Advertisement

ಮಹಿಳಾ ಪ್ರಯಾಣಿಕರ ಸೌಲಭ್ಯಕ್ಕಾಗಿ ಕಾಂಞಂಗಾಡ್‌ನ‌ಲ್ಲಿ ಶೀಲಾಡ್ಜ್

01:00 AM Feb 08, 2019 | Harsha Rao |

ಕಾಸರಗೋಡು: ಉದ್ಯೋಗ ಸಂಬಂಧ ಇತ್ಯಾದಿ ವಿಚಾರಗಳಲ್ಲಿ ರಾತ್ರಿ ಸಂಚಾರ ನಡೆಸಬೇಕಾಗಿ ಬರುವ ಮಹಿಳೆಯರು ಬಹುತೇಕ ಸಂದರ್ಭಗಳಲ್ಲಿ ಸುರಕ್ಷಿತವಾಗಿ ಉಳಿದುಕೊಳ್ಳುವುದು ಸಮಸ್ಯೆಯೇ ಹೌದು. ಆದರೆ ಜಿಲ್ಲೆಗೆ ಈ ರೀತಿ ಬರುವ ಮಹಿಳೆಯರು ಇನ್ನು ವಸತಿ ಸಂಬಂಧ ಹೆದರಬೇಕಾಗಿಲ್ಲ.

Advertisement

ಸ್ವಂತ ಕಟ್ಟಡ

ರಾಜ್ಯ ಸರಕಾರದ ಶೀಲಾಡ್ಜ್ ಯೋಜನೆ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿದೆ. ಕಾಂಞಂಗಾಡ್‌ ನಗರಸಭೆ ಈ ಯೋಜನೆಯನ್ನು ಅಭಿಮಾನಪೂರ್ವಕ ಜಾರಿಗೊಳಿಸುತ್ತಿದೆ. ಫೆ. 22ರಂದು ಇಲ್ಲಿ ಶೀಲಾಡ್ಜ್ ಉದ್ಘಾಟನೆಗೊಳ್ಳುತ್ತಿದೆ. ರಾಜ್ಯದಲ್ಲೇ ಸ್ವಂತ ಕಟ್ಟಡದಲ್ಲಿ ಚಟುವಟಿಕೆ ನಡೆಸುವ ಮೊದಲ ಈ ಯೋಜನೆಯ ಸಂಸ್ಥೆ ಇದು ಎಂಬ ಹಿರಿಮೆಯೂ ನಮ್ಮ ನಾಡಿಗಿದೆ.

14 ಜಿಲ್ಲೆಗಳಲ್ಲೂ ಯೋಜನೆ

ರಾತ್ರಿ ವೇಳೆ ನಗರಕ್ಕೆ ಆಗಮಿಸುವ ಮಹಿಳೆಯರಿಗೆ ಸುರಕ್ಷಿತವಾದ ತಂಗುದಾಣ ಒದಗಿಸುವ ಉದ್ದೇಶ ದೊಂದಿಗೆ ರಾಜ್ಯ ಸರಕಾರ 2017-18ರ ಮುಂಗಡ ಪತ್ರದಲ್ಲಿ ಶೀಲಾಡ್ಜ್ ಯೋಜನೆ ರಚಿಸಿತ್ತು. ಇದರ ಅಂಗವಾಗಿ 14 ಜಿಲ್ಲೆಗಳಲ್ಲೂ ಶೀಲಾಡ್ಜ್ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು.

Advertisement

ಅಲಾಮಿಪಳ್ಳಿಯಲ್ಲಿದೆ ಸಂಸ್ಥೆ

45 ಲಕ್ಷ ರೂ. ಬಂಡವಾಳ ಹೂಡಿಕೆ ಮೂಲಕ ಕಾಂಞಂಗಾಡಿನ ಹೃದಯಭಾಗದ ಅಲಾಮಿಪಳ್ಳಿ ಯಲ್ಲಿ ಈ ಸಂಸ್ಥೆ ನಿರ್ಮಾಣಗೊಳ್ಳುತ್ತಿದೆ. ಎರಡು ಅಂತಸ್ತಿನ ಕಟ್ಟಡದಲ್ಲಿ ಮೇಲ್ಭಾಗದಲ್ಲಿ ವಸತಿಗೃಹಗಳಿವೆ. ಜೊತೆಗೆ ಸುಸಜ್ಜಿತ ಭೋಜನಾಲಯವೂ ಇದೆ. ಕುಟುಂಬಶ್ರೀ ಈ ಸಂಸ್ಥೆಯ ಹೊಣೆಗಾರಿಕೆ ವಹಿಸಿಕೊಂಡಿದೆ.

ಸರಕಾರದ ಘೋಷಣೆ ಲಭಿಸಿದ ತತ್‌ಕ್ಷಣ ಯೋಜನೆಯ ಚಟುವಟಿಕೆ ಆರಂಭಿಸಲಾಗಿತ್ತು. ನಂತರದ 7 ತಿಂಗಳಲ್ಲಿ ಕಟ್ಟಡ ನಿರ್ಮಾಣ ಪೂರ್ತಿಗೊಂಡಿತ್ತು. ಈಗ ಏಕಕಾಲಕ್ಕೆ 15 ಮಂದಿಗೆ ವಸತಿ ಸೌಲಭ್ಯ ಇಲ್ಲಿ ಏರ್ಪಡಿಸಲಾಗಿದೆ. ಜತೆಗೆ ಹೊರರಾಜ್ಯಗಳ ಮಂದಿಯೂ ಆನ್‌ಲೈನ್‌ ಮೂಲಕ ಸಂಪರ್ಕಿಸುವ ಸೌಲಭ್ಯ ಏರ್ಪಡಿಸಲಾಗಿದೆ. ಮಹಿಳೆಯರ ಜೊತೆಗೆ ಮಕ್ಕಳೂ ತಂಗುವ ಸೌಲಭ್ಯ ಇಲ್ಲಿದೆ. ಕುಟುಂಬಶ್ರೀ ಜಿಲ್ಲಾ ಮಿಷನ್‌ ನೇತೃತ್ವದಲ್ಲಿರುವ ಸ್ನೇಹಿತ ಜೆಂಡರ್‌ ಹೆಲ್ಪ್ ಡೆಸ್ಕ್ ಕೂಡ ಕಾಂಞಂಗಾಡ್‌ ಐಂಗೋತ್‌ನಲ್ಲಿ ಚಟುವಟಿಕೆ ನಡೆಸುತ್ತಿದೆ.

– ಸುರಕ್ಷಿತ ವ್ಯವಸ್ಥೆ

– ರಾಜ್ಯದಲ್ಲಿ ಮೊದಲ ಸ್ವಂತ ಕಟ್ಟಡ

– 15 ಮಂದಿಗೆ ವಸತಿ ಸೌಲಭ್ಯ

Advertisement

Udayavani is now on Telegram. Click here to join our channel and stay updated with the latest news.

Next