ಡಾ| ಅನಂತಕೃಷ್ಣ ಭಟ್ ವಿಶ್ವಾಸ ವ್ಯಕ್ತಪಡಿಸಿದರು. ಭಾರತ್ ವಿಕಾಸ ಪರಿಷದ್ ಉಡುಪಿ, ಭಾರ್ಗವ ಶಾಖೆಯು ಶನಿವಾರ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಏರ್ಪಡಿಸಿದ “ಕಾಶ್ಮೀರ: ಅಂದು-ಇಂದು- ಮುಂದೆ’ ವಿಷಯ ಕುರಿತು ಉಪನ್ಯಾಸದಲ್ಲಿ ಅವರು ಮಾತನಾಡಿದರು. ಕೈತಪ್ಪದ ಕಾಶ್ಮೀರ ನಮ್ಮ ದೇಶದ ಸಂವಿಧಾನದಲ್ಲಿ ನಮ್ಮ ಯಾವುದೇ ರಾಜ್ಯಗಳೂ ಕೈತಪ್ಪಿ ಹೋಗಲು ಸಾಧ್ಯವಿಲ್ಲ. ಜಮ್ಮು ಕಾಶ್ಮೀರದಲ್ಲಿ ಮಾತ್ರ ಇದುವರೆಗೆ ಪ್ರತ್ಯೇಕ ಸಂವಿಧಾನವಿತ್ತು. ಈಗಿಲ್ಲ. ಹೀಗಾಗಿ ಇದೂ ಕೈತಪ್ಪಿ ಹೋಗುವುದಿಲ್ಲ. ಆದರೆ ಬೇರೆ ದೇಶಗಳಲ್ಲಿ ಹಲವು ಸಂವಿಧಾನಗಳಿವೆ. ಹಿಂದಿನ ಯುಎಸ್‌ಎಸ್‌ಆರ್‌ನಲ್ಲಿಯೂ ಹೀಗಿತ್ತು. ಹೀಗಾಗಿ ಒಡೆದು ಹೋಯಿತು ಎಂದರು.
Advertisement
ಈಡೇರಿದ ಪಟೇಲ್ ವಾಗ್ಧಾನಹಿಂದೆ ಡೋಗ್ರಾ ಮನೆತನದ ಹರಿಸಿಂಗ್ ಬ್ರಿಟಿಷರ ಜತೆ ಮಾಡಿ ಕೊಂಡ ಒಪ್ಪಂದದ ವೇಳೆ 1 ಕೋ.ರೂ.ಗೆ ಕಾಶ್ಮೀರವನ್ನು ಖರೀದಿಸಿದ್ದರು. 1947ರಲ್ಲಿ ಪಾಕಿಸ್ಥಾನದವರು ಆಫ್ರಿದಿ ಮತ್ತು ಮಸೂದಿ ಬುಡಕಟ್ಟು ಜನಾಂಗದವರಿಗೆ ಬಂದೂಕು ಕೊಟ್ಟು ಹಿಂಸಾಚಾರ ನಡೆಸಿದರು. ಪಾಕಿಸ್ಥಾನದ ಸೇನೆಯೂ ಹಿಂಸಾಚಾರ ನಡೆಸಿತು. ಹರಿಸಿಂಗ್ ಕಾಶ್ಮೀರದಿಂದ ಜಮ್ಮುವಿಗೆ ಎಲ್ಲವನ್ನೂ ಬಿಟ್ಟು ಬರುವಾಗ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ “ನಾನು ಏಕಾದರೂ ಭಾರತಕ್ಕೆ ಕೊಟ್ಟೆ’ ಎಂದು ವ್ಯಥೆಪಟ್ಟು ಪತ್ರ ಬರೆದರು. ಇದಕ್ಕೆ ಪ್ರತಿಯಾಗಿ ಪಟೇಲರು ಒಂದೇ ಸಾಲಿನ “ನಿರಾಶರಾಗಬೇಡಿ’ ಎಂದು ಉತ್ತರ ಬರೆದರು. ಆಗ ಕೊಟ್ಟ ಉತ್ತರ ಈಗ ನನಸಾಗಿದೆ ಎಂದು ಡಾ| ಭಟ್ ಹೇಳಿದರು. ಪರಿಷದ್ ಕಾರ್ಯದರ್ಶಿ ಎಚ್.ಹರಿರಾಮ ಶೆಣೈ ಸ್ವಾಗತಿಸಿ ಅಧ್ಯಕ್ಷ ಐ.ಕೆ.ಭಟ್ ವಂದಿಸಿದರು.
1933ರಲ್ಲಿ ಕೇಂಬ್ರಿಡ್ಜ್ನಲ್ಲಿ ಓದುತ್ತಿದ್ದ ರೆಹಮತ್ ಆಲಿ ಚೌಧುರಿ ಎಂಬ ವಿದ್ಯಾರ್ಥಿ “ಪಾಕಿಸ್ಥಾನ’ ಎಂದು ಹೆಸರನ್ನು ಸೃಷ್ಟಿಸುತ್ತಾನೆ. “ಪಿ’ಗೆ ಪಂಜಾಬ್, “ಎ’ಗೆ ಅಫ್ಘಾನಿಸ್ಥಾನದ ಭಾಗ, “ಕೆ’ಗೆ ಕಾಶ್ಮೀರದ ಭಾಗ, “ಎಸ್’ಗೆ ಸಿಂಧ್ ಪ್ರಾಂತ್ಯ ಹೀಗೆ ಕಲ್ಪಿಸಿಕೊಂಡು ಬರೆದದ್ದು. ಮಹಮ್ಮದ್ ಆಲಿ ಜಿನ್ನಾ
ಕೇಬ್ರಿಡ್ಜ್ಗೆ ಹೋದಾಗ ಆತ ಇದನ್ನು ಹೇಳಿದ. ಇದನ್ನು ಆಗ “ನಾನ್‌ಸೆನ್ಸ್’ ಎಂದು ಜಿನ್ನಾ ಹೇಳಿದರು. 1940ರಲ್ಲಿ ಜಿನ್ನಾ ಕಾಶ್ಮೀರಕ್ಕೆ ಹೋದಾಗ ಶೇಖ್ ಅಬ್ದುಲ್ಲಾರ ಬಳಿ ಮುಸ್ಲಿಂ ಬಾಹುಳ್ಯ ಪ್ರದೇಶವನ್ನು ಪ್ರತ್ಯೇಕ ಮುಸ್ಲಿಂ ದೇಶವಾಗಿ ಕೇಳುತ್ತೇವೆ ಎಂದರು. 1920ರಿಂದ ಸ್ವತಂತ್ರ ಕಾಶ್ಮೀರಕ್ಕಾಗಿ ಹೋರಾಡುವ ನಾವು ಇದನ್ನು ಹೇಗೆ ಪಾಕಿಸ್ಥಾನಕ್ಕೆ ಬಿಟ್ಟು ಕೊಡಲು ಸಾಧ್ಯ ಎಂದು ಶೇಖ್ ಅಬ್ದುಲ್ಲಾ ಪ್ರಶ್ನಿಸುತ್ತಾರೆ ಎಂದು ಭಟ್ ಬೆಟ್ಟು ಮಾಡಿದರು.