ಹೊಸದಿಲ್ಲಿ: ಬಿಜೆಪಿ ಅಧ್ಯಕ್ಷ ಹುದ್ದೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿಸೆಂಬರ್‌ವರೆಗೂ ಮುಂದುವರಿಯುವ ಸಾಧ್ಯತೆಯಿದೆ. ಗುರುವಾರ ನಡೆಯ ಲಿರುವ ಪಕ್ಷದ ಮುಖಂಡರ ಸಭೆಯಲ್ಲಿ ಆಂತರಿಕ ಚುನಾವಣೆಯ ದಿನಾಂಕ ನಿಗದಿಯಾಗಲಿದ್ದು, ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. 2018ರಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಲೋಕಸಭೆ ಚುನಾ ವಣೆ ಮುಗಿಯುವವರೆಗೂ ಪಕ್ಷದ ಅಧ್ಯಕ್ಷರ ಆಯ್ಕೆಯನ್ನು ಮುಂದೂಡಿತ್ತು.
ಇಂದಿನಿಂದ ಸಭೆ: ಅಮಿತ್ ಶಾ ಗುರುವಾರದಿಂದ ಎಲ್ಲಾ ರಾಜ್ಯಗಳ ಪಕ್ಷದ ಮುಖಂಡರ ಸಭೆ ನಡೆಲಿದ್ದಾರೆ. ಚುನಾವಣೆ ಹೊಸ್ತಿಲಲ್ಲಿರುವ ಹರಿಯಾಣ, ಜಾರ್ಖಂಡ ಮತ್ತು ಮಹಾರಾಷ್ಟ್ರ ಮುಖಂಡರೊಂದಿಗೆ ಭಾನು ವಾರ ಮಾತುಕತೆ ನಡೆಸಿದ್ದರು.
Advertisement