Advertisement

ಲಕ್ಷ್ಮೇಶ್ವರದಲ್ಲಿ ಮೈನವಿರೇಳಿಸಿದ ಟಗರಿನ ಕಾಳಗ

04:15 PM Dec 29, 2020 | Team Udayavani |

ಲಕ್ಷ್ಮೇಶ್ವರ: ಪಟ್ಟಣದ ದುಂಡಿಬಸವೇಶ್ವರ ದೇವಸ್ಥಾನದ ರಸ್ತೆಯ ಜಮೀನಿನಲ್ಲಿ ಎರಡು ದಿನ ನಡೆದ ಟಗರಿನ ಕಾಳಗ ಸೋಮವಾರ ಮುಕ್ತಾಯವಾಯಿತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಟಗರುಗಳ ಗುದ್ದಾಟದ ಮೈ ನವಿರೇಳಿಸುವ ದ್ಯಶ್ಯಗಳ ನಡುವೆ ಪಂದ್ಯಾವಳಿ ಯಶಸ್ವಿಯಾಗಿ ನೆರವೇರಿತು.

Advertisement

ಐದು ಹಂತದ ಪಂದ್ಯಾವಳಿಯಲ್ಲಿ ಕ್ರಮವಾಗಿ 30000, 15000, 10000, 8000, 6000 ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು. ವಿಜೇತ ತಂಡಗಳಿಗೆ ಪಿಎಸ್‌ಐ ಶಿವಯೋಗಿ ಲೋಹಾರ ಬಹುಮಾನ ವಿತರಿಸಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ನಮ್ಮ ಹಿರಿಯರ ಬಳುವಳಿಯಾಗಿವೆ. ಯುವಕರು ದುಶ್ಚಟಗಳಿಂದ ದೂರವಿದ್ದು ಗ್ರಾಮೀಣ ಕ್ರೀಡೆಗಳತ್ತ ಒಲವು ತೋರಬೇಕು.
ದ್ವೇಷ, ತಂಟೆ-ತಕರಾರು ಬಿಟ್ಟು ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು.

ಪ್ರಸ್ತುತ ಕೊರೊನಾ ಸಂಕಷ್ಟದ ಕಾಲದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ ಮಾರ್ಗಸೂಚಿ ಪಾಲಿಸಬೇಕು ಎಂದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ತಾಲೂಕಾಧ್ಯಕ್ಷ ನಾಗೇಶ ಅಮರಾಪುರ, ಆಸ್ಪಾಕ ಬಾಗೋಡಿ,
ಮುಜಾಮಿಲ್‌ ಬೇಪಾರಿ, ಪ್ರಕಾಶ ಉದ್ದನಗೌಡ್ರ, ಅಪ್ಪು ಉಮಚಗಿ, ಶಂಕರ ಪಾಟೀಲ, ಪ್ರಕಾಶ ಉದ್ದನಗೌಡ್ರ, ಪ್ರವೀಣ ಗಾಣಿಗೇರ, ಕಾರ್ತಿಕ ಗುಡಗೇರಿ, ಸುಲೇಮಾನ ಕೂಬಿಹಾಳ, ದುದ್ದುಸಾಬ ಅಕ್ಕಿ, ಮೈನು ಮನಿಯಾರ, ದ್ಯಾಮಣ್ಣ ಬಾರ್ಕಿ ರಾಮು ನಾಯಕ್‌, ಬಸವರಾಜ ಅಮರಾಪುರ, ಹನುಮಂತ ದುತ್ತರಗಿ, ತುಳಜಪ್ಪ ಪವಾರ, ಮುತ್ತು ಗಾಣಿಗೇರ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next