Advertisement

ಕಲ್ಕೆರೆ ಕೆರೆಗೆ ಕೊಳಚೆ ನೀರು: ಜಲಚರಗಳಿಗೆ ಸಂಚಕಾರ

12:14 PM Apr 08, 2018 | |

ಕೆ.ಆರ್‌.ಪುರ: ನಗರದ ದೊಡ್ಡ ಕರೆಗಳಲ್ಲೊಂದಾದ ಕಲ್ಕೆರೆ ಕೆರೆಗೆ ಕೊಳಚೆ ನೀರು ಸೇರದಂತೆ ಜಲಮಂಡಳಿ ಕೊಳಚೆ ನೀರು ಸಂಸ್ಕರಣ ಘಟಕ ಸ್ಥಾಪನೆ ಮಾಡಿದೆ, ಆದರೆ ಕೆರೆಯ ಒಡಲಿಗೆ ಕಲುಷಿತ ನೀರು ಸೇರುತ್ತಿರುವುದರಿಂದ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಜಲಚರಗಳಿಗೆ ಸಂಚಕಾರ ಬಂದೊದಗಿದೆ.

Advertisement

ಕಲ್ಕೆರೆ ಕೆರೆ ಮಾಲಿನಗೊಂಡಿದ್ದರಿಂದ ಎರಡು ವರ್ಷದ ಹಿಂದೆ ಕೆರೆ ಒಳಕೋಡಿ ಅಭಿವೃದ್ಧಿ, ಕೆರೆ ಮಧ್ಯ ಎರಡು ದ್ವೀಪಗಳು, ರಿಂಗ್‌ಬಾಂಡ್‌, ಕೊಳಚೆ ನೀರು ತಿರುವು, ನೀರುಗಾಲುವೆ, ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣ ಮಾಡಲು ಬಿಬಿಎಂಪಿ 22 ಕೋಟಿ ವೆಚ್ಚದಲ್ಲಿ ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಂಡಿತ್ತು.

ಸರಿಯಾದ ಕಾಮಗಾರಿಯಾಗದ ಹಿನ್ನೆಲೆ ಎರಡು ದಿನದ ಹಿಂದೆ ಅಮ್ಲಜನಕ ಪ್ರಮಾಣ ಕಡಿಮೆಯಾಗಿ ವಲಸೆ ಬಂದಿರುವ ಬ್ಲಾಕ್‌ಹೆಡೆಡ್‌ ಐಬಿಸ್‌, ಪೆಂಟೆಡ್‌, ಪಿಸೆಂಟ್‌ ಟೆಯಿಲ್ಡ್‌ ಹಕ್ಕಿಗಳು ಸಾವಿಗೀಡಾಗಿರು ವುದರಿಂದ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ಇತ್ತಿಚೆಗೆ ಸುರಿದ ಮಳೆಯಿಂದ ಒಳ ಹರಿವು ಹೆಚ್ಚಿ ಒಳಕೋಡಿ ಸೋರಿ, ಕೊಳಚೆ ನೀರು ಕೆರೆಗೆ ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

186 ಎಕರೆ ವಿಸ್ತಿರ್ಣವಿರುವ ಕೆರೆಗೆ ಹೊರಮಾವು, ಹೆಬ್ಟಾಳ ಮತ್ತು ನಾಗವಾರ ಕಡೆಯಿಂದ ಬರುವ ರಾಜಾಕಾಲುವೆ ನೀರು ಸಂಪರ್ಕ ಪಡೆಯುತ್ತಿದೆ. ಕನಕಶ್ರೀ ಬಡಾವಣೆ ಮತ್ತು ಹೊರಮಾವು ಬಾಗದಲ್ಲಿ ಪ್ರವೇಶ ದ್ವಾರಗಳಿವೆ, ಪುಂಡಪೋಕರಿಗಳ ಹಾವಳಿ ಮತ್ತು ತ್ಯಾಜ್ಯ ಸುರಿಯದಂತೆ ಭದ್ರತಾಸಿಬ್ಬಂದಿ ಇದ್ದರೂ ಸಹ ರಾತ್ರೀ ವೇಳೆಯಲ್ಲಿ ಕೆರೆಯ ದಡದಲ್ಲಿ ಕಸ ಸುರಿಯುತ್ತಿದ್ದಾರೆ ಎಂದು ಇಲ್ಲಿನ ನಿವಾಸಿಗಳು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next