Advertisement
ಪ್ರತಿಮೆಸೇನಾಪುರ ಗ್ರಾಮದ ಶಿಲ್ಪಿ ಶ್ರೀತಿನ್ ಶೆಟ್ಟಿಗಾರ್ ಬಂಟ್ವಾಡಿ ಅವರು ಮೈಸೂರಿನಲ್ಲಿ ನಿಂತ ಭಂಗಿಯಲ್ಲಿ ಇರುವ ಶಾಸ್ತ್ರಿಗಳ ಈ ಶಿಲ್ಪವನ್ನು ನಿರ್ಮಿಸಿದ್ದು ಸುಮಾರು 15 ಲಕ್ಷ ರೂ. ವೆಚ್ಚವಾಗಿದೆ. ಪ್ರತಿಮೆಯ ವೆಚ್ಚವನ್ನು ಈ ಹಿಂದೆ ಪ್ರತಿಮೆ ನೀಡಿದ್ದ ಇಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟರ ಹೆಸರಿನಲ್ಲಿ ಎಸ್ ಎಸ್‌ಎನ್ ಕನ್‌ಸ್ಟ್ರಕ್ಷನ್ ಕಂಪೆನಿ ನೀಡುವ ಭರವಸೆ ನೀಡಿದೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಯತ್ನದಿಂದ ಇದು ಸಾಕಾರವಾಗಿದೆ. ಪೂರ್ಣ ಪ್ರಮಾಣದ ಪ್ರತಿಮೆ ಇಡುವುದೋ, ಈ ಹಿಂದೆ ಇದ್ದಂತೆ ತಲೆಯ ಭಾಗ ಮಾತ್ರ ಇಡುವುದೋ ಎಂದು ಚರ್ಚೆಗೀಡಾಗಿತ್ತು. ಕೊನೆಗೆ ಶಾಸಕರ ಮಧ್ಯಸ್ಥಿಕೆಯಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ.
ಇನ್ನು ವೃತ್ತದ ಸುತ್ತ ತಡೆಬೇಲಿ, ಉದ್ಯಾನವನ ನಿರ್ಮಾಣ ಆಗಬೇಕಿದೆ. ಹೈಮಾಸ್ಟ್ ದೀಪದ ಸ್ಥಳಾಂತರ ನಡೆದಿದೆ. ದೀಪ ಹಾಗೂ ಕಂಬ ಕೂರಿಸುವ ಕೆಲಸ ಇನ್ನಷ್ಟೇ ಆಗಬೇಕಿದೆ. ಪಂಚಾಂಗ ನಿರ್ಮಿಸಲಾಗಿದೆ. ಕಾಮಗಾರಿಗೂ ಮುನ್ನ ಇದನ್ನು ಮೈಸೂರು ಜಯಚಾಮರಾಜೇಂದ್ರ ವೃತ್ತದ ಮಾದರಿಯಲ್ಲಿ ವಿನ್ಯಾಸಗೊಳಿಸುವ ಇರಾದೆಯಿತ್ತು. ಅನಂತರ ವಿನ್ಯಾಸ ಬದಲಾಯಿತು. ಸಿಮೆಂಟ್ ಬದಲು ಕಲ್ಲು ಬಳಸಲಾಯಿತು. ನಿಗದಿ ಪಡಿಸಿದ ಮೊತ್ತವೂ ಹೆಚ್ಚಾಯಿತು. ಅದು ಸಾಮಾಜಿಕ ಜಾಲತಾಣದಲ್ಲಿ ಬಂದು ಪುರಸಭೆ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಯಿತು. ಒಂದಷ್ಟು ವಿವಾದ, ಟೀಕೆ ಎಲ್ಲ ಆಯಿತು. ಒಂದೇ ಬಜೆಟ್ ತೋರಿಸುವ ಬದಲು ತುಂಡು ತುಂಡು ಕಾಮಗಾರಿಗೆ ಮೊತ್ತ ತೋರಿಸಲಾಯಿತು.
