Advertisement

Pakistan :ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಶೆಹಬಾಜ್ ಷರೀಫ್

03:53 PM Mar 03, 2024 | Team Udayavani |

ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಹೊಸದಾಗಿ ರಚಿತವಾದ ಸಂಸತ್ತು ಭಾನುವಾರ ಶೆಹಬಾಜ್ ಷರೀಫ್ ಅವರನ್ನು ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ.

Advertisement

ಫೆಬ್ರವರಿ 8 ರಂದು ನಡೆದ ರಾಷ್ಟ್ರೀಯ ಚುನಾವಣೆಗಳ ನಂತರ ಮೂರು ವಾರಗಳ ಅನಿಶ್ಚಿತ ಸಮ್ಮಿಶ್ರ ಸರಕಾರ ರಚನೆಯಲ್ಲಿ ವಿಳಂಬವನ್ನು ಉಂಟುಮಾಡಿತ್ತು.ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸುವಿಕೆ, ಬಂಧನಗಳು ಮತ್ತು ಹಿಂಸಾಚಾರವು ಅದರ ನಿರ್ಮಾಣ ಮತ್ತು ಅಸಾಮಾನ್ಯವಾಗಿ ವಿಳಂಬವಾದ ಫಲಿತಾಂಶಗಳಲ್ಲಿ ಹಿಂಸಾಚಾರ ನಡೆದು ಭಾರೀ ಆರೋಪ, ಪ್ರತ್ಯಾರೋಪಗಳು ನಡೆದಿದ್ದವು.

72 ವರ್ಷದ ಶೆಹಬಾಜ್ ಷರೀಫ್ ಅವರು ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಕಿರಿಯ ಸಹೋದರ. ಪಾಕಿಸ್ಥಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ಚುನಾವಣಾ ಪ್ರಚಾರವನ್ನು ಮುನ್ನಡೆಸಿದ್ದರು. ಖಾನ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಗಳಿಸಿದರಾದರೂ ಪಿಎಂಎಲ್-ಎನ್ ಮತ್ತು ಪಾಕಿಸ್ಥಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಸಮ್ಮಿಶ್ರ ಸರ್ಕಾರ ರಚಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next