Advertisement

ಆ್ಯಂಬುಲೆನ್ಸ್‌ನಲ್ಲಿಯೇ ಪರೀಕ್ಷೆ ಬರೆದ ಶರೀಫ್

03:09 PM Apr 01, 2017 | Harsha Rao |

ಚೆಂಗನ್ನೂರು: ಅಸ್ವಸ್ಥನಾದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಪರೀಕ್ಷೆ ಬರೆದ ಸುದ್ದಿಯನ್ನು ಹಿಂದೆ ಓದಿದ್ದೇವೆ. ಇದೀಗ ಅಪಘಾತದಲ್ಲಿ ಜಖಂಗೊಂಡಿದ್ದ ಓರ್ವ ವಿದ್ಯಾರ್ಥಿಗಾಗಿ ಆ್ಯಂಬುಲೆನ್ಸ್‌ ಅನ್ನೇ ಪರೀಕ್ಷಾ ಕೊಠಡಿಯಾಗಿ ಬದಲಾಯಿಸಲಾಗಿದೆ. 

Advertisement

ಚೆಂಗನ್ನೂರು ಸಮೀಪದ ಕೊಡುಕುಲಂಜಿ ರಾಜರಾಜೇಶ್ವರಿ ಹಿರಿಯ ಮಾಧ್ಯಮಿಕ ಶಾಲೆಯ 10ನೇ ತರಗತಿ  ವಿದ್ಯಾರ್ಥಿ ಮುಹಮ್ಮದ್‌ ಶರೀಫ್ ಟ್ಯೂಶನ್‌ಗೆ ಹೋಗುತ್ತಿದ್ದಾಗ ಬೈಕ್‌ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯ ಗೊಂಡಿದ್ದೇನೆ. ನಿತ್ಯ ನಡೆದುಕೊಂಡೆ ಟ್ಯೂಶನ್‌ಗೆ ಹೋಗುವ ಶರೀಫ್ಗೆ ಆ ದಿನ ಪರಿಚಿತ ವ್ಯಕ್ತಿಯೊಬ್ಬರು ಆ ದಾರಿಯಾಗಿ ಬೈಕ್‌ನಲ್ಲಿ ಬಂದಾಗ ಟ್ಯೂಶನ್‌ ಕೇಂದ್ರದ ತನಕ ಲಿಫ್ಟ್ ಕೊಡುತ್ತೇನೆ  ಎಂದು ಕರೆದುಕೊಂಡು ಹೋಗಿದ್ದರು. ಆದರೆ ತುಸು ದೂರ ಹೋಗುವಷ್ಟರಲ್ಲಿ ಬೈಕ್‌ ಪಲ್ಟಿಯಾಗಿ ಹಿಂದೆ ಕುಳಿತಿದ್ದ ಶರೀಫ್ ಗಾಯಗೊಂಡಿದ್ದ. 

ತಿರುವಲ್ಲದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದ ಶೆರಿಫ್ ವೈದ್ಯರ ಅನುಮತಿ ಪಡೆದುಕೊಂಡು ಸಿಎಇಎಸ್‌ಇ ಪರೀಕ್ಷೆ ಬರೆಯಲು ಆ್ಯಂಬುಲೆನ್ಸ್‌ನಲ್ಲಿ ಬಂದಿದ್ದ. ಆದರೆ ಆ್ಯಂಬುಲೆನ್ಸ್‌ನಿಂದ ಇಳಿದು ಪರೀಕ್ಷಾ ಕೊಠಡಿಗೆ ಹೋಗಲು ಸಾಧ್ಯವಾಗದ ಕಾರಣ ಆ್ಯಂಬುಲೆನ್ಸ್‌ನಲ್ಲಿಯೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಡಲಾಯಿತು. ಕೈಗೂ ಗಾಯವಾಗಿರುವ ಕಾರಣ ಪೆನ್‌ ಹಿಡಿಯಲು ಕಷ್ಟವಾಗುತ್ತಿತು. ನೋವನ್ನು ಅವಡುಗಚ್ಚಿ ಸಹಿಸಿ ಶೆರಿಫ್ ಇಂಗ್ಲೀಷ್‌ ಪರೀಕ್ಷೆ ಬರೆದಿದ್ದಾನೆ. ಇನ್ನುಳಿದ ಪರೀಕ್ಷೆಗಳನ್ನು ಇದೇ ರೀತಿ ಬರೆಯುಲ ಛಲ ಅವನಲ್ಲಿದೆ. ಅಪಘಾತದ ಕಾರಣ ಒಂದು ವರ್ಷ ವ್ಯರ್ಥವಾಗಿ ಹೋಗಬಾರದು ಎನ್ನುವುದು ಅವನ ಕಾಳಜಿ.

Advertisement

Udayavani is now on Telegram. Click here to join our channel and stay updated with the latest news.

Next