ಇಸ್ಲಾಮಾಬಾದ್: ಪಾಕಿಸ್ಥಾನದ ವಿರೋಧ ಪಕ್ಷದ ನಾಯಕ, ಪಾಕಿಸ್ಥಾನ ಮುಸ್ಲಿಂ ಲೀಗ್ ನವಾಜ್(ಪಿಎಂಎಲ್-ಎನ್) ಅಧ್ಯಕ್ಷ ಶೆಬಾಝ್ ಶರೀಫ್ ಅವರಿಗೀಗ ಕೋವಿಡ್ ಸೋಂಕು ದೃಢಪಟ್ಟಿದೆ.
ಶರೀಫ್ ಅವರು ಸದ್ಯ ಮನೆಯಲ್ಲಿ ಪ್ರತ್ಯೇಕವಾಗಿದ್ದು, ಅವರು ಕ್ಯಾನ್ಸರ್‌ನಿಂದ ಗುಣಮುಖರಾದವರಾಗಿದ್ದಾರೆ. ಅವರಿಗೀಗ 69 ವರ್ಷ ವಯಸ್ಸು.
ಶರೀಫ್ ಅವರು ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಸಹೋದರ. ಅವರಿಗೆ ಕೋವಿಡ್‌ನ ಕೆಲವು ಲಕ್ಷಣಗಳು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸ್ವಯಂ ಆಗಿ ಪರೀಕ್ಷೆಗೆ ಒಳಗಾಗಿದ್ದರು. ಬಳಿಕ ಗುರುವಾರ ಕೋವಿಡ್ ಇರುವುದು ದೃಢಪಟ್ಟಿದೆ.
ಇನ್ನು ಪಾಕಿಸ್ಥಾನದಲ್ಲಿ ಹಲವು ರಾಜಕೀಯ ನಾಯಕರಿಗೆ ಸೋಂಕು ಕಾಣಿಸಿಕೊಂಡಿದೆ. ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ನಾಯಕ ಶಾರ್ಜೀಲ್ ಮೆಮೊನ್, ಎಮ್‌ಕ್ಯೂಎಮ್‌ನ ಶಹನಾ ಅಶ್ರಾರ್ ಅವರಿಗೆ ಕೋವಿಡ್ ದೃಢಪಟ್ಟಿದೆ.
ಕೋವಿಡ್ ಸೋಂಕಿತರಾಗಿದ್ದ ಮೂವರು ರಾಜಕಾರಣಿಗಳು ಈವರೆಗೆ ಮೃತಪಟ್ಟಿದ್ದಾರೆ.