Advertisement

Sandalwood Couple: ಚಂದನ್‌ – ನಿವೇದಿತಾ ವಿಚ್ಚೇದನಕ್ಕೆ ಈ ವಿಚಾರವೇ ಕಾರಣ; ವಕೀಲೆ

03:49 PM Jun 08, 2024 | Team Udayavani |

ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಬಿಗ್‌ ಶಾಕ್‌ ನೀಡಿದ್ದಾರೆ.

Advertisement

ರೀಲ್ಸ್‌ ಮಾಡಿಕೊಂಡು, ಸದಾ ಹಸನ್ಮುಖಿಯಾಗಿ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ಜೋಡಿ ಶುಕ್ರವಾರ(ಜೂ.7 ರಂದು) ಬೆಂಗಳೂರಿನ 2ನೇ ಹೆಚ್ಚುವರಿ ಕೌಟುಂಬಿಕ ಕೋರ್ಟ್ ಗೆ ತೆರಳಿ ವಿಚ್ಚೇದನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.

ಇಬ್ಬರ ನಡುವೆ ಯಾವ ಕಾರಣಕ್ಕೆ ಮನಸ್ತಾಪ ಉಂಟಾಗಿ ಈ ರೀತಿ ಆಯಿತು ಎನ್ನುವುದರ ಬಗ್ಗೆ ಅನೇಕ ಮಾಧ್ಯಮಗಳು ನಾನಾ ರೀತಿಯಲ್ಲಿ ವರದಿ ಮಾಡಿತ್ತು. ಮಗು ಮಾಡಿಕೊಳ್ಳುವ ವಿಚಾರದಲ್ಲಿ ಹಾಗೂ ಕೆರಿಯರ್‌ ಗೆ ಹೆಚ್ಚು ಹೊತ್ತು ನೀಡುವ ನಿಟ್ಟಿನಲ್ಲಿ ಇಬ್ಬರು ಪರಸ್ಪರ ಅರ್ಥ ಮಾಡಿಕೊಂಡು ವಿಚ್ಛೇದನವನ್ನು ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.

ಇದೀಗ ಈ ಬಗ್ಗೆ ಚಂದನ್ ಪರ ವಕೀಲೆ ಅನಿತಾ ಸ್ಪಷ್ಟನೆ ನೀಡಿದ್ದು, ಯಾವ ಕಾರಣದಿಂದಾಗಿ ಇಬ್ಬರು ದೂರವಾಗಿದ್ದಾರೆ ಎನ್ನುವುದರ ಬಗ್ಗೆ ಹೇಳಿದ್ದಾರೆ.

“ಮೊದಲೆಲ್ಲ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ 6 ತಿಂಗಳವರೆಗೆ ಕಾಯಬೇಕಿತ್ತು. ಆದರೆ ಈಗ ಹಾಗಿಲ್ಲ. ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದಿದ್ದರೆ 6 ತಿಂಗಳವರೆಗ ಕಾಯುವ ಅವಶ್ಯಕತೆಯಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ವಿಚ್ಚೇದನಕ್ಕೆ ಮೊದಲು ಇಬ್ಬರ ನಡುವಿನ ಮನಸ್ತಾಪವನ್ನು ದೂರ ಮಾಡುವ ಪ್ರಯತ್ನ ನಡೆಸಲಾಗುತ್ತದೆ. ಚಂದನ್‌ – ನಿವೇದಿತಾ ವಿಚಾರದಲ್ಲೂ ಅದು ನಡೆದಿದೆ. ಆದರೆ ಅದು ಸಫಲವಾಗಿಲ್ಲ” ಎಂದು ಅವರು ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

Advertisement

“ಚಂದನ್‌ – ನಿವೇದಿತಾ ಇಬ್ಬರ ನಡುವಿನ ಆಲೋಚನೆಗಳು ಬೇರೆ ಬೇರೆ. ಇಬ್ಬರ ಆಸಕ್ತಿ ಕೂಡ ಭಿನ್ನವಾಗಿದೆ. ಮಗು ವಿಚಾರದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು ಎನ್ನುವುದು ಎಲ್ಲ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಇಬ್ಬರೂ ಮೆಚ್ಯೂರ್ ಆಗಿದ್ದಾರೆ. ಇಬ್ಬರೂ ಬೆಸ್ಟ್ ಹ್ಯೂಮನ್ ಬೀಯಿಂಗ್ಸ್. ಸೆಲೆಬ್ರಿಟಿ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡೋದು ಸರಿ ಅಲ್ಲ” ಎಂದಿದ್ದಾರೆ.

“ನಿವೇದಿತಾ ಸಿನಿಮಾದಲ್ಲಿ ನಾಯಕಿಯಾಗುವ ವಿಚಾರಕ್ಕೆ ಮನಸ್ತಾಪ ಉಂಟಾಗಿದೆ ಎನ್ನುವುದು ಕೂಡ ಸತ್ಯಕ್ಕೆ ದೂರವಾದ ಮಾತು. ಇಬ್ಬರು ಒಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಹೀಗಿರುವಾಗ ಈ ವಿಚಾರದಲ್ಲಿ ಮನಸ್ತಾಪ ಆಗಿದೆ ಎನ್ನುವುದು ಸುಳ್ಳು. ಇಬ್ಬರು ಜೊತೆಯಾಗಿದ್ದರೂ ಪರಸ್ಪರ ಸಮಯವನ್ನು ನೀಡಲು ಆಗುತ್ತಿರಲಿಲ್ಲ. ಪತಿ ಪತ್ನಿಯಾಗಿ  ಮುಂದುವರೆಯುವ ನಿಟ್ಟಿನಲ್ಲಿ ಹೊಂದಾಣಿಕೆ ಇಲ್ಲದಿರುವುದೇ ಇಬ್ಬರ ವಿಚ್ಚೇದನಕ್ಕೆ ಕಾರಣ” ಎಂದು ಅನಿತಾ ಹೇಳಿದ್ದಾರೆ.

ಅಂದಹಾಗೆ ಕನ್ನಡದ ಬಿಗ್ ಬಾಸ್ ಸೀಸನ್ 5ರಲ್ಲಿ ಮೊದಲ ಬಾರಿಗೆ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಭೇಟಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸ್ನೇಹ, ಪ್ರೀತಿಯಾಗಿ ಬಳಿಕ ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ಅವರು ನಿವೇದಿತಾಗೆ ಪ್ರಪೋಸ್ ಮಾಡಿದ್ದರು. 2020ರ ಫೆಬ್ರವರಿ 26ರಂದು ಚಂದನ್ ಶೆಟ್ಟಿ – ನಿವೇದಿತಾ ವಿವಾಹವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next