Advertisement

ಕಟ್ಟಿದ ಕನಸುಗಳು ಗಾಳಿಗೆ ತೂರದಂತೆ ತನ್ನ ಸೆರಗಿನೊಳಗೆ ಹಿಡಿದಿಟ್ಟು ನನಸಾಗಿಸುತ್ತಿದ್ದ ಅವ್ವ

02:37 AM May 10, 2020 | Hari Prasad |

ಮನೆಯೊಳಗಿನ ಅವ್ವ, ಮನೆ ಹೊರಗಿನ ಅವ್ವ ಈ ಎರಡು ಅವ್ವ ಒಬ್ಬಳೇ. ಮನೆಯೊಳಗೆ ತಾನು ಒಲೆಯ ಹೊಗೆಯಲ್ಲಿ ಬೆಂದು ಬೆವರುತ್ತಿದ್ದರೂ ಅವಳ ಮಾತು ಯಾವ ಫ್ಯಾನು, ಎಸಿ ಮನೆಗಳ ಸರೀಕರಿಗಿಂತ ಕಡಿಮೆ ಇರಲಿಲ್ಲ.

Advertisement

ಮೆಣಸುಬೆಳ್ಳುಳ್ಳಿ ಕಾರ, ಹಿಟ್ಟು (ಮುದ್ದೆ) ತಿಂದರೂ ಮಕ್ಕಳು ಹೊರ ಜಗತ್ತಿನ ಫೀಜಾ ಬರ್ಗರ್ ಗಳ, ಕೇಸರಿಬಾತ್, ಪುಲಾವ್ ಗಳ ತಿಂದವರ ನಡುವೆ ನಾವು ಸಹ ಅದನ್ನೇ ತಿಂದು ಬಂದವರಂತೆ ಅವರ ಸರಿ ಸಮಾನಕ್ಕೇ ಉಮೇದಿನಲ್ಲಿ ಬದುಕುವುದನ್ನು ಕಲಿಸಿಕೊಟ್ಟವಳು ನನ್ನವ್ವ.

ಎಲ್ಲರಂತಹ ಬದುಕು ನಮ್ಮದಲ್ಲದಿದ್ದರೂ ಅವ್ವನ ಬದುಕು ಎಲ್ಲರಿಗಿಂತ ಭಿನ್ನ. ಆಡಿ ಹಂಗಿಸುವವರ ನಡುವೆ ಬಡಾಯಿ ತೋಡಿಕೊಳ್ಳುವ ಅವ್ವನ ವರಸೆಗೆ ಯಾರೂ ಸರಿಸಾಟಿಯಲ್ಲ. ಅವಳು ಕಟ್ಟಿದ ಕನಸುಗಳು ಗಾಳಿಗೆ ತೂರದಂತೆ ತನ್ನ ಸೆರಗಿನೊಳಗೆ ಹಿಡಿದಿಟ್ಟು ನನಸಾಗಿಸುತ್ತಿದ್ದ ಅವ್ವ ನನ್ನ ಉಸಿರು.

ನಾನು ಪಿಯುಸಿಯಲ್ಲಿ ಫಸ್ಟ್ ಕ್ಲಾಸ್ ಪಡೆದದ್ದಕ್ಕೆ ಸರ್ಕಾರ ಕೊಟ್ಟ ಬಹುಮಾನದ ಹಣದಲ್ಲಿ ಅವ್ವನಿಗೆ ಕಿವಿಯೋಲೆ ಕೊಡಿಸಿದ್ದು ಮೊದಲ ಉಡುಗೊರೆ. ಇಂದು ಅವಳ ದಿನ ಅವಳಿಗೆ ಹೃದಯ ತುಂಬಿದ ನಮನಗಳು.

ಬದುಕಿನ ದಾರಿಯಲ್ಲಿ ಕಲ್ಲು ಮುಳ್ಳುಗಳಿವೆ ಅದರ ಜೊತೆ ಪ್ರೀತಿಸುವ ಎರಡು ಮಳ್ಳುಗಳಿವೆ (ಮಡಿಲು) ಅದುವೇ ಅಪ್ಪ-ಅಮ್ಮ ಅದರಲ್ಲಿಯೂ ಪ್ರೀತಿ ತ್ಯಾಗ ಕರುಣೆಯ ಮಹಾಸಂಗಮ ‘ಅಮ್ಮ’ ಅಮ್ಮ ಎಂಬ ಪದಕ್ಕೆ ಕೊನೆ ಇಲ್ಲ.

Advertisement

ಆ ಪದ ಯಾವತ್ತು ಶಾಶ್ವತವಾಗಿರುತ್ತದೆ ಆದಕ್ಕೆ ಬರವಣಿಗೆ, ವರ್ಣನೆ, ಹಾಡು, ಚಿತ್ರ, ಕಾವ್ಯ ಕಾದಂಬರಿ ಬಿಡಿಸಿ ಬರೆದರೂ, ಏನೇ ಮಾಡಿದರು ಕಡಿಮೆಯೇ.

ಅಮ್ಮ ಬೆಲೆ ಕಟ್ಟಲಾಗದಂತ ಅಮೂಲ್ಯ ರತ್ನ. ತನ್ನ ನೋವುಗಳನ್ನು ಬಚ್ಚಿಟ್ಟು ನಮ್ಮ ನಗುವ ನೋಡಿ ನಗುವಳು ತಾನು ಹಸಿದು ನಮಗೆ ಅನ್ನ ನೀಡುವಳು ನಮಗೆ ನೋವಾದರೆ ಮರುಗುವಳು ನಮಗಾಗಿ ತ್ಯಾಗಮಾಡುವಳು ಉಸಿರು ಕೊಟ್ಟು ಈ ಜನ್ಮ ನೀಡಿ ಹೆಸರನ್ನಿಟ್ಟು ಜಗಕೆ ತೋರಿ ಮುತ್ತುಕೊಟ್ಟು ತುತ್ತು ತಿನ್ನಿಸಿ ಸಾಕಿ-ಸಲಹಿದ ಜನ್ಮದಾತೆಗೆ ಭಕ್ತಿಪೂರ್ವಕ ನಮನಗಳು.

– ಅಶೋಕ್, ಉಪನ್ಯಾಸಕರು, ಬಾಗಳಿ ಗ್ರಾಮ ಚಾಮರಾಜನಗರ ತಾಲೂಕು ಮತ್ತು ಜಿಲ್ಲೆ.

Advertisement

Udayavani is now on Telegram. Click here to join our channel and stay updated with the latest news.

Next