Advertisement

ಕ್ಯಾನ್ಸರ್ ಪೀಡಿತರಿಗಾಗಿ ತನ್ನ ತಲೆ ಕೂದಲನ್ನು ಬೋಳಿಸಿಕೊಂಡ ಮಹಿಳಾ ಪೊಲೀಸ್ ಅಧಿಕಾರಿ

04:58 PM Apr 08, 2020 | Team Udayavani |

ಕೇರಳ : ಇನ್ನೊಬ್ಬರಿಗೆ ಸಹಾಯವನ್ನು ಹೇಗೆ ಬೇಕಾದರೂ ಮಾಡಬಹುದು. ಸಹಾಯ ಮಾಡುವವರಿಗೆ ಅರ್ಹತೆ ಬೇಕಾಗಿಲ್ಲ.ಹಣ ಬೇಕಾಗಿಲ್ಲ ಒಂದೊಳ್ಳೆ ಮನಸ್ಸು ಇದ್ದಾರೆ ಸಾಕು. ಈ ಮಾತಿಗೆ ಉದಾಹರಣೆಯಾಗಿ ನಿಂತಿದ್ದಾರೆ ಕೇರಳದ ಮಹಿಳಾ ಪೊಲೀಸ್ ಅಧಿಕಾರಿ ಅಪರ್ಣಾ ಲವಕುಮಾರ್.

Advertisement

ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜಲಕುಡದಲ್ಲಿ ವಾಸಿಸುವ ಪೊಲೀಸ್ ಅಧಿಕಾರಿ ಅಪರ್ಣಾ. ತನ್ನ ತಲೆ ಕೂದಲನ್ನು ಬೋಳಿಸಿಕೊಂಡು ಅದನ್ನು ಕ್ಯಾನ್ಸ್ ರ್ ಪೀಡಿತರಿಗಾಗಿ ವಿಗ್ ತಯಾರಿಸಲು ದಾನವಾಗಿಸಿದ್ದಾರೆ.!

ಕಳೆದ ಕೆಲ ದಿನಗಳ ಹಿಂದೆ ಅಪರ್ಣಾ ಸ್ಥಳೀಯ ಶಾಲೆಯೊಂದರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಆಗ ಅಲ್ಲೊಬ್ಬ ಕೂದಲು ಬೋಳಿಸಿರುವ ಕ್ಯಾನ್ಸರ್ ಪೀಡಿತ ಹುಡುಗನನ್ನು ನೋಡುತ್ತಾರೆ.ಇದು ಅಪರ್ಣಾ ಅವರನ್ನು ಕಾಡುತ್ತದೆ.

ಅದೇ ದಿನ ಅಪರ್ಣಾ  ಸ್ಥಳೀಯ ಪಾರ್ಲರ್ ವೊಂದಕ್ಕೆ ಹೋಗಿ ತಮ್ಮ ತಲೆ ಕೂದಲನ್ನು ಬೋಳಿಸಿದ್ದಾರೆ. ತನ್ನಿಂದ ಆರ್ಥಿಕ ಸಹಾಯ ಆಗದೇ ಇದ್ರು ಪರವಾಗಿಲ್ಲ ಈ ರೀತಿಯ ಸಹಾಯ ಆದರೂ ಆಗಲಿ,ಇದು ದೊಡ್ಡ ಸಹಾಯ ಅಲ್ಲ ನನಗಿಂತ ಹೆಚ್ಚಿನ ಹಾಗೂ ಮಹತ್ತರವಾದ ಸಹಾಯವನ್ನು ಮಾಡುವವರು ಇದ್ದಾರೆ ಎಂದು ಹೇಳುತ್ತಾರೆ ಅಪರ್ಣಾ.

ನಾನು ನನ್ನ ಕೂದಲುನ್ನು ಯಾರ ಬಳಿಯೂ ಮುಂಚಿತವಾಗಿ ಹೇಳದೆ ಕ್ಷೌರ ಮಾಡಿಸಿದ್ದೇನೆ. ಒಂದು ವೇಳೆ ಮೊದಲೇ ಹೇಳಿ ಮಾಡೋಕೆ ಹೊರಟಿದ್ರೆ ಇದಕ್ಕೆ ಅಡ್ಡಿ ಆಗುತ್ತಿತ್ತು. ನನ್ನ ಕೂದಲು ಒಂದು ಅಥವಾ ಎರಡು ವರ್ಷದ ನಂತರ ಮತ್ತೆ ಬರಬಹುದು ಆದರೆ ಇನ್ನೊಬ್ಬರ ಬಾಳಿನಲ್ಲಿ ಆಸರೆ ಆಗುವುದರಲ್ಲಿ ಖುಷಿ ಇದೆ ಅನ್ನುತ್ತಾರೆ ಅಪರ್ಣಾ.

Advertisement

ಅಪರ್ಣಾ ಈ ಹಿಂದೆ ಆಸ್ಪತ್ರೆಯಲ್ಲಿ ಬಡ ಕುಟುಂಬವೊಂದು ಬಿಲ್ ಪಾವತಿಸಲು ಕಷ್ಟ ಪಡುತ್ತಿದ್ದ ಸಮಯದಲ್ಲಿ ತನ್ನ ಮೂರು ಚಿನ್ನದ ಬಳೆಗಳನ್ನು ಕೊಟ್ಟು ಆ ಕುಟುಂಬಕ್ಕೆ ಸಹಾಯವಾಗಿ ನಿಂತಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next