Advertisement

ಅಲೆಕ್ಸಾಂಡ್ರೋವಾಗೆ ಮೊದಲ ಟೆನಿಸ್‌ ಪ್ರಶಸ್ತಿ

10:04 AM Jan 12, 2020 | Team Udayavani |

ಶೆಂಜೆನ್‌: ರಶ್ಯದ ಎಕಟೆರಿನಾ ಅಲೆಕ್ಸಾಂಡ್ರೋವಾ ತಮ್ಮ ಟೆನಿಸ್‌ ಬಾಳ್ವೆಯ ಮೊದಲ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ ನಡೆದ “ಶೆಂಜೆನ್‌ ಓಪನ್‌ ಟೆನಿಸ್‌’ ಪಂದ್ಯಾವಳಿಯ ಫೈನಲ್‌ನಲ್ಲಿ ಅವರು ಕಜಕಿಸ್ಥಾನದ ಎಲೆನಾ ರಿಬಕಿನಾ ವಿರುದ್ಧ 6-2, 6-4 ಅಂತರದ ಜಯ ಸಾಧಿಸಿ ಚಾಂಪಿಯನ್‌ ಆಗಿ ಮೂಡಿಬಂದರು.

Advertisement

“ಆರಂಭದಿಂದಲೇ ನಾನು ಈ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಹಿಡಿತ ಸಾಧಿಸತೊಡಗಿದೆ. ಮೊದಲ ಟ್ರೋಫಿಯನ್ನೆತ್ತಿದ ಸಂಭ್ರಮ ಯಾವತ್ತೂ ಸ್ಪೆಷಲ್‌ ಆಗಿರುತ್ತದೆ. ಆದರೂ ಈ ಪ್ರಶಸ್ತಿ ಸುಲಭವಾಗೇನೂ ಒಲಿಯಲಿಲ್ಲ’ ಎಂದು ವಿಶ್ವ ರ್‍ಯಾಂಕಿಂಗ್‌ನಲ್ಲಿ 34ನೇ ಸ್ಥಾನದಲ್ಲಿರುವ ಅಲೆಕ್ಸಾಂಡ್ರೋವಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next