Advertisement

Traffic Routes: ಮಂಗಳೂರಿನಲ್ಲಿ ಶೌರ್ಯ ಜಾಗರಣ ಯಾತ್ರೆ… ಸಂಚಾರ ಮಾರ್ಗದಲ್ಲಿ ಬದಲಾವಣೆ…

12:44 PM Oct 09, 2023 | Team Udayavani |

ಮಂಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ಮಂಗಳೂರಿನಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ನಗರದ ಅಂಬೇಡ್ಕ‌ ವೃತ್ತದಿಂದ ಶೌರ್ಯ ಯಾತ್ರಾ ಮೆರವಣಿಗೆ ಪ್ರಾರಂಭವಾಗಿ ನಗರದ ಕದ್ರಿ ಮೈದಾನದಲ್ಲಿ ಸಂಪನ್ನಗೊಳ್ಳಲಿದ್ದು ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ವಾಹನ ಸಂಚಾರದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದಾರೆ.

Advertisement

ಶೌರ್ಯ ಯಾತ್ರಾ ಮೆರವಣಿಗೆ ಸಂಬಂಧ ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ, ಪಿ ವಿ ಎಸ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್‌ ಕಡೆಗೆ, ಕದ್ರಿ ಕಂಬಳ ಜಂಕ್ಷನ್ ಕಡೆಯಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ, ಮಲ್ಲಕಟ್ಟೆ ಕಡೆಯಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕಾರ್ಯಕ್ರಮ ಮುಗಿಯುವವರೆಗೆ ನಿಷೇಧಿಸಲಾಗಿದೆ.

ಬದಲಿ ಮಾರ್ಗ ಇಂತಿದೆ:
– ಪಡೀಲ್ ಮತ್ತು ತಲಪಾಡಿ ಕಡೆಯಿಂದ ಬರುವ ಎಲ್ಲಾ ಕೆ ಎಸ್ ಆರ್ ಟ ಸಿ ಬಸ್ಸುಗಳು ಪಂಪ ವೆಲ್ ಗೆ ಬಂದು ಪಂಪ್ ವೆಲ್ ನಿಂದ ನಂತೂರು, ಕೆ ಪಿ ಟಿ ಮಾರ್ಗ ಮುಖಾಂತರ ಕೆ ಎಸ್ ಆರ್ ಟಿ ಸಿ ಗೆ ಅಂತೆಯೇ ಕೆ ಎಸ್ ಆರ್ ಟಿ ಸಿ ಯಿಂದ ಹೊರ ಹೋಗುವ ಎಲ್ಲಾ ಬಸ್ಸುಗಳು ಕೆ ಪಿ ಟಿ, ನಂತೂರು, ಪಂಪ್ ವೆಲ್ ಮುಖಾಂತರ ಮುಂದುವರಿಯುವುದು.

– ನಂತೂರು ಕಡೆಯಿಂದ ಸ್ಟೇಟ್ ಬ್ಯಾಂಕ್‌ ಕಡೆಗೆ ಬರುವ ಎಲ್ಲಾ ಬಸ್ಸುಗಳು ಹಾಗೂ ಇತರ ವಾಹನಗಳು ಶಿವಭಾಗ್, ಹಾರ್ಟಿಕಲ್ಚರ್, ಬೆಂದೂರು, ಕರಾವಳಿ, ಕಂಕನಾಡಿ ಜಂಕ್ಷನ್ ತಲುಪಿ ಪನ್ನೀರು ರಸ್ತೆ ಮುಖಾಂತರ ಸ್ಟೇಟ್ ಬ್ಯಾಂಕ್ ಕಡೆ ಮುಂದುವರಿಯಬೇಕು.

– ಪಂಪ್ ವೆಲ್ ಕಡೆಯಿಂದ ಸ್ಟೇಟ್ ಬ್ಯಾಂಕ್‌ ಕಡೆಗೆ ಹೋಗುವ ಎಲ್ಲಾ ಬಸ್ಸುಗಳು ಹಾಗೂ ಇತರ ವಾಹನಗಳು ಕಂಕನಾಡಿ ಜಂಕ್ಷನಿಗೆ ಬಂದು ಪನ್ನೀರು ರಸ್ತೆ ಮುಖಾಂತರ ಸ್ಟೇಟ್ ಬ್ಯಾಂಕ್‌ ಕಡೆಗೆ ಮುಂದುವರಿಯುವುದು.

Advertisement

– ಕಾವೂರು, ಬೋಂದೇಲ್‌ ಕಡೆಯಿಂದ ಬರುವ ಬಸ್ಸುಗಳು ಹಾಗೂ ಇತರ ವಾಹನಗಳು ಕೆ ಎಸ್ ಆರ್ ಟಿ ಸಿ ಲಾಲ್ ಭಾಗ್, ಪಿ ವಿ ಎಸ್, ಕೆ ಎಸ್ ಆರ್ ರಸ್ತೆ ಮುಖಾಂತರ ಹಂಪನಾ ಕಟ್ಟೆ ಗೆ ಬಂದು ಸ್ಟೇಟ್ ಬ್ಯಾಂಕ್‌ ಕಡೆಗೆ ಮುಂದುವರಿಯುವುದು.

– ಸ್ಟೇಟ್ ಬ್ಯಾಂಕ್ ಕಡೆಯಿಂದ ಉಡುಪಿ, ಮೂಡಬಿದ್ರೆ ಕಡೆಗೆ ಹೋಗುವ ಎಲ್ಲಾ ಬಸ್ಸು ಹಾಗೂ ಇತರ ವಾಹನಗಳು ಕೆ ಎಸ್ ಆರ್ ರಸ್ತೆ ಮುಖಾಂತರ ಪಿ ವಿ ಎಸ್. ಲಾಲ್ ಭಾಗ್ ಜಂಕ್ಷನ್ ನಿಂದ ಮುಂದಕ್ಕೆ ಉಡುಪಿ ಕಡೆಗೆ ಸಂಚರಿಸುವುದು, ಕೆ ಎಸ್ ಆರ್ ಟಿ ಸಿ, ಕೆ ಪಿ ಟ ಮುಖಾಂತರ ಮೂಡಬಿದ್ರೆ ಕಡೆಗೆ ಸಂಚರಿಸುವುದು. ಅಂತೆಯೇ ಪುತ್ತೂರು, ತಲಪಾಡಿ, ಕಡೆಗೆ ಸಂಚಾರಿಸುವ ಎಲ್ಲಾ ಬಸ್ಸುಗಳು ಹಾಗೂ ಇತರ ವಾಹನಗಳು, ಹಂಪನಕಟ್ಟೆ ಜಂಕ್ಷನ್‌ನಿಂದ ಬಲಕ್ಕೆ ತಿರುಗಿ ಪನ್ನೀರು ರಸ್ತೆ ಮುಖಾಂತರ ಕಂಕನಾಡಿ, ಕರಾವಳಿ ಜಂಕ್ಷನ್ ಮೂಲಕ ಮುಂದುವರಿಯುವುದು.

ಇದನ್ನೂ ಓದಿ: Viral Video: ಕಬಡ್ಡಿ ಅಂಗಳದಲ್ಲಿ ತಂಡಗಳ ನಡುವೆ ಮಾರಾಮರಿ; ಕುರ್ಚಿಗಳು ಪುಡಿ ಪುಡಿ

Advertisement

Udayavani is now on Telegram. Click here to join our channel and stay updated with the latest news.