Advertisement
1940ರ ಸೆ. 24ರಂದು ಕೋಲ್ಕತ್ತಾದಲ್ಲಿ ಜನಿಸಿದ ಈ ಒಲಿಂಪಿಯನ್ ಉತ್ತಮ ಈಜುಪಟುವಾಗ ಬೇಕು ಎಂಬ ಕನಸನ್ನು ಕಂಡಿದ್ದರು. ಇಂಗ್ಲಿಷ್ ಚಾನೆಲ್ ಎಂದು ಕರೆಸಿಕೊಳ್ಳುವ ಫ್ರಾನ್ಸ್‌ನ್ ಕೇಪ್ ಗ್ರಿಸ್ ನೆಜ್‌ನಿಂದ ಇಂಗ್ಲೆಂಡ್‌ನ ಸ್ಯಾಂಡ್‌ಗೇಟ್‌ನ 42 ಮೈಲಿ ದೂರವನ್ನು ಈಜುವ ಮೂಲಕ ಇಂಗ್ಲಿಷ್ ಚಾನೆಲ್‌ಯನ್ನು ದಾಟಿದ ಏಷ್ಯಾದ ಮೊದಲ ಮಹಿಳೆ ಎಂಬ ಖ್ಯಾತಿಯನ್ನು ಆರತಿ ಶಾ ಪಡೆದಿದ್ದಾರೆ. ಪದ್ಮಶ್ರೀ ಪಡೆದ ಮೊದಲ ಕೀಡಾಪಟು / ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
Related Articles
Advertisement
4 ನೇ ವಯಸ್ಸಿನಲ್ಲಿ ಶಾ ಅವರು ಚಿಕ್ಕಪ್ಪ ಜತೆಗೆ ಘಾಟ್‌ಗೆ ಸ್ನಾನಕ್ಕೆ ಹೋಗುತ್ತಿದ್ದರು ಅಲ್ಲಿ ಅವರ ಈಜು ಆಸಕ್ತಿಯನ್ನು ಗಮನಿಸಿದ ತಂದೆ ಪಂಚುಗೋಪಾಲ್ ಮಗಳನ್ನು ಈಜು ಕ್ಲಬ್‌ಗೆ ಸೇರಿಸುತ್ತಾರೆ. 1946ರಲ್ಲಿ ತನ್ನ 5 ನೇ ವಯಸ್ಸಿನಲ್ಲಿ ಶೈಲೇಂದ್ರ ಸ್ಮಾರಕ ನಡೆಸಿದ 110 ಯಾರ್ಡ್ ಫ್ರೀ ಸ್ಟೈಲ್ ಈಜು ಸ್ವರ್ಧೆಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಭಾರತೀಯ ಈಜುಗಾರ ಮಹಿರ್ ಸೇನ್ ಅವರಿಂದ ಆರತಿ ಸಾ ಅವರು ಸ್ಫೂರ್ತಿ ಪಡೆದಿದ್ದರು.
1945 ರಿಂದ 1951 ರ ನಡುವೆ 22 ರಾಜ್ಯಮಟ್ಟದ ಸ್ವರ್ಧೆಗಲ್ಲಿ ಗೆಲುವನ್ನು ಸಾಧಿಸಿದ್ದರು. 1948ರಲ್ಲಿ ಮುಂಬಯಿನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿಯ ಪದಕ ಗಳಿಸಿದರು. 1952ರ ಸಮ್ಮರ್ ಒಲಿಂಪಿಕ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ.
1959ರಲ್ಲಿ ಶಾ ಡಾ| ಅರುಣ್ ಗುಪ್ತಾ ಅವರನ್ನು ವಿವಾಹವಾಗುತ್ತಾರೆ. ಈ ದಂಪತಿಗೆ ಅರ್ಚನಾ ಎಂಬ ಮಗಳಿದ್ದಾರೆ. 1994 ಆಗಸ್ಟ್ 4 ರಂದು ಕಾಮಾಲೆ ರೋಗದಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. 19 ದಿನಗಳ ಕಾಲ ಅನಾರೋಗದ ವಿರುದ್ಧ ಹೋರಾಡಿ ಆಗಸ್ಟ್ 23ರಂದು ನಿಧನ ಹೊಂದುತ್ತಾರೆ. ಅದೆಷ್ಟೊ ಕ್ರೀಡಾಪಟುಗಳಿಗೆ ಆರತಿ ಶಾ ಸ್ಫೂರ್ತಿಯ ಚೆಲುಮೆಯಾಗಿದ್ದಾರೆ.
ಧನ್ಯಶ್ರೀ ಬೋಳಿಯಾರು