Advertisement

ಕಾಪಿ ಮಾಡಲು ಅವಕಾಶವಿದ್ದರೂ ಆಕೆ ಕಾಪಿ ಮಾಡಲಿಲ್ಲ

03:50 AM Mar 28, 2017 | |

ಇದು ಕಟ್ಟುಕತೆಯಲ್ಲ, ನಮ್ಮ ಮನೆಯಲ್ಲಿ ನಡೆದ ನಿಜಸಂಗತಿ. ಕಾಪಿ ಮಾಡಲು ಅವಕಾಶದ್ದರೂ, ಕಾಪಿ ಹೊಡೆಯದ ಜಾಣೆ, ಪುಟ್ಟ ಮುಗ್ಧ ಬಾಲಕಿಯ “ಕಾಪಿ ಹೊಡೆಯದ’ ಪ್ರಸಂಗ. 

Advertisement

ನನ್ನ ಅಕ್ಕನ ಮಗಳು ಲಾವಣ್ಯ, ಎರಡನೇ ಕ್ಲಾಸ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಎಕ್ಸಾಂನಲ್ಲಿ “ಎರೇಸರ್‌’ (Eraser) ಅನ್ನೋ ಪದವನ್ನು ಬಳಸಿ ಯಾವುದೇ ಒಂದು ವಾಕ್ಯವನ್ನು ರಚಿಸಬೇಕಿತ್ತು. ಆದರೆ ಪಾಪ ಆ ಪುಟ್ಟ ಕಂದನಿಗೆ ಇಂಗ್ಲಿಷ್‌ನಲ್ಲಿ “ಎರೇಸರ್‌’ ಪದದ ಸ್ಪೆಲ್ಲಿಂಗೇ  ಸರಿಯಾಗಿ ನೆನಪಾಗುತ್ತಿಲ್ಲ. ಹಾಗೂ ಹೀಗೂ ಯೋಚಿಸಿ ಕೊನೆಗೂ “ಎರೇಸರ್‌’ ಪದ ಬರೆದು ಬಂದು. ಆದರೆ ಆ ಪದವನ್ನು ತಪ್ಪಾಗಿ ಬರೆದಿದ್ದಳು. ಮನೆಗೆ ಬಂದು ಅವಳಮ್ಮನ ಹತ್ತಿರ ಸ್ಪೆಲ್ಲಿಂಗ್‌ ಚೆಕ್‌ ಮಾಡಿಕೊಂಡ ಲಾವಣ್ಯಳಿಗೆ ತಾನು ಬರೆದಿದ್ದು ತಪ್ಪು ಅಂತ ಗೊತ್ತಾಯ್ತು. ನಂತರ ಕೊಂಚ ಬೇಸರಗೊಂಡ ಮಗು ಸುಮ್ಮನಾಗಿತ್ತು. 

ಆದರೆ ಅವಳ ಅಮ್ಮ “ಪುಟ್ಟಾ, ಎರೇಸರ್‌ ಸ್ಪೆಲ್ಲಿಂಗ್‌ ನಿನ್ನ ಹೊಸ ರಬ್ಬರ್‌ ಮೇಲೇ ಬರೆದಿತ್ತಲ್ಲ… ಅದನ್ನೇ ನೋಡಿ ಬರೀಬಹುದಿತ್ತಲ್ಲ?’ ಎಂದು ಹೇಳಿದಾಗ ಪುಟ್ಟಿ “ಅಮ್ಮ, ನಂಗೆ ಅಷ್ಟು ಗೊತ್ತಾಗಲ್ವಾ? ನಂಗೆ ಗೊತ್ತಿತ್ತು. ಅದರ ಸ್ಪೆಲ್ಲಿಂಗ್‌ ಹೊಸ ರಬ್ಬರ್‌ ಮೇಲೆ ಬರೆದಿತ್ತು ಅಂತ, ಆದ್ರೆ ಅದನ್ನ ನೋಡಿ ಬರೆದ್ರೆ ಕಾಪಿ ಹೊಡೆದ ಹಾಗೆ ಅಲ್ವಾ ಅಮ್ಮ? ಕಾಪಿ ಹೊಡೆೆಯೋದು ತಪ್ಪು ಅಲ್ವಾ ಅಮ್ಮ?’ ಎಂದು ಅದೇ ಮುಗ್ಧ ಕಂಠದಿಂದ ಕೇಳಿತು. ಪುಟ್ಟ ಮಗಳ ಮುಗ್ಧ ಪ್ರಾಮಾಣಿಕತೆಗೆ ನನ್ನಕ್ಕ ಶಹಬ್ಟಾಶ್‌ಗಿರಿ ಕೊಟ್ಟಳು. ಮನೆಮಂದಿಯೊಂದಿಗೆ ನಡೆದ ಘಟನೆ ಹೇಳಿ ಮಗಳ ಪ್ರಾಮಾಣಿಕತೆಯನ್ನು ಕೊಂಡಾಡಿ ಹರುಷಪಟ್ಟಳವಳು.

ಸೀಮಾ ಕಾರಟಗಿ

Advertisement

Udayavani is now on Telegram. Click here to join our channel and stay updated with the latest news.

Next