.ಬಿ. ವಡವಡಗಿ ಸ್ವಾಗತಿಸಿದರು. ಗುರುರಾಜ ಗದ್ದನಕೇರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next