ಹನೂರು (ಚಾಮರಾಜನಗರ): ಚಿರತೆ ದಾಳಿಗೆ 4 ಕುರಿಗಳು ಬಲಿಯಾಗಿರುವ ಘಟನೆ ಪೆ. 26ರ ಸೋಮವಾರ ತಡರಾತ್ರಿ ಸಂದನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಈ ಕುರಿಗಳು ಗ್ರಾಮದ ಪಾಸ್ಕ ಮೇರಿ ಎಂಬುವರಿಗೆ ಸೇರಿವೆ.
ಪಾಸ್ಕ ಮೇರಿ ಎಂಬ ರೈತ ಮಹಿಳೆ ಜೀವನಕ್ಕಾಗಿ 4 ಕುರಿಗಳನ್ನು ಸಾಕುತ್ತಿದ್ದರು. ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ಸೋಮವಾರ ತಡರಾತ್ರಿ ಚಿರತೆ ದಾಳಿ ನಡೆಸಿ 4 ಕುರಿಗಳನ್ನು ಬಲಿ ಪಡೆದುಕೊಂಡಿದೆ.
ಇದರಿಂದ ಸಾವಿರಾರು ರೂ. ನಷ್ಟವಾಗಿದ್ದು, ರೈತನಿಗೆ ತುಂಬಲಾರದ ನಷ್ಟ ಉಂಟಾಗಿದ್ದು, ಪರಿಹಾರ ನೀಡಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.
ಜೀವನಕ್ಕೆ ಆಧಾರವಾಗಿದ್ದ ಕುರಿ: ತಾನು ಈ ಮೊದಲೇ ವಿಕಲಚೇತನ ಮಹಿಳೆಯಾಗಿದ್ದು, ಜೀವನಕ್ಕಾಗಿ 4 ಕುರಿಗಳನ್ನು ಸಾಕುತ್ತಿದ್ದೆ. ಕುರಿಗಳನ್ನು ಕಳೆದುಕೊಂಡ ಕಾರಣ ಜೀವನ ನಡೆಸಲು ಕಷ್ಟವಾಗಿದೆ ಎಂದು ಮೇರಿ ಅಳಲು ತೋಡಿಕೊಂಡರು.
ಚಿರತೆ ಸೆರೆಗೆ ಆಗ್ರಹ: ಈ ಭಾಗದಲ್ಲಿ ಇದು ಎರಡನೇ ಬಾರಿ ದಾಳಿಯಾಗಿದ್ದು, ಜನರು ಭಯಭೀತರಾಗಿದ್ದಾರೆ ಇದರಿಂದ ಆದಷ್ಟು ಬೇಗ ಚಿರತೆ ಸೆರೆಗೆ ಆಗ್ರಹಿಸಿದ್ದಾರೆ.