Advertisement

ಸ್ವಾತಂತ್ರ್ಯ ದಿನದಂದೇ ಕಾಬೂಲ್‌ನಲ್ಲಿ ಶೆಲ್‌ ದಾಳಿ

11:12 PM Aug 18, 2020 | mahesh |

ಕಾಬೂಲ್‌: ಆಫ್ಘನ್‌ ಸರಕಾರ‌ ಮತ್ತು ತಾಲಿಬಾನ್‌ ನಡುವೆ ಮಾತುಕತೆಗೆ ಸಂಬಂಧಿಸಿ ಅನಿಶ್ಚಿತತೆ ಮುಂದುವರಿದಿರುವಂತೆಯೇ ಮಂಗಳವಾರ ಅಫ್ಘಾನಿಸ್ಥಾನದ ಸ್ವಾತಂತ್ರ್ಯದ ದಿನದಂದೇ ಕಾಬೂಲ್‌ ಮೇಲೆ ಶೆಲ್‌ ದಾಳಿ ನಡೆದಿದೆ. ಕಾಬೂಲ್‌ನ ಉತ್ತರ ಮತ್ತು ಪೂರ್ವ ಭಾಗದಲ್ಲಿ ಎರಡು ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ಒಟ್ಟು 14 ಮೋರ್ಟರ್‌ ಶೆಲ್‌ಗ‌ಳನ್ನು ಸಿಡಿಸಿದ್ದಾರೆ.

Advertisement

ಘಟನೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಮನೆಗಳು, ವಸತಿ ಸಂಕೀರ್ಣಗಳನ್ನು ಗುರಿಯಾಗಿಸಿಕೊಂಡು ಶೆಲ್‌ ದಾಳಿ ನಡೆಸಲಾಗಿದೆ. ಈ ಪೈಕಿ ಒಂದು ಶೆಲ್‌, ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಸರಕಾರ‌ದ ಹಿರಿಯ ಅಧಿಕಾರಿಗಳು ವಾಸವಿರುವ ವಜೀರ್‌ ಅಕ್ಬರ್‌ ಖಾನ್‌ ಪ್ರದೇಶದಲ್ಲಿ ಬಿದ್ದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಉಗ್ರರ ವಶದಲ್ಲಿ ರುವ ಆಫ್ಘನ್‌ ಸೈನಿಕರನ್ನು ಬಿಡುಗಡೆ ಮಾಡದ ಹೊರತು ನಾವು 320 ತಾಲಿಬಾನ್‌ ಕೈದಿಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸರಕಾರ‌ ಖಡಕ್ಕಾಗಿ ತಿಳಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next