Advertisement
ಉಡುಪಿ: ಜಿಲ್ಲೆಯಲ್ಲಿ ಕೋವಿಡ್- 19 ಸೋಂಕು ಲಕ್ಷಣವನ್ನು ಸಂಪೂರ್ಣವಾಗಿ ನಿವಾರಿಸು ವಂತಾಗಲು ವೈದ್ಯಕೀಯ ಸಿಬಂದಿ 24×7 ಪರಿಶ್ರಮ ಪಡುತ್ತಿದ್ದಾರೆ. ತೆರೆಮರೆಯ ಈ ಶ್ರಮದಿಂದಾಗಿ ಸೋಂಕು ಮತ್ತಷ್ಟು ವ್ಯಾಪಕವಾಗಿ ಹಬ್ಬುವುದನ್ನು ತಡೆಯಲು ಸಾಧ್ಯವಾಗಿದೆ. ಜಿಲ್ಲಾಡಳಿತವೂ ಈ ನಿಟ್ಟಿನಲ್ಲಿ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದೆ.
ಜನರು ಭಯಪಡುವ ಅಗತ್ಯವಿಲ್ಲ. ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಜಿಲ್ಲೆಯಲ್ಲಿ ಈ ವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಎಚ್ಚರಿಕೆ ವಹಿಸಬೇಕು. ಬೇರೆ ರಾಜ್ಯ, ದೇಶಗಳಿಂದ ಬಂದ ವ್ಯಕ್ತಿಗಳಿಗೆ ಯಾವುದೇ ಕಿರುಕುಳ ನೀಡದೆ ಅಂತಹವರ ಮಾಹಿತಿಯನ್ನು ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ನೀಡಬೇಕು. ಆರೋಗ್ಯ ಇಲಾಖೆ ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಿಕೊಳ್ಳಬೇಕು. ಈಗಾಗಲೇ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಳ್ಳಿ-ಹಳ್ಳಿಗಳಿಗೆ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಎನ್‌ಜಿಒ ಸಂಸ್ಥೆಗಳಿಂದ ಆಡಿಯೋ, ವೀಡಿಯೋ ಮೂಲಕ ಪ್ರಚಾರ ನೀಡಲಾಗಿದೆ. ವಯಸ್ಕರು ಮನೆಯೊಳಗಿದ್ದರೆ ಉತ್ತಮ. ಕೆಮ್ಮು, ಶೀತ ಇದ್ದವರು ಮಕ್ಕಳು, ಹಿರಿಯರಿಂದ ಆದಷ್ಟು ದೂರವಿದ್ದರೆ ಒಳ್ಳೆಯದು.
-ಡಾ| ಸುಧೀರ್‌ಚಂದ್ರ ಸೂಡ
ಜಿಲ್ಲಾ ಆರೋಗ್ಯಾಧಿಕಾರಿಗಳು, ಉಡುಪಿ
Related Articles
ಜಿಲ್ಲೆಯಲ್ಲಿ ಕೋವಿಡ್ 19 ಸಹಾಯವಾಣಿಗೆ ಬರುತ್ತಿರುವ ಕರೆಗಳ ಸಂಖ್ಯೆಯೂ ದಿನಂಪ್ರತಿ ಹೆಚ್ಚಳವಾಗುತ್ತಿದೆ. ಕೆಲವು ವಾರಗಳ ಹಿಂದೆ 10-15ರಷ್ಟಿದ್ದ ಕರೆಗಳ ಸಂಖ್ಯೆ ಈಗ 100 ದಾಟುತ್ತಿದೆ. ಶನಿವಾರ ಬೆಳಗ್ಗಿನಿಂದ ಸಂಜೆಯ ವೇಳೆಗೆ 50ಕ್ಕೂ ಅಧಿಕ ಕರೆಗಳು ಬಂದಿದ್ದವು. ಕೋವಿಡ್- 19 ರೋಗಲಕ್ಷಣದ ಮಾಹಿತಿ, ಹರಡುವ ಬಗ್ಗೆ, ಚಿಕಿತ್ಸೆಯ ಬಗ್ಗೆ, ವಿದೇಶದಿಂದ ಆಗಮಿಸಿದವರ ವಿವರ ಸಹಿತ ಹಲವಾರು ರೀತಿಯ ಸಂದೇಹಗಳನ್ನು ಸಹಾಯವಾಣಿಯ ಮೂಲಕ ನಿವಾರಿಸಲಾಗುತ್ತದೆ. ಮಾಹಿತಿ ನೀಡಲು ಹಾಗೂ ಪಡೆಯಲು ಸಹಾಯವಾಣಿ ಸಂಖ್ಯೆ 9663957222 ಅಥವಾ 9663950222 ಸಂಖ್ಯೆಗೆ ಕರೆಮಾಡ ಬಹುದಾಗಿದೆ.
Advertisement
ಮನೆಯಿಂದಲೇ ಕರ್ತವ್ಯಜನತಾ ಕರ್ಫ್ಯೂ ಪ್ರಯುಕ್ತ ಮನೆಯಲ್ಲಿಯೇ ಇದ್ದು, ಕೆಲಸ ನಿರ್ವಹಿಸುತ್ತಿದ್ದೇನೆ. ಪ್ರಧಾನಮಂತ್ರಿಗಳ ಆಶಯಕ್ಕೆ ಎಲ್ಲರೂ ಕೈಜೋಡಿಸಬೇಕು. ನಾಳೆ 7ರಿಂದ 9ರವರೆಗೆ ಯಾರು ಕೂಡ ಮನೆಯಿಂದ ಹೊರಬಾರದೆ ಈ ಮಹತ್ಕಾರ್ಯದಲ್ಲಿ ಭಾಗವಹಿಸಬೇಕು.
-ಜಿ.ಜಗದೀಶ್, ಜಿಲ್ಲಾಧಿಕಾರಿಗಳು