Advertisement

ಸಿರಿಯಾ ಆಸ್ಪತ್ರೆ ಮೇಲೆ ಶೆಲ್‌ ದಾಳಿ : ಇಬ್ಬರು ವೈದ್ಯಕೀಯ ಸಿಬ್ಬಂದಿ ಸೇರಿ 13 ಮಂದಿ ಸಾವು

10:26 PM Jun 13, 2021 | Team Udayavani |

ಬೈರುತ್‌: ಉತ್ತರ ಸಿರಿಯಾದ ಟರ್ಕಿ ಬೆಂಬಲಿತ ಹೋರಾಟಗಾರರ ನಿಯಂತ್ರಣದಲ್ಲಿರುವ ಆಸ್ಪತ್ರೆಯ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಇಬ್ಬರು ವೈದ್ಯಕೀಯ ಸಿಬ್ಬಂದಿ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. 27 ಮಂದಿ ಗಾಯಗೊಂಡಿದ್ದಾರೆ.

Advertisement

ದಾಳಿಯಿಂದ ಪಾಲಿಕ್ಲಿನಿಕ್‌ ವಿಭಾಗ, ಐಸಿಯು ಮತ್ತು ಹೆರಿಗೆ ಕೊಠಡಿ ಧ್ವಂಸವಾಗಿದ್ದು, ಸದ್ಯಕ್ಕೆ ಸೇವೆಯನ್ನು ನಿರ್ಬಂಧಿಸಲಾಗಿದೆ. ಸರ್ಕಾರಿ ಪಡೆಗಳು ಮತ್ತು ಕುರ್ದಿಶ್‌ ನೇತೃತ್ವದ ಹೋರಾಟಗಾರರನ್ನು ನಿಯೋಜಿಸಲ್ಪಟ್ಟಿರುವ ಪ್ರದೇಶದ ಮೇಲೆ ಯಾರು ಶೆಲ್‌ ದಾಳಿ ನಡೆಸಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ಆಫ್ರಿನ್‌ ಗಡಿಯಾಚೆಗಿನ ದಾಳಿಯಲ್ಲಿ ರಾಕೆಟ್‌ಗಳನ್ನು ಬಳಸಿದ್ದಾರೆ. ಸಿರಿಯಾ ಕುರ್ದಿಷ್‌ ಗುಂಪು ಈ ದಾಳಿ ಮಾಡಿದೆ ಎಂದು ಗೌರ್ನರ್‌ ಕಚೇರಿ ಆರೋಪಿಸಿದೆ.

ಇದನ್ನೂ ಓದಿ : ರಕ್ಷಣಾ ಶಸ್ತ್ರಾಸ್ತ್ರ ತಯಾರಿಕಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಕ್ಕೆ ನಗದು ಬಹುಮಾನ

Advertisement

Udayavani is now on Telegram. Click here to join our channel and stay updated with the latest news.

Next