Advertisement

ಯೋಗಾಸನದ ವೇಳೆ 80 ಅಡಿ ಆಳಕ್ಕೆ ಬಿದ್ದಳು!

01:48 AM Aug 28, 2019 | mahesh |

ಮೆಕ್ಸಿಕೋ ಸಿಟಿ: ಅಪಾರ್ಟ್‌ಮೆಂಟ್ ಬಾಲ್ಕನಿಯಲ್ಲಿ ನಿಂತು ಯೋಗಾಭ್ಯಾಸದಲ್ಲಿ ನಿರತಳಾಗಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆಯತಪ್ಪಿ 80 ಅಡಿ ಆಳಕ್ಕೆ ಬಿದ್ದು, ಅದೃಷ್ಟವಶಾತ್‌ ಬದುಕುಳಿದ ಘಟನೆ ಮೆಕ್ಸಿಕೋ ದಲ್ಲಿ ನಡೆದಿದೆ. ಅಲೆಕ್ಸಾ ಟೆರಾಜಾ (23) ಎಂಬಾಕೆ ತನ್ನ 6 ಮಹ ಡಿಯ ಅಪಾರ್ಟ್‌ಮೆಂಟ್‌ನ ಬಾಲ್ಕನಿಯ ತುದಿಯಲ್ಲಿ ನಿಂತು ಕ್ಲಿಷ್ಟಕರವಾದ ಯೋಗಾಸನ ಮಾಡುತ್ತಿದ್ದಳು. ಈ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ 110 ಮೂಳೆಗಳು ಮುರಿದಿದ್ದು, 3 ವರ್ಷಗಳ ಕಾಲ ನಡೆಯಲು ಆಗದು ಎಂದು ವೈದ್ಯರು ಹೇಳಿದ್ದಾರೆ. ಅಲೆಕ್ಸಾಳಿಗೆ 11 ಗಂಟೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next