ರಾಯಚೂರು: ಮುಂಗಾರು ಮಳೆ ಹೆಚ್ಚಾದಲ್ಲಿ ಜಿಲ್ಲೆಯ ಕೃಷ್ಣಾ ಮತ್ತು ತುಂಗಭದ್ರಾ ನದಿಗೆ ಎದುರಾಗುವ ಸಂಭವನೀಯ ಪ್ರವಾಹ ಸ್ಥಿತಿ ಎದುರಿಸಲು ಜಿಲ್ಲಾಡಳಿತದ ಜತೆಗೆ ಗ್ರಾಪಂ ಟಾಸ್ಕ್ಫೋರ್ಸ್ ಸಮಿತಿಗಳು ಸನ್ನದ್ಧರಾಗಬೇಕು ಎಂದು ಜಿಲ್ಲಾ ಧಿಕಾರಿ ಆರ್.ವೆಂಕಟೇಶ ಕುಮಾರ್ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಪ್ರವಾಹ ಸ್ಥಿತಿ ಎದುರಿಸಲು ಕೈಗೊಳ್ಳಬೇಕಾದ ಪೂರ್ವ ಸಿದ್ಧತೆ ಹಾಗೂ ಗ್ರಾಪಂ ವಿಪತ್ತು ನಿರ್ವಹಣಾ ಯೋಜನಾ ಪುನರ್ ರಚಿಸಲು ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಜಲಾನಯನ ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದರೆ ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಕೃಷ್ಣೆಗೆ ಹರಿಸಲಾಗುತ್ತಿದೆ. ತುಂಗಭದ್ರೆಗೂ ಪ್ರವಾಹ ಭೀತಿ ಏರ್ಪಡಲಿದೆ.
ಎರಡೂ ನದಿಗಳ ಪಾತ್ರದಲ್ಲಿನ ಜನ, ಜಾನುವಾರುಗಳ ರಕ್ಷಣೆಗೆ ಗ್ರಾಪಂ ಮಟ್ಟದಲ್ಲಿ ರಚಿಸಿದ ಟಾಸ್ಕ್ಫೋರ್ಸ್ ಸಮಿತಿಗಳು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಬೇಕು ಎಂದರು. ಕೃಷ್ಣ, ತುಂಗಭದ್ರಾ ಹಾಗೂ ಭೀಮ ನದಿಗೆ ಹೆಚ್ಚುವರಿ ನೀರು ಹರಿದಲ್ಲಿ ಪ್ರವಾಹ ಏರ್ಪಡಲಿದೆ. ಇದರಿಂದ 34 ಗ್ರಾಪಂ ವ್ಯಾಪ್ತಿಯ 105 ಗ್ರಾಮಗಳಿಗೆ ಪ್ರವಾಹಭೀತಿ ಏರ್ಪಡಲಿದೆ. ಅಂತಹ ವೇಳೆ ಜನ, ಜಾನುವಾರುಗಳನ್ನು ರಕ್ಷಿಸಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕೆಲಸ ಆಗಬೇಕು. ಲಿಂಗಸೂಗೂರು ತಾಲೂಕಿನಲ್ಲಿ ಮ್ಯಾದರಗಡ್ಡೆ, ರಾಯಚೂರು ತಾಲೂಕಿನ ಗುರ್ಜಾಪುರ, ಆತೂRರು, ಡಿರಾಂಪುರ, ಬೂರ್ದಿಪಾಡು, ಕಲವಲದೊಡ್ಡಿ, ಕರವಕುಲ ಗ್ರಾಮಗಳಲ್ಲಿ ಜನರು ತೆಪ್ಪದ ಮೂಲಕ ನದಿ ದಾಟುತ್ತಾರೆ. ಈ ಬಾರಿ ಯಾವುದೇ ಕಾರಣಕ್ಕೂ ಪ್ರವಾಹದ ವೇಳೆ ನದಿ ದಾಟದಂತೆ ಕಟ್ಟುನಿಟ್ಟಾಗಿ ಸೂಚಿಸುವಂತೆ ತಿಳಿಸಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಪ್ರವಾಹದಂತಹ ತುರ್ತು ಸಂದರ್ಭದಲ್ಲಿ ಜನರ ರಕ್ಷಣೆ ಹಾಗೂ ತಾತ್ಕಾಲಿಕ ಪುನರ್ವಸತಿಗೆ ಮದೊಲಾದ್ಯತೆ ನೀಡಬೇಕು. ಮಹಾರಾಷ್ಟ್ರದ ಜಲಾಶಯಗಳ ಅ ಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಜಲಾಶಯದ ನೀರಿನ ಮಟ್ಟ ಹಾಗೂ ನೀರು ಬಿಡುಗಡೆ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದರೂ, ಸಂಪೂರ್ಣ ಮುಕ್ತಗೊಂಡಿಲ್ಲ, ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿವಹಿಸಿ ಸುರಕ್ಷಿತ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು. ಎಡಿಸಿ ಕೆ.ಆರ್.ದುರುಗೇಶ್ ಮಾತನಾಡಿ, ಅಣೆಕಟ್ಟಿನ ಒಳ ಹರಿವು ಮತ್ತು ಹೊರ ಹರಿವು ಮಾಹಿತಿ ವಿನಿಮಯಕ್ಕೆ ವಾಟ್ಸಾಪ್ ಗ್ರೂಪ್‌ಗ್ಳನ್ನು ರಚಿಸಲಾಗಿದೆ.
ಅದರಲ್ಲಿ ನೀರಿನ ಪ್ರಮಾಣದ ಹರಿವಿನ ಮಾಹಿತಿ ಗಂಟೆಗೊಮ್ಮೆ ನೀಡಲಾಗುವುದು ಎಂದರು. ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವುಪುರ, ಎನ್‌ಡಿಆರ್‌ಎಫ್ ತಂಡದ ಆರ್.ಅಭೀನ್ ಇತರರಿದ್ದರು. ಅ ಧಿಕಾರಿಗಳು, ಎನ್‌ಡಿಆರ್‌ಎಫ್ ತಂಡದ ಸಿಬ್ಬಂದಿ, ಗ್ರಾಪಂ ಟಾಸ್ಕ್ಫೋರ್ಸ್ ಸಮಿತಿ ಸದಸ್ಯರು ಸಭೆಯಲ್ಲಿದ್ದರು.