Related Articles
ಕುಂದಾಪುರ ಶಾಸ್ತ್ರಿ ಸರ್ಕಲ್, ಶಾಸ್ತ್ರಿ ಪಾರ್ಕ್ ಹೆಸರು ವಾಸಿ. ಕುಂದಾಪುರಕ್ಕೆ ಎಲ್ಲಿಂದಲೇ ಬಂದರೂ ಬಸ್ ನಿಂದಿಳಿಯಲು ಸೂಚನೆ ಕೊಡುವುದು ಇದೇ ವೃತ್ತವನ್ನು. ಯಾವುದೇ ಸ್ಥಳದ ಗುರುತು ಪರಿಚಯ ಹೇಳಬೇಕಾದರೂ ಶಾಸ್ತ್ರಿ ಸರ್ಕಲನ್ನು ಹೆಸರಿಸುತ್ತಾರೆ. ಇಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟರ ಹೆಸರಿನಲ್ಲಿ ಎಸ್‌ಎಸ್‌ಎನ್ ಕನ್‌ಸ್ಟ್ರಕ್ಷನ್ ಕಂಪೆನಿ ನೀಡಿದ ಲಾಲ್‌ಬಹದ್ದೂರ್ ಶಾಸ್ತ್ರಿಗಳ ಸುಂದರ ಪ್ರತಿಮೆಯಿತ್ತು. ಅದೆಷ್ಟೋ ವರ್ಷಗಳಿಂದ ಹಸುರು ಹುಲ್ಲಿನ ನಡುವೆ
ಶಿಲೆಯ ಮೇಲೆ ಕೂರಿಸಲ್ಪಟ್ಟ ಶಾಸ್ತ್ರಿ ವಿಗ್ರಹವುಳ್ಳ ಸರ್ಕಲ್ ಈಚಿನ ದಿನಗಳಲ್ಲಿ ಬೀಡಾಡಿಗಳ ತಾಣವಾಗಿತ್ತು. ಈಗ ಇವರೆಲ್ಲ ಫ್ಲೈಓವರ್ ಅಡಿಗೆ ಸ್ಥಳಾಂತರಗೊಂಡಿದ್ದಾರೆ!
Advertisement
ಹೊಸ ಸರ್ಕಲ್ಶಾಸ್ತ್ರಿಗಳ ಪ್ರತಿಮೆಗೂ ಸೂಕ್ತ ಭದ್ರತೆ ಇರಲಿಲ್ಲ. ಶಾಸ್ತ್ರಿ ಸರ್ಕಲ್‌ನ ಸೌಂದರ್ಯ ಹೆಚ್ಚಿಸಬೇಕೆಂದು ಪುರಸಭೆ ಆಡಳಿತ ಇಲ್ಲಿ ಕಾಮಗಾರಿ ನಡೆಸಿದೆ. ವೃತ್ತ ರಚನೆಯಾಗಿದ್ದು ಮೂರ್ತಿಯೂ ಬಂದಿದೆ. ಇನ್ನು ತಡೆಬೇಲಿ, ಉದ್ಯಾನವನ ಆದಲ್ಲಿಗೆ ಶಾಸ್ತ್ರಿ ಸರ್ಕಲ್‌ಗೆ ಹೊಸ ಕಳೆ ಬರಲಿದೆ. ಸುಂದರ ಕುಂದಾಪುರ ಕಲ್ಪನೆಗೆ ಪೂರಕ ಮನಃಸ್ಥಿತಿ ನಿರ್ಮಾಣವಾಗುತ್ತದೆ ಎಂದು ಪುರಸಭೆ ಆಡಳಿತ ಭಾವಿಸಿದೆ. ಈ ನಿಟ್ಟಿನಲ್ಲಿ ಪುರಸಭೆ ವೃತ್ತ ನಿರ್ಮಾಣ ಮಾಡಿದೆ.