Advertisement

ಡಿಸಿಸಿ ಬ್ಯಾಂಕ್‌ನಿಂದ ಕುರಿ,ಕೋಳಿ, ಹಸು ಸಾಲ

02:09 PM Oct 06, 2020 | Suhan S |

ಕೋಲಾರ: ಕೋವಿಡ್‌ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡು ಹಳ್ಳಿಗಳಿಗೆ ವಾಪಸ್ಸಾಗಿರುವ ಯುವಕರಿಗೆ ಹೊಸ ಚೈತನ್ಯ ತುಂಬಿ ಸ್ವಾವಲಂಬಿ ಬದುಕುಕಟ್ಟಿಕೊಳ್ಳಲು ಕೋಳಿ, ಕುರಿ, ಹಂದಿ, ಹಸು, ರೇಷ್ಮೆಹುಳು ಸಾಕಣೆಗೆ ಮಧ್ಯಮಾವಧಿ ಸಾಲ ವಿತರಣೆ ಬ್ಯಾಂಕಿನ ಮೊದಲ ಆದ್ಯತೆ ಎಂದುಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಾಡಿದರು. ಕೋವಿಡ್‌ನಿಂದಾಗಿ ಅನೇಕ ಉದ್ಯಮ ಗಳಿಗೆ ಆರ್ಥಿಕವಾಗಿ ಪೆಟ್ಟು ಬಿದ್ದಿದ್ದು, ಕೃಷಿ ನೆಮ್ಮದಿ ಬದುಕಿಗೆ ಆಸರೆಯಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ ಹಳ್ಳಿಗಳಿಗೆ ವಾಪಸ್ಸಾಗಿ ನಿರುದ್ಯೋಗಿಗಳಾಗಿರುವ ಯುವಕರಿಗೆ ಬದುಕು ಕಟ್ಟಿಕೊಳ್ಳಲು ಬ್ಯಾಂಕ್‌ ನೆರವಾಗಲು ಬದ್ಧತೆ ಹೊಂದಿದೆ ಎಂದರು.

ಡಿಸಿಸಿ ಬ್ಯಾಂಕ್‌ ಠೇವಣಿ ಸಂಗ್ರಹದಲ್ಲಿ ಮಾತ್ರ ಗುರಿ ತಲುಪಿಲ್ಲ, ಉಳಿದಂತೆ ಎಲ್ಲಾ ಆಯಾಮಗಳಲ್ಲೂ ಅತ್ಯಂತ ಉತ್ತಮ ಸ್ಥಾನ ಪಡೆದಿದೆ. ಸಿಬ್ಬಂದಿ ಠೇವಣಿ ದುಪ್ಪಟ್ಟು ಮಾಡಲು ಇಚ್ಚಾಶಕ್ತಿಯಿಂದ ನಿಮ್ಮ ಬ್ಯಾಂಕ್‌ ಎಂಬ ಭಾವನೆಯಿಂದ ಕೆಲಸ ಮಾಡಿ, ನಬಾರ್ಡ್‌ನ ಠೇವಣಿ ಸಂಗ್ರಹ ಗುರಿ ಸಾಧಿಸಲು ಪಣತೊಡಿ ಎಂದು ಕಿವಿಮಾತು ಹೇಳಿದರು.

ಮಹಿಳೆಯರಿಗೆ ಸಾಲ ಹೆಗ್ಗಳಿಕೆ: ನಬಾರ್ಡ್‌ ಎಜಿಎಂ ನಟರಾಜನ್‌ ಮಾತನಾಡಿ, ಮಹಿಳೆಯರಿಗೆ ಅತಿ ಹೆಚ್ಚು ಸಾಲ ನೀಡಿದ ಮತ್ತು ಮರುಪಾವತಿಯಲ್ಲೂ ದಾಖಲೆ ಬರೆದಿರುವುದಲ್ಲಿ ಕೋಲಾರ ಡಿಸಿಸಿ ಬ್ಯಾಂಕ್‌ ಹೆಗ್ಗಳಿಕೆ ಹೊಂದಿದೆ. ಮಹಿಳೆಯರಿಗೆ ಉದ್ಯೋಗ ಆಧಾರಿತ ತರಬೇತಿ ನೀಡಲೂ ಚಿಂತನೆ ಮಾಡಿ ಎಂದು ಸಲಹೆ ನೀಡಿದರು. ಸಾಲದ ಹಣಕ್ಕಾಗಿ ಅವಲಂಬನೆ ತಪ್ಪಿಸಲು ಬ್ಯಾಂಕಿನ ಠೇವಣಿ ಪ್ರಮಾಣ ಹೆಚ್ಚಿಸುವಂತೆ ಸಲಹೆ ನೀಡಿದ ಅವರು, ವೈಯುಕ್ತಿಕ ಠೇವಣಿ ಸಂಗ್ರಹಕ್ಕೆ ಒತ್ತು ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಎಂಎಎಸ್‌ಸಿಗಳ ಪ್ರಯೋಜನ ಪಡೆಯಿರಿ: ಅಫೆಕ್ಸ್‌ ಬ್ಯಾಂಕ್‌ ಸಿಜಿಎಂ ದಾಕ್ಷಾಯಿಣಿ, ಫ್ಯಾಕ್ಸ್‌ಗಳನ್ನು ವಿವಿಧೋದ್ದೇಶ ಸೇವಾ ಕೇಂದ್ರವಾಗಿಸುವ ಪ್ರಕ್ರಿಯೆಗೆ ಆದ್ಯತೆ ನೀಡಿ, ರೈತರಿಗೆ ಕೃಷಿ ಸಂಬಂಧಿತ ಪ್ರತಿ ಸೇವೆ ಗಳು ಒಂದೇ ಸೂರಿನಡಿ ಸಿಗುವಂತೆ ಮಾಡಲು ಈ ಸೇವಾ ಕೇಂದ್ರಗಳ ಯೋಜನೆ ಅನುಷ್ಟಾನಗೊಳಿಸಿ ಎಂದು ಸಲಹೆ ನೀಡಿದರು.

Advertisement

ಜಿಲ್ಲಾ ಸಹಕಾರ ಇಲಾಖೆ ಉಪನಿಬಂಧಕ ನೀಲಪ್ಪನವರ್‌, ಆರ್ಥಿಕ ಚಟುವಟಿಕೆಗಳಿಗೆ ತರಬೇತಿ ಅಗತ್ಯ. ಈ ನಿಟ್ಟಿನಲ್ಲಿ ಸಾಲ ನೀಡುವುದರ ಜತೆಗೆ ತರ ಬೇತಿಗೂ ಆದ್ಯತೆ ನೀಡಿ ಎಂದರು. ಇದೀಗ ಡಿಸಿಸಿ ಬ್ಯಾಂಕ್‌ ಮೈಕ್ರೋ ಎಟಿಎಂ ಮೂಲಕ ಕ್ರಾಂತಿ ನಡೆಸಿದ್ದು, ಡೇರಿಗಳು, ಸದಸ್ಯರು ತಮ್ಮ ಉಳಿತಾಯ ಖಾತೆಗಳನ್ನುಕಡ್ಡಾಯವಾಗಿ ಡಿಸಿಸಿ ಬ್ಯಾಂಕಿನಲ್ಲೇ ಮಾಡಿಸಲು ಸುತ್ತೋಲೆ ಹೊರಡಿಸುವುದಾಗಿ ಭರವಸೆ ನೀಡಿದರು. ಲೆಕ್ಕಪರಿಶೋಧನಾ ಇಲಾಖೆ ಜಂಟಿ ನಿರ್ದೇಶಕಿ

ಶಾಂತಕುಮಾರಿ, ಒಂದೆರಡು ಫ್ಯಾಕ್ಸ್‌ ಹೊರತುಪಡಿಸಿ ಉಳಿದೆಲ್ಲಾ ಸೊಸೆ„ಟಿಗಳ ಲೆಕ್ಕಪರಿಶೋಧನೆ ಮುಗಿಸಿರುವುದು ಶ್ಲಾಘನೀಯ. ಮುಂದಿನ 3 ದಿನಗಳಲ್ಲಿ ಉಳಿದಸಂಘಗಳ ಲೆಕ್ಕಪರಿಶೋಧನೆ ಮುಗಿಸುವುದಾಗಿ ತಿಳಿಸಿದರು. ಬ್ಯಾಂಕಿನ ಉಪಾಧ್ಯಕ್ಷ ನಾಗರಾಜ್‌, ನಿರ್ದೇಶಕ ಚೆನ್ನರಾಯಪ್ಪ, ವ್ಯವಸ್ಥಾಪಕ ನಿರ್ದೇಶಕ ರವಿ, ಎಜಿಎಂಗಳಾದ ಬೈರೇಗೌಡ, ಶಿವಕುಮಾರ್‌, ಖಲೀಮುಲ್ಲಾ ಮತ್ತಿತರರಿದ್ದರು.

ಸಾಲ ವಿತರಿಸುವಾಗ ನಾವು ಪ್ರಾಮಾಣಿಕವಾಗಿ ನೀಡಿದರೆ ಮರುಪಾವತಿಯೂ ಅಷ್ಟೇ ಉತ್ತಮವಾಗಿ ರುತ್ತದೆ. ಸಿಬ್ಬಂದಿ ಭ್ರಷ್ಟತೆಗೆ ಅವಕಾಶ ನೀಡಬಾರದು, ಬದುಕುಕಟ್ಟಿಕೊಳ್ಳಲು ಮುಂದೆ ಬರುವಯುವಕರಿಗೆ ಸಾಲ ಒದಗಿಸುವ ಪ್ರಾಮಾಣಿಕಕಾರ್ಯದಲ್ಲಿ ಕೈಜೋಡಿಸಬೇಕು.-ಬ್ಯಾಲಹಳ್ಳಿ ಗೋವಿಂದಗೌಡ, ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